ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ನಾಮ ನಿರ್ದೇಶನ ಸದಸ್ಯರಾಗಿ ಪ್ರಭಾಕರ ಬಡಿಗೇರ ನೇಮಕ

Kannadanet NEWS

ಕೊಪ್ಪಳ : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 02 ವರ್ಷಗಳ ಅವಧಿಗೆ ಜಿಲ್ಲಾ ಮಟ್ಟದ ಅಧಿಕಾರೇತರ ನಾಮ ನಿರ್ದೆಶನ ಸದಸ್ಯರನ್ನಾಗಿ ಪ್ರಭಾಕರ ತಂದೆ ರಾಮಣ್ಣ ಬಡಿಗೇರ ಸಾ.ಗುಳದಳ್ಳಿ ಇವರನ್ನು ನೇಮಿಸಿ ಜಿಲ್ಲಾ ಪಂಚಾಯತಿ ಸಿಇಓ ಫೌಜೀಯಾ ತರನಂ ಅವರು ಆದೇಶ ಹೊರಡಿಸಿದ್ದಾರೆ.

ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವಿವಿಧ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಗೆ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆಮಾಡಬೇಕಾಗಿದ್ದು, ಈ ಸಂಬಂಧ ಸರ್ಕಾರಿ ಆದೇಶದನ್ವಯ ಪತ್ರಿಕಾ ಪ್ರಕಟಣೆ ಹೊರಡಿಸಿ ಅರ್ಜಿಗಳನ್ನು ಸ್ವೀಕರಿಸಿ ಅರ್ಜಿದಾರರ ಅರ್ಹತೆಯನ್ನು ಪರಿಶೀಲಿಸಿದ್ದು, 05 ಅರ್ಜಿಗಳ ಪೈಕಿ 02 ಅರ್ಜಿದಾರರು ಸರ್ಕಾರವು ನಿಗಧಿಪಡಿಸಿರುವ ಮಾನದಂಡಗಳನ್ವಯ ಅರ್ಹತೆಯನ್ನು ಹೊಂದಿರುವುದರಿಂದ ನಿಗಮದ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರನ್ನು ಪ್ರಭಾಕರ ಆರ್. ಬಡಿಗೇರ ಹಾಗೂ ಇನ್ನೋರ್ವರನ್ನು ವಿಶೇಷ ಆಹ್ವಾನಿತರನ್ನಾಗಿ ಮುತ್ತಣ್ಣ ಎಂ.ಬಡಿಗೇರ ಇವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಿ ಜಿಲ್ಲಾ ಪಂಚಾಯತ ಸಿಇಓ ಅವರು ಆದೇಶ ಹೊರಡಿಸಿದ್ದಾರೆ. ವಿಶ್ವಕರ್ಮ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಾತ್ವೀಕ್ ಅವರು ಇಂದು ಸಂಬಂಧಿಸಿದವರಿಗೆ ಆದೇಶ ಪತ್ರ ವಿತರಿಸಿದರು.

Please follow and like us: