ಮುನಿರಾಬಾದ್ ಪಿಎಸ್ಐ ಸುಪ್ರೀತ್ ಸೇರಿ 135 ಅಧಿಕಾರಿಗಳಿಗೆ ಸಿಎಂ ಮೆಡಲ್


ಕೊಪ್ಪಳ : 2021 ನೇ ಸಾಲಿನ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗುವ ಮುಖ್ಯಮಂತ್ರಿಗಳ ಪದಕ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯದ ಒಟ್ಟು 135 ಪೋಲಿಸರಿಗೆ/ಅಧಿಕಾರಿಗಳಿಗೆ ಪದಕ ಪ್ರಕಟಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೋಲಿಸ್ ಠಾಣೆ ಪಿಎಸ್ಐ ಸುಪ್ರೀತ್ ಎ, ಪುರಸ್ಕೃತರಾದ ಯಲಪ್ಪ ಹೆಬಸೂರು,ವಿಶೇಷ ಐಆರ್ ಎಸ್ ಐ,ಐಆರ್ ಬಿ ಮುನಿರಾಬಾದ. ಮತ್ತು ಬಿಎಸ್ ಚನ್ನಳ್ಳಿ, ವಿಶೇಷ ಆರ್ ಹೆಚ್ ಸಿ 25 ,ಕೆ ಎಸ್ ಆರ್ ಪಿ ತರಬೇತಿ ಶಾಲೆ , ಮುನಿರಾಬಾದ್ ಅವರಿಗೆ ದೊರಕಿದೆ. ಪದಕ ಪುರಸ್ಕೃತರಿಗೆ ಜಿಲ್ಲೆಯ ಗಣ್ಯರು, ಹಿರಿಯ ಪೋಲಿಸ್ ಅಧಿಕಾರಿಗಳು, ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
cm medal police officers staff
List of Officers
CM medal list

Please follow and like us: