ಸಿಎಂ ಬೊಮ್ಮಾಯಿ,ಮಂತ್ರಿಗಳು ಸಿನಿಮಾ ಟಿಕೆಟ್ ಮಾರುವುದರಲ್ಲಿ ಬಿಜಿಯಾಗಿದ್ಧಾರೆ.-ಶಿವರಾಜ್ ತಂಗಡಗಿ

ಕನ್ನಡನೆಟ್ ನ್ಯೂಸ್ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಅವರ ಸಚಿವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ. ಸಿನಿಮಾ ನೋಡೋವದರಲ್ಲಿ ,ಟಿಕೇಟ್ ಮಾರುವುದಲ್ಲಿ ಬಿಜಿಯಾಗಿದ್ದಾರೆ ಎಂದು ಮಾಜಿ ಸಚಿವ ಡಿಸಿಸಿ ಅಧ್ಯಕ್ಷ ಶಿವರಾಜ್ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ಬಿಜೆಪಿಯವರಿಗೆ ಅಭಿವೃದ್ದಿಯ ಚಿಂತನೆಯಿಲ್ಲ. ಮುಂದಿನ ವರ್ಷ ಚುನಾವಣೆ ಬರುತ್ತಿದೆ ಈ ಹಿನ್ನೆಲೆಯಲ್ಲಿ ಬಿಜೆಪಿಯವರು ಮನಸ್ಸನ್ನು ಕೆಡಿಸುವ ಜನರಲ್ಲಿ ವೈಮನ್ಸು ಮೂಡಿಸಲು ಕೆಲಸ ಮಾಡುತ್ತಿದೆ. ಹಿಂದೂ ಮುಸ್ಲಿಂ ಎಂದು ಭೇದಭಾವ ಮಾಡುವ ಮೂಲಕ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನ ಬುದ್ದಿವಂತರು ಉತ್ತರ ಪ್ರದೇಶ ಮತ್ತು ಉತ್ತರಖಂಡದ ಜನರಲ್ಲಿ ಮಾಡಿದಂತೆ ಮನಸ್ಸು ಕೆಡಿಸಲು ಯತ್ನಿಸಿದರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಅವರಿಗೆ ಅಂಜನಾದ್ರಿ ನೆನಪಾಗಿದೆ. 100 ಕೋಟಿಯಲ್ಲಿ ಅಂಜನಾದ್ರಿ ಅಭಿವೃದ್ದಿ ಮಾಡುವುದಕ್ಕಾಗುತ್ತಾ. ಅವರಿಗೆ ಅಭಿವೃದ್ದಿ ಯೋಜನೆಗಳ ಮೇಲೆ ಚುನಾವಣೆಗೆ ಹೋಗುವ ದೈರ್ಯ ತಾಕತ್ ಇಲ್ಲ. ಕಾಶ್ಮೀರ್ ಫೈಲ್ಸ್ ತೋರಿಸಲು ಹೊರಟವರಿಗೆ ನಾಚಿಕೆಯಾಗಬೇಕು. ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರ ತೆಗೆದು ಕಾಶ್ಮೀರ್ ಪೈಲ್ಸ್ ತೋರಿಸಲು ಮುಂದಾಗಿದ್ಧಾರೆ. ಪುನಿತ್ ರಾಜಕುಮಾರ್ ಕರ್ನಾಟಕ ರತ್ನ. ಅವರ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿತ್ವದ ನಟನ ಸಿನೆಮಾ ತೆಗೆದು ಕಾಶ್ಮೀರ ಪೈಲ್ಸ್ ತೋರಿಸಲು ಮುಂದಾದ್ರೆ ಬಿಜೆಪಿಯನ್ನು ರಾಜ್ಯದಿಂದಲೇ ಕಿತ್ತೊಗೆಯುತ್ತೇವೆ ಎಂದು ಹೇಳಿದ್ದಾರೆ. ನಿಜಕ್ಕೂ ಆ ಕೆಲಸ ಮಾಡಬೇಕಿದೆ. ಕಾಶ್ಮೀರ ಪೈಲ್ಸ್ ಗೆ ಸಬ್ಸಿಡಿ ನೀಡಿದ್ದಾರೆ. ಆದರೆ ಜೇಮ್ಸ್ ಗೆ ನೀಡಿಲ್ಲ. ಜೇಮ್ಸ್ ಪುನಿತ್ ರಾಜಕುಮಾರರ ಕೊನೆಯ ಸಿನಿಮಾ ಅದಕ್ಕೆ ಅವಕಾಶ ಕೊಡಬೇಕು,ಚಿತ್ರಕ್ಕೂ ಸಬ್ಸಿಡಿ ನೀಡಬೇಕು. ಕೇವಲ ಕಾಶ್ಮೀರ ಪೈಲ್ಸ್ ಅಷ್ಟೇ ಅಲ್ಲ ಗುಜರಾತ್ ಪೈಲ್ಸ್,ಗೋದ್ರಾ ಪೈಲ್ಸ್ ಚಿತ್ರಗಳನ್ನು ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ 1,73,859 ಜನರ ಸದಸ್ಯತ್ವ ಮಾಡಿಸಲಾಗಿದ್ದು 31ರೊಳಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲಾಗುವುದು. ನಾಳೆ 24ರಂದು ಕೊಪ್ಪಳಕ್ಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಇದರ ಬಗ್ಗೆ ಪರಿಶೀಲನೆ ಮಾಡಲಿದ್ಧಾರೆ. ಗಂಗಾವತಿ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿಯವರ ನೇತೃತ್ವದಲ್ಲಿ 60 ಸಾವಿರಕ್ಕೂ ಹೆಚ್ಚು ಸದಸ್ಯತ್ವ ಮಾಡುವ ಮೂಲಕ ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾರೆ . ನಾಳೆ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಶರಣಬಸವರಾಜ, ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ವಕ್ತಾರ ರವಿ ಕುರಗೋಡ ಉಪಸ್ಥಿತರಿದ್ದರು.
Watch Complete Video

Please follow and like us: