ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿಗೆ ೨೦ ವರ್ಷ ಶಿಕ್ಷೆ

ಕೊಪ್ಪಳ ಕನ್ನಡನೆಟ್ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಗೆ ೨೦ ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದಲ್ಲಿ ಆರೋಪಿ ಬಸವರಾಜ ತಂದೆ ಸತ್ಯಪ್ಪ ದೊಡ್ಡಮನಿ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ ( ಪೋಕ್ರೋ ) ಶಂಕರ ಎಂ . ಜಾಲವಾದಿ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ

ಆರೋಪಿ ಬಸವರಾಜ್ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಅಪಹರಣ ಮಾಡಿಕೊಂಡು ಬೇರೆ ಊರಿಗೆ ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿಟ್ಟು ಅವಳಿಗೆ ಬಲತ್ಕಾರದ ಸಂಭೋಗ ಮಾಡಿದ್ದು ಆರೋಪವು ತನಿಖೆಯಲ್ಲಿ ಸಾಭಿತಾಗಿದ್ದರಿಂದ ಆರೋಪಿತನ ವಿರುದ್ಧ ಮೌನೇಶ್ವರ ಮಾಲಿ ಪಾಟೀಲ್ , ಪಿ.ಐ ಕೊಪ್ಪಳ ಮಹಿಳಾ ಪೋಲಿಸ ಠಾಣೆ ಇವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು .

ಪ್ರಕರಣದಲ್ಲಿ ಆರೋಪಿ ಬಸವರಾಜ ತಂದೆ ಸತ್ಯಪ್ಪ ದೊಡ್ಡಮನಿ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ . 20,000 ಗಳ ದಂಡವನ್ನು ವಿಧಿಸಿ ದಂಡದ ಮೊತ್ತದಲ್ಲಿ ರೂ .10,000 ಗಳನ್ನು ಭಾದಿತಳಿಗೆ ಪರಿಹಾರ ರೂಪದಲ್ಲಿ ವಿತರಿಸಲು ಆದೇಶಿಸಿ ಶಂಕರ ಎಂ . ಜಾಲವಾದಿ ಹೆಚ್ಚುವರಿ ಜಿಲ್ಲಾ ಹಾಗೂ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು ( ಪೋಕ್ಸೋ) ಕೊಪ್ಪಳ ಇವರು ತೀರ್ಪು ಹೊರಡಿಸಿದ್ದಾರೆ

. ಸರ್ಕಾರದ ಪರವಾಗಿ ಶ್ರೀಮತಿ ಗೌರಮ್ಮ ದೇಸಾಯಿ ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು .

Please follow and like us: