ಅನಾಮಧೇಯ ಶವದ ವಾರಸುದಾರರ ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ-ಹೊಸಪೇಟೆ ರಸ್ತೆಯ ಕನಕಾಪುರ ತಾಂಡ ಹತ್ತಿರ ಮಾ.11 ರಂದು ಅಂದಾಜು 50-55 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಅನಾರೋಗ್ಯ, ನಿತ್ರಾಣ ಹಾಗೂ ಸೂಕ್ತ ಚಿಕಿತ್ಸೆ ಇಲ್ಲದೆ ರಸ್ತೆಯಲ್ಲೇ ಬಿದ್ದಿದ್ದು, ಬಲಗಾಲ ಬೆರಳಿಗೆ ಮತ್ತು ಎಡಗಡೆಯ ಪಕ್ಕೆಗೆ ತರಚಿದ ಗಾಯದಿಂದ ಮಾ.11 ರಂದು ಮೃತಪಟ್ಟಿದ್ದಾರೆ. ಇದಕ್ಕೆ ಸಂಬAಧಿಸಿದAತೆ ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸ ಪತ್ತೆಯಾಗದ ಕಾರಣ ಹಾಗೂ ಇಲ್ಲಿಯವರೆಗೆ ಮೃತ ವ್ಯಕ್ತಿಗೆ ಸಂಬAಧಿಸಿದವರು ಯಾರೂ ಬರದೇ ಇರುವುದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸುವ ಅವಶ್ಯಕತೆಯಿದೆ.
ಆದ್ದರಿಂದ ಮೃತ ವ್ಯಕ್ತಿಯ ಗುರುತು, ಹೆಸರು ಮತ್ತು ವಿಳಾಸ ತಿಳಿದಿದ್ದಲ್ಲಿ ಅಥವಾ ಮೇಲೆ ತಿಳಿಸಿದ ವಯೋಮಾನದ ವ್ಯಕ್ತಿ ಕಾಣೆಯಾಗಿದ್ದಲ್ಲಿ ಮುನಿರಾಬಾದ ಪೊಲೀಸ್ ಠಾಣೆ ದೂ.ಸಂ: 08539-270333, ಕೊಪ್ಪಳ ಎಸ್.ಪಿ ದೂ.ಸಂ: 08539-230111, ಕೊಪ್ಪಳ ಡಿ.ಎಸ್.ಪಿ ದೂ.ಸಂ: 08539-222433, ಕೊಪ್ಪಳ ಗ್ರಾಮೀಣ ವೃತ್ತದ ಸಿಪಿಐ ದೂ.ಸಂ: 08539-221333 ಸಂಪರ್ಕಿಸಿ ಮಾಹಿತಿ ನೀಡುವಂತೆ ಮುನಿರಾಬಾದ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕಕರು (ಕಾ&ಸು)

ತಿಳಿಸಿದ್ದಾರೆ.

Please follow and like us: