ಬಂಡವಾಳಶಾಹಿ ಪರ ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸಲು ಆಗ್ರಹಿಸಿ ಅಖಿಲ ಭಾರತ ಸರ್ವತ್ರಿಕ ಮುಷ್ಕರ .
ಎಐಯುಟಿಯುಸಿ ಸಂಯೋಜಿತ ಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕೊಪ್ಪಳ ಈಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಮಾಡಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ ಆಶಾ ಸಂಘದ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ಮಾತನಾಡುತ್ತಾ ದೇಶದಲ್ಲಿ ಒಂದು ಕೋಟಿಗಿಂತಲೂ ಹೆಚ್ಚು ಮಹಿಳೆಯರು ಸರ್ಕಾರದ ಸ್ಕೀಮ್ ನೌಕರರಾಗಿ ಕೇವಲ ಗೌರವಧನದಲ್ಲಿ ದುಡಿಯುತ್ತಿದ್ದಾರೆ. ಇವರ ದುಡಿತಕ್ಕೆ ತಕ್ಕಂತೆ ಸರಕಾರ ವೇತನ ಹೆಚ್ಚು ಮಾಡುತ್ತಿಲ್ಲ. ಹಿಂದೆ ಹಲವಾರು ಬಾರಿ ಹೋರಾಟ ಮನವಿ ಪತ್ರಗಳನ್ನು ಸಲ್ಲಿಸಿದರು ಸರಕಾರ ಮಾತ್ರ ಕೇವಲ ಗೌರವಧನದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಅತ್ಯಂತ ಮುಖ್ಯವಾದ ಆರೋಗ್ಯ,ಶಿಕ್ಷಣ, ಮಹಿಳಾ ಸಬಲೀಕರಣ , ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ 21 ಸಾವಿರ ವೇತನ ಹೆಚ್ಚಿಸಬೇಕೆಂದು ಸಂಘದ ಮನವಿಯಾಗಿದೆ. ರಾಜ್ಯ ಸರ್ಕಾರ ಮಾಸಿಕ ನಿಶ್ಚಿತ ಗೌರವಧನವನ್ನು ಕನಿಷ್ಠ ರೂ.2000 ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದ್ದರೂ , ಕಡೆಗೆ ರೂ .1000 ವಾದರೂ ಹೆಚ್ಚಳ ಮಾಡಿರುವುದನ್ನು ಸಂಘದಿಂದ ಸ್ವಾಗತಿಸುತ್ತೇವೆ . ಆದರೆ ಸಂಘದ ರಾಜ್ಯ ಸಮಿತಿಯಿಂದ ದಿನಾಂಕ : 16 / 11 / 2022 ರಂದು ಮತ್ತು ದಿ : 09-02-2022ರಂದು ಸರ್ಕಾರ ಮತ್ತು ಇಲಾಖೆಗೆ ಸಲ್ಲಿಸಿರುವ ಈ ಮೇಲಿನ ಉಲ್ಲೇಖಿತ ಮನವಿ ಪತ್ರದಲ್ಲಿರುವ ಇತರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಕ್ರಮಗಳನ್ನು ಘೋಷಣೆ ಮಾಡದೆ ಕಡೆಗಣಿಸಿರುವುದಕ್ಕೆ ಸಂಘದಿಂದ ಸಮಸ್ತ ಆಶಾಗಳ ಪ್ರತಿಭಟನೆಯನ್ನು ಈ ಪತ್ರದ ಮೂಲಕ ದಾಖಲಿಸಲು ಇಚ್ಚಿಸುತ್ತೇವೆ . ಅಲ್ಲದೆ ಬಜೆಟ್ ಪೂರ್ವದಲ್ಲಿ ಸಲ್ಲಿಸಿರುವ ಈ ಕೆಳಗಿನ ಬೇಡಿಕೆಗಳ ಕುರಿತು ಚರ್ಚಿಸಿ ಸೂಕ್ತ 0ಪರಿಹಾರ ಕಂಡುಕೊಳ್ಳಲು ಆಶಾ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ಕರೆಯಬೇಕು ಹಾಗೂ ಕೂಡಲೇ ಸೂಕ್ತ ಪರಿಹಾರ ಕ್ರಮಗಳನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು : 1) ಕನಿಷ್ಠ ಗೌರವಧನ ರೂ.12000 ಹೆಚ್ಚಿಸಬೇಕು.
2) ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು.
3) ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.
4) ಆಶಾ ಅಂಗನವಾಡಿ ಬಿಸಿಊಟ ನೌಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು.
5) ಗುತ್ತಿಗೆ ಹೊರಗುತ್ತಿಗೆ ಮತ್ತು ಇತರ ಅಸಂಘಟಿತ ವಲಯದ ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸಬೇಕು ಇತ್ಯಾದಿ.