ಅಭಿಮಾನಿಗಳ ಅಕ್ಕರೆಯ ನಟ, ದೇವತಾ ಮನುಷ್ಯ ಪುನೀತ್

ರಾಜೇಶ ಜೀ ಬಳ್ಳಾರಿ

ಮಾಸದ ಮುಗುಳನಗೆ ಹೊತ್ತ,ಅಭಿಮಾನಿಗಳ ಅಕ್ಕರೆಯ ನಟ, ದೇವತಾಮನುಷ್ಯ ಡಾ! ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಯ ಹಾಗೂ ಹುಟ್ಟು ಹಬ್ಬದ ನಿಮಿತ್ತ ಹಾದಿ೯ಕ ಶುಭಾಶಯ ಕೋರುತ್ತಾ ಅಪ್ಪುರವರ ಬದುಕಿನ ಅನಾವರಣದ ಒಂದು ಓರೇನೋಟ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ,ಜೀವನದಲ್ಲಿ ಊಹೆಗೆ ನಿಲುಕದ ಘಟನೆಗಳು ಬಂದು ಅಪ್ಪಳಿಸಿ ಬದುಕಿನಲ್ಲಿ ದುಸ್ತರವಾಗಿ ಕಾಡುವ ಕರಾಳ ಘಟನೆಗಳಿಂದ ಬದುಕು ಇಷ್ಟೇನಾ ಎಂದು ಸೃತಿಪಟಲದ ಮುಂದೆ ಬಂದಾಗ ಮನಸ್ಸಿಗೆ ಬಹಳ ನೋವಾಗುತ್ತದೆ, ಇಂತಹ ಒಂದು ಕರಾಳ ಘಟನೆ 2021ರ ಅಕ್ಟೋಬರ್ 29 ಶುಕ್ರವಾರದಂದು ಬರಸಿಡಿಲಿನಂತೆ ಬಂದು ಅಪ್ಪಳಿಸಿತು ಅದೇನೆಂದರೆ ನಮ್ಮ ಕನ್ನಡ ಚಿತ್ರರಂಗದ ಧ್ರುವತಾರೆ ಪವರ್ ಸ್ಟಾರ್ ಪುನೀತ್ ಸರ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಇಡಿ ಮನಕುಲದ ಜನತೆ ತಲ್ಲಣ ಗೊಂಡಿತು, ಅದರಲ್ಲೂ ಕನ್ನಡ ನಾಡು ಮತ್ತು ಕನ್ನಡ ಸಿನಿಲೋಕಕ್ಕೆ ಕರಾಳ ಕಪ್ಪು ಮೋಡ ಆವತರಿಸಿ ಕತ್ತಲು ತುಂಬಿಕೊಂಡು ಪ್ರತಿ ಮನೆಮನಗಳ ಹೃದಯವೇ ಒಡೆದುಚೂರಾಗಿ ಹೋಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ,ಪುನೀತ್ ರಾಜಕುಮಾರ ಅವರು ದೊಡ್ಮನೆ ಕುಟುಂಬದ ಕಿರಿಯ ಮಗನಾಗಿ ಹಿರಿಯರಲ್ಲಿ ಹಿರಿಯನಾಗಿ ಕಿರಿಯರಲ್ಲಿ ಕಿರಿಯನಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಮೇರುನಟರಾದ ಡಾ! ರಾಜಕುಮಾರ ಅವರಂತೆ ಉತ್ತುಂಗದ ಸ್ಥಾನದಲ್ಲಿ ರಾರಾಜಿಸಿ ಕೋಟ್ಯಾಂತರ ಅಭಿಮಾನಿಗಳ ಮನೆಮನಗಳ ಹೃದಯಗಳ ಮನಸ್ಸು ಗೆದ್ದು ಅತಿ ಹೆಚ್ಚು ಅಭಿಮಾನಿಗಳ ಬಳಗ ಹೊಂದಿದ ಹೃದಯವಂತ ನಟನಾದ ಪುನೀತ್ ರಾಜಕುಮಾರ್ 47 ರ ಹರೆಯದಲ್ಲೂ 20 ರ ನವ ತರುಣನಂತೆ ಕಾಣುವ ಆಕಷ೯ಕ ಮುಖಭಾವ ಎತ್ತರದ ನಿಲುವು ಮೈಮಾಟ ಮಾಸದ ಮುಗಳ್ನಗೆ.ಹೊತ್ತು ಚಂದನವನದಲ್ಲಿ ತನ್ನ ವೈವಿಧ್ಯಮಯ ನೃತ್ಯ ಹಾಗೂ ಸುಮಧರವಾದ ಹಾಡುಗಳ ಮೂಲಕ ಮತ್ತು ಸಾಹಸ ಮಯ ಸ್ಟಂಟ್ ಮೂಲಕ ಹಾಗೂ ಅತ್ಯುತ್ತಮವಾದ ಪಂಚಿಂಗ್ ಡೈಲಾಗ್ ಗಳನ್ನು ಹೇಳುತ್ತಾ ರಂಜಿಸುತ್ತಾ ಕನ್ನಡ ಚಿತ್ರ ರಂಗದ ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದ ಈ ನಾಡು ಕಂಡ ಅದ್ಬುತ ನಾಯಕ ನಟ ಮೇಲಾಗಿ ಕತ್ತಲು ತುಂಬಿದ ಅದೆಷ್ಟೋ ಕುಟುಂಬಗಳ ಬದುಕಿನಲ್ಲಿ ಬೆಳಕಾಗಿ ಸೂಯ೯ನ ಹೊಂಗಿರಣದಂತೆ ಪ್ರಜ್ವಲಿಸಿ ಮಿಂಚಿ ಮಾಯಾವಾಗಿದ್ದನ್ನು ಯಾರು ಕೂಡ ನಂಬಲು ಕಷ್ಟ ಸಾದ್ಯ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ,ಅಭಿಮಾನಿಗಳ ಅಕ್ಕರೆಯ ನಟನಾದ ದೇವತಾ ಮನುಷ್ಯ ಕನ್ನಡ ನಾಡು ಕಂಡ ಮೇರುನಟ ಅಪ್ರತಿಮ ಕಲಾವಿದ, ನಟಸಾವ೯ಭೌಮ ಡಾ! ರಾಜಕುಮಾರ್ ಅವರ ಕಿರಿಯ ಮಗನಾದ ಪುನೀತ ರಾಜಕುಮಾರ್ ತಂದೆಗೆ ತಕ್ಕ ಮಗನಾಗಿ ದೊಡ್ಮನೆಯ ಕುಡಿಯಾಗಿ ಪ್ರೇಮದ ಕಾಣಿಕೆಯ ಚಿತ್ರದ ಮೂಲಕ ಬಾಲನಟನಾಗಿ ಬೆಳ್ಳಿತೆರೆಗೆ ಪ್ರಾದಪ೯ಣೆ ಮಾಡಿ ಬಾಲ ನಟನಿಂದ ಹಿಡಿದು ನಾಯಕ ನಟನಾಗಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಪುನೀತ್ ರಾಜಕುಮಾರ್ ಸಮಾಜದಲ್ಲಿ ನೊಂದು ಬೆಂದು ಬಡತನವೆಂಬ ಕತ್ತಲು ತುಂಬಿದ ಅದೆಷ್ಟೋ ಕುಟುಂಬ ಗಳಿಗೆ ಬೆಳಕಾದವರು, ಪುನೀತ ರಾಜಕುಮಾರ ಅತಿ ಶ್ರೀಮಂತ ಸೌಜನ್ಯದ ಯುವನಟನಾಗಿ ನಿರಂತರ ಹತ್ತು ಚಲನಚಿತ್ರಗಳು ಶತ ದಿನೋತ್ಸವ ಕಂಡ ಸಾಧಕರು, ಹಾಗೂ ಪುನೀತ್ ರಾಜಕುಮಾರ್ ನಾಯಕ ನಟನಾಗಿ ನಟಿಸಿದ ಹಲವು ಚಿತ್ರಗಳು ಬ್ಲಾಕ್ ಬ್ಲಾಸ್ಟರ ಹಿಟ್ ಚಿತ್ರಗಳಾಗಿ ಮಿಂಚಿ ನಿರಂತರವಾಗಿ ಒಂದು ವಷ೯ ಹಲವಾರು ಚಿತ್ರ ಮಂದಿರಗಳಲ್ಲಿ ಅತ್ಯುತ್ತಮ ಪ್ರದಶ೯ನ ಕಂಡು ಅಭಿಮಾನಿಗಳ ಪಾಲಿನ ಪ್ರೀತಿಯ ನೆಚ್ಚಿನ ನಾಯಕ ನಟನಾಗಿ ಮತ್ತು ವಂಶಿ ಚಿತ್ರದ ಮೂಲಕ ಮತ್ತೊಮ್ಮೆ ಯಶೋಗಾನವನ್ನು ಕಂಡ ಅದ್ಬುತ ನಟ, “ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು” ಎಂದು ಹಾಡಿದ ಬಾಲಗಾಯಕನಿಂದ ಅಪ್ಪು ಚಿತ್ರದ ಗಾಯಕನವರೆಗೆ, ಕನ್ನಡದ ಕೋಟ್ಯಾಧಿಪತಿಯ ಮೂಲಕ ತನ್ನ ಮನೋಜ್ಞ ಅಭಿನಯದ ಪ್ರೀತಿಯ ಮಾತುಗಳಿಂದ ರಸಪ್ರಶ್ನೆ ಕಾಯ೯ಕ್ರಮಗಳನ್ನು ಖಾಸಗಿ ವಾಹಿನಿಯ ಮೂಲಕ ನೆಡಸಿ ಕೊಟ್ಟು ಅಭಿಮಾನಿಗಳ ಆರಾಧಕರಾಗಿ, ಸತತವಾಗಿ 2002 ರಿಂದ 2021 ರವರೆಗೆ ಅಪ್ಪು, ಅಭಿ, ವೀರಕನ್ನಡಿಗ, ಮೌಯ೯, ಆಕಾಶ, ಅಜಯ್,ಅರಸು, ಮಿಲನ, ವಂಶಿ ,ರಾಮ್, ಜಾಕಿ ,ಹುಡುಗರು, ಮೈತ್ರಿ, ಪೃಥ್ವಿ ಅಂಜನಿಪುತ್ರ, ನೀನೆ ರಾಜಕುಮಾರ್ ದೊಡ್ಮನೆ ಹುಡುಗ, ಯುವರತ್ನ ಹಾಗೂ ಈಗಿನ ಜೇಮ್ಸ್ ಚಲನಚಿತ್ರಗಳ ಮೂಲಕ 19 ವಷ೯ಗಳಲ್ಲಿ ಚಲನಚಿತ್ರ ರಂಗದ ಧ್ರುವ ತಾರೆಯಾಗಿ ಮಿನುಗಿದ ಇವರು ಅದ್ಬುತ ನೃತ್ಯ ಪಟುವಾಗಿ, ಸಾಹಸಮಯ ಸ್ಟಂಟ್ ಮತ್ತು ಪೈಟ್ ಮೂಲಕ ಅಭಿಮಾನಿಗಳ ನೆಚ್ಚಿನ ಪವರ್ ಸ್ಟಾರ್ ಪ್ರಖ್ಯಾತಿಯ ಹೆಸರಿಗೆ ತಕ್ಕಂತೆ ನಿಜವಾದ ರಾಜಕುಮಾರನಾಗಿ ಒಂದು ನ್ಯಾಷನಲ್ ಅವಾಡ್೯ ನಾಲ್ಕು ಬಾರಿ ಕನಾ೯ಟಕ ಪಿಲ್ಮ್ ಅವಾಡ೯ ಐದು ಬಾರಿ ಪಿಲ್ಮ್ ಫೇರ್ ಅವಾಡ್೯,ಹತ್ತು ಬಾರಿ ಇನ್ನಿತರ ಪ್ರಶಸ್ತಿಗೆ ಭಾಜನರಾದ ಇವರು ಒಟ್ಟು 24 ಅವಾಡ೯ಗಳನ್ನು ಮುಡಿಗೇರಿಸಿಕೊಂಡ ಹೃದಯವಂತ ನಟಸಾಮ್ರಾಟ, ನಿಜಾಥ೯ದಲ್ಲಿ ಪುನೀತನಾಗಿ ಅಭಿಮಾನಿಗಳ ಹೃದಯ ಮಂದಿರಗಳಲ್ಲಿ ವೀನಿತನಾಗಿ ಚಲನಚಿತ್ರದ ನವನೀತ ಪುನೀತ್ ರಾಜಕುಮಾರ್,,,,,,,,,,,,,,,,,,,,,,,,,,,,,,,,,,,,,,,,,,,,,,,,, ,ಡಾ,!ರಾಜಕುಮಾರ್. ಮತ್ತು ಪಾವ೯ತಮ್ಮನವರ ಕಿರಿಯ ಮಗನಾಗಿ ಪುನೀತ್ ರಾಜಕುಮಾರ 1975 ಮಾಚ೯ 17 ರಂದು ಜನಿಸಿದರು ಇವರ ಮೊದಲ ಹೆಸರು ಲೋಹಿತ್ ಅಂತ ಇತ್ತು, ಚಿನ್ಯೈ ಮತ್ತು ಬೆಂಗಳೂರಿನಲ್ಲಿ ಅಭ್ಯಾಸ ಮಾಡಿದವರು ಬಾಲ್ಯದಲ್ಲಿ ಇವರು ಕಲೆಯ ನಂಟನ್ನು ಬೆಳಸಿಕೊಂಡವರು. ಇವರಿಗೆ ಅಭಿನಯ ಎಂಬುದು ಇವರ ತಾತನಾದ ಸಿಂಗಾನಲ್ಲೂರ ಪುಟ್ಟಸ್ವಾಮಯ್ಯ ಮತ್ತು ತಂದೆಯವರಾದ ಡಾ!ರಾಜಕುಮಾರ್ ಅವರಿಂದ ಬಳುವಳಿಯಾಗಿ ಬಂದಿತ್ತು,ಇವರು 6 ನೇ ವಷ೯ಕ್ಕೆ ಬಾಲಕಲಾವಿದನಾಗಿ ಚಿತ್ರರಂಗಕ್ಕೆ ಪ್ರಾದಪ೯ಣೆ ಮಾಡಿ ಸುಮಾರು 4.ದಶಕಗಳಿಂದ ಬಾಲನಟನಾಗಿ ಇಲ್ಲಿಯವರೆಗೆ ನಾಯಕನಟನಾಗಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಆರಾಧಿಸುವ ರಾಜಕುಮಾರ ನಾಗಿ ಪ್ರೀತಿಯ ನಟನಾಗಿ ಸಮಾಜ ಸೇವಕನಾಗಿ ಗುರುತಿಸಿಕೊಂಡ ಮಹಾನ ನಟ ಪುನೀತ ರಾಜಕುಮಾರ,,,,,,,,,,,,,,,,,,,,,,,,,,,,,,,,,,,,,,,,,,,,,,,,,, ,ಸಿಂಗಾನಲ್ಲೂರ ಪುಟ್ಟ ಸ್ವಾಮಯ್ಯನವರು ಅಪ್ರತಿಮ ಕಲಾವಿದರು ರಂಗಭೂಮಿಯಲ್ಲಿ ಅನೇಕ ಪೌರಾಣಿಕ ಕಥಾಪಾತ್ರಗಳಲ್ಲಿ ಮೈ ರೊಮಾಂಚನ ಗೊಳ್ಳುವಂತಹ ಆಭ೯ಟನೆಯ ಪಾತ್ರಗಳನ್ನು ಮಾಡುವದರಲ್ಲಿ ಎತ್ತಿದ ಕೈ ಇವರದು,ಇಂತಹ ಒಬ್ಬ ಮಹಾನ ಕಲಾವಿದರ ಪುತ್ರರಾದ ಡಾ! ರಾಜಕುಮಾರ್ ಅವರು ಸಹ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರಲೋಕದಲ್ಲಿ ನಕ್ಷತ್ರದಂತೆ ಮಿನುಗಿದ ಮಹಾನ ಮೇರುನಟರು ಮತ್ತು ಅಪ್ರತಿಮ ಕಲಾವಿದರು ಇವರ ಪುತ್ರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಮತ್ತು ಪುನೀತ್ ರಾಜಕುಮಾರ್ ಸಹ ತಂದೆಯಂತೆ ಅತ್ಯುತ್ತಮ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ವಚ೯ಸ್ಸು ಮೂಡಿಸಿ ತಂದೆಯಂತೆ ಅಪಾರ ಅಭಿಮಾನಿ ಬಳಗವನ್ನು ಹೊಂದಿದವರು. ಹೀಗೆ ಕಲೆ ಅನ್ನುವದು ಕುಟುಂಬದ ಬಳುವಳಿಯಾಗಿ ಬಂದಿದೆ, ಡಾ! ರಾಜಕುಮಾರ್ ಅವರ ಕಿರಿಯ ಪುತ್ರರಾದ ಪುನೀತ್ ರಾಜಕುಮಾರ ಅವರು ಕೂಡಾ ಹುಟ್ಟು ಕಲಾವಿದರು ತೊಟ್ಟಿಲ್ಲಲ್ಲಿ ಇರುವಾಗಲೆ ಪ್ರೇಮದಕಾಣಿಕೆ ಚಿತ್ರದ ಮೂಲಕ ಕಾಣಿಸಿಕೊಂಡ ಬಾಲನಟರು.ತಂದೆಯವರಾದ ಡಾ! ರಾಜಕುಮಾರ್ ಅವರ ಜೊತೆಗೆ ವಸಂತಗೀತ,ಚಲಿಸುವ ಮೋಡಗಳು ಭಕ್ತ ಪ್ರಹ್ಲಾದ ಮತ್ತು ಭಾಗ್ಯವಂತರು ಯಾರಿವನು ಪರುಶುರಾಮ ಚಿತ್ರದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಜನಮನ ಗೆದ್ದ ಅಪ್ರತಿಮ ಬಾಲಕಲಾವಿದರು ಹಾಗೂ ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಹಾಗೂ ಭಕ್ತಪ್ರಹ್ಲಾದ ಚಿತ್ರದಲ್ಲಿ ಗೋವಿಂದ ಗೋವಿಂದ ನಾರಾಯಣ,,ಹರಿ ಗೋವಿಂದ ಹರಿ ಗೋವಿಂದ ನಾರಾಯಣ ಎಂಬ ಹಾಡುಗಳನ್ನು ತನ್ನ ಸುಮಧುರ ಕಂಠದ ಮೂಲಕ ಹಾಡಿ ಬಾಲಗಾಯಕ ನಾಗಿಯು ಅಪಾರ ಜನಪ್ರಿಯತೆ ಕಂಡವರು, ಹಾಗೂ ಎನ್ ಲಕ್ಷ್ಮೀ ನಾರಾಯಣ ಅವರ ನಿದೇ೯ಶನದಲ್ಲಿ 1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರದಲ್ಲಿ ಸಹ ಪುನೀತ್ ರಾಜಕುಮಾರ್ ತನ್ನ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರಲೋಕ ದಲ್ಲಿ ಸಂಚಲನ ಮೂಡಿಸಿದ ಬಾಲಕಲಾವಿದ,ಈ ಚಿತ್ರದಲ್ಲಿ ಇವರು ಹಾಡಿದ ಬಿಸಿಲೆ ಇರಲಿ ಮಳೆಯೇ ಬರಲಿ ,ಕಾಡಲ್ಲಿ ಮೇಡಲ್ಲಿ ಅಲೆವೇ ಎಂಬ ಹಾಡನ್ನು ತನ್ನ ಸುಶ್ರಾವ್ಯ ಕಂಠದ ಮೂಲಕ ಹಾಡಿ ಜನಮನ ಗೆದ್ದವರು,ಈ ಚಿತ್ರದ ಅಭಿನಯಕ್ಕೆ ರಾಷ್ಟ ಪ್ರಶಸ್ತಿ ಪಡೆದ ಬಾಲ ನಟನಾಗಿ ಹೊರಹೊಮ್ಮಿ ಅಂದೇ ಅನೇಕ ಮಕ್ಕಳ ನೆಚ್ಚಿನ ಪ್ರೀತಿಯ ನಟನಾಗಿ ಗುರುತಿಸಿ ಕೊಂಡವರು, ಹಾಗೂ 2002 ರಲ್ಲಿ ಪುರಿ ಜಗನ್ನಾಥ ನಿದೇ೯ಶನದಲ್ಲಿ ತೆರೆಕಂಡ ಅಪ್ಪುಚಿತ್ರದಲ್ಲಿ ಪ್ರಪ್ರಥಮವಾಗಿ ನಾಯಕ ನಟನಾಗಿ ಅಮೋಘ ಅಭಿನಯದ ಮೂಲಕ ಜನಮನ ಗೆದ್ದವರು, ಈ ಚಿತ್ರದಲ್ಲಿ ಗುರುಕಿರಣ್ ಸಂಗೀತ ನಿದೇ೯ಶನದಲ್ಲಿ ಇವರು ಹಾಡಿದ ತಾಲಿಬಾನ್ ಅಲ್ಲಾ ಅಲ್ಲಾ,ಅವನ ಹೊಡೆದಿದ್ದು ಬಿಲ್ಡಿಂಗಗೆ, ನಾನು ಹೊಡೆದಿದ್ದು ಹೃದಯಕ್ಕೆ, ಮಿಸ್ ಅಂಡಸ್ಟ್ಯಾಂಡಿಂಗ್ ಬೇಡ ಎಂಬ ಹಾಡು ಯುವಜನರ ಮನಸ್ಸನ್ನು ಮೋಡಿ ಮಾಡಿತು, ಹಾಗೂ ಬಾಲಿವುಡ್ ಬಾದಷಾಹ ಅಮಿತಾಬ್ ಬಚ್ಚನ್ ನೆಡೆಸಿಕೊಡುತ್ತಿದ್ದ ಹಿಂದಿ ಅವತರಣಿಕೆಯ ಕೌನ ಬನೇಗಾ ಕರೋಡ್ ಪತಿ ಜನಪ್ರಿಯತೆಯಂತೆ ಕನ್ನಡದ ಕೋಟ್ಯಾಧಿಪತಿ ಸಂಚಿಕೆಯಲ್ಲಿ ಬಹಳ ಸಮಥ೯ವಾಗಿ ನಿಭಾಯಿಸಿ ತಮ್ಮಮುದ್ದಾದ ನಗು ಮತ್ತು ಪ್ರೀತಿಯ ಮಾತುಗಳಿಂದ ಅಪಾರ ಜನಮನ್ನಣೆ ಗಳಿಸಿದವರು,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ,ಡಾ!ರಾಜಕುಮಾರ್ ಅವರು ಬಹಳ ಸರಳ ಜೀವಿಗಳು ಯಾರೇ ಕಲಾವಿದರು ಬರಲಿ ಚಿಕ್ಕವರು ಇರಲಿ ದೊಡ್ಡವರು ಇರಲಿ ಎಲ್ಲರನ್ನು ಬಹಳ ಪ್ರೀತಿಯಿಂದ, ಮಮತೆ.ಗೌರವಾದರಗಳಿಂದ ಬರ ಮಾಡಿಕೊಂಡು ನಮ್ರತೆಯಿಂದ ಮಾತಾನಾಡಿಸುವರು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಎಲ್ಲಾ ಕಲಾವಿದರ ಜೊತೆಗೆ ಕುಳಿತು ಊಟ ಮಾಡಿ ಅವರ ಯೋಗ ಕ್ಷೇಮ ವಿಚಾರ ಮಾಡಿ ಸಹಾಯ ಸಹಕಾರ ಮಾಡುತ್ತಿದ್ದ ದೇವತಾ ಮನುಷ್ಯ ಹೀಗೆ ಒಮ್ಮೆಚಿತ್ರದ ಶೂಟಿಂಗ ಸಂದರ್ಭದಲ್ಲಿ ಆ ಚಿತ್ರದ ಒಬ್ಬ ಪುಟ್ಟ ಕಲಾವಿದನ ಕುಟುಂಬ ಡಾ, ರಾಜಕುಮಾರ ಅವರನ್ನು ನೋಡಬೇಕು ಎಂದು ಆಸೆ ಪಟ್ಟಿದ್ದರು ಆದರೆ ಸ್ಟುಡಿಯೋದಲ್ಲಿ ಒಳಗಡೆ ಬಿಟ್ಟಿರಲಿಲ್ಲ, ಆಗ ಕಲಾವಿದ ಹೆದರುತ್ತಲೆ ಡಾ!ರಾಜಕುಮಾರ ಅವರ ಬಳಿ ಹೇಳಿ ಕೊಂಡಾಗ ಆಗ ಅಣ್ಣಾವ್ರ ಆ ಕಲಾವಿದನಿಗೆ ಭಯ ಸಂಕೋಚ ಪಟ್ಟೊಕೋಬೇಡಿ ನಾನು ನಿಮ್ಮಂತೆ ಕಲಾವಿದ ಎಲ್ಲರು ಒಂದೇ ಬನ್ನಿ ಎಂದು ಆ ಪುಟ್ಟ ಕಲಾವಿದನನ್ನು ತಮ್ಮ ಜೊತೆ ಕರೆದುಕೊಂಡು ಬಂದು ಸ್ಟುಡಿಯೋ ಹೊರಗಡೆ ಇದ್ದಂತಹ ಆ ಕಲಾವಿದನ ಕುಟುಂಬ ಸದಸ್ಯರು ಜೊತೆಗೆ ಬಹಳ ಪ್ರೀತಿಯಿಂದ ಮಾತನಾಡಿಸಿ ಅವರೊಂದಿಗೆ ಪೋಟೊ ತೆಗೆಸಿಕೊಂಡು ನಂತರ ಅವರಿಗೆ ಒಳಗಡೆ ಕರೆದುಕೊಂಡು ಬಂದು ಊಟ ಮಾಡಿಸಿ ಕಳಿಸಿಕೊಟ್ಟರು ಹೀಗೆ ಎಲ್ಲರನ್ನೂ ಸಮಾನತೆಯಿಂದ ಪ್ರೀತಿಯಿಂದ ಕಾಣುವ ಸದ್ಗುಣ ವನ್ನು ಹಾಗೂ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದ ಅಣ್ಣಾವ್ರು ಅಭಿಮಾನಿಗಳು ದುಡ್ಡು ಕೊಟ್ಟು ನಮ್ಮ ಚಿತ್ರ ನೋಡತಾರೆ ಹೀಗಾಗಿ ನಾವು ಚಿತ್ರದಲ್ಲಿ ಬಹಳ ಚೆನ್ನಾಗಿ ಅಭಿನಯ ಮಾಡಬೇಕು ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ಇರುವ ಚಿತ್ರ ಕೊಡಬೇಕು. ಆದ್ದರಿಂದ ನಾವು ಪರಿಶ್ರಮ ಪಟ್ಟು ನಾವು ಚಿತ್ರದಲ್ಲಿ ಚೆನ್ನಾಗಿ ನಟಿಸಿ ವೈವಿಧ್ಯಮಯವಾಗಿ ಅಚ್ಚು ಕಟ್ಟಾಗಿ ಮೂಡಿಬರಲು ಶ್ರಮ ಪಡಬೇಕು ಅಂದಾಗ ಮಾತ್ರ ಸಾಥ೯ಕವಾಗುತ್ತದೆ ಆಗ ಅಭಿಮಾನಿಗಳಿಗೆ ಖುಷಿ ಸಿಗುತ್ತದೆ ಎಂದು ಹೇಳುತ್ತಿದ್ದ, ಮೇರುನಟರಾದ ಡಾ!ರಾಜಕುಮಾರ್ ಅವರು ಹಿರಿಯಲಿರಲಿ ಕಿರಿಯಲಿರಲಿ ಎಲ್ಲರನ್ನು ಸಮಾನತೆ ಗೌರವದಿಂದ ಕಾಣುವ ಮನೋಧಮ೯ ಮತ್ತು ಆದಶ೯ತೆಯ ನಿಲುವನ್ನು ಬದುಕಿನಲ್ಲಿ ಅಳವಡಿಸಿಕೊಂಡಂತೆ ಇವರು ಮಕ್ಕಳು ಸಹ ಜೀವನದಲ್ಲಿ ಅಳವಡಿಸಿಕೊಂಡವರು, ಹೀಗಾಗಿ ಅಣ್ಣಾವ್ರು ಎಂದರೆ ಅವರೊಬ್ಬರು ದೈವ ಪುರುಷರು ಹಾಗೂ ದೇವತಾ ಮನುಷ್ಯರಾಗಿ ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರು, ಹಾಗೂ ತಂದೆಯಂತೆ ಪುನೀತ್ ರಾಜಕುಮಾರ್ ಸಹ ಅಭಿಮಾನಿಗಳನ್ನು ದೇವರೆಂದೇ ಕರೆದವರು,ಹೀಗಾಗಿ ದೊಡ್ಮನೆ ಹುಡುಗ ಚಿತ್ರದಲ್ಲಿ ಅಭಿಮಾನಿಗಳೇ ನಮ್ಮ ಮನೆ ದೇವರು ಎಂಬ ಹಾಡನ್ನು ತಾವೇ ಹಾಡಿ ಅಮೋಘವಾದ ನೃತ್ಯ ಮಾಡಿ ಕನ್ನಡಿಗರ ಪ್ರತಿ ಮನೆ ಮನಗಳ ಹೃದಯದಲ್ಲಿ ಆರಾಧಿಸುವ, ಪೂಜಿಸುವ, ನೆಚ್ಚಿನ ನಾಯಕ ನಟರಾಗಿ ಉಳಿದವರು ಡಾ! ರಾಜಕುಮಾರ್ ಅವರಂತೆ ನಾಯಕ ನಟರಾಗಿ ಗಾಯಕರಾಗಿ ವಿನಯ ಸರಳತೆಯಂತೆ ಪುನೀತ್ ಕೂಡ ನಾಯಕ ನಟರಾಗಿ ಗಾಯಕರಾಗಿ ವಿನಯ ಸರಳತೆಯಿಂದ ಅಭಿಮಾನಿಗಳನ್ನು ಬಹಳ ಪ್ರೀತಿ ಮಮತೆಯಿಂದ ಕಾಣತಾ ಇದ್ದರು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ,ಸಹಕಾರ ಇಲಾಖೆಯ ಕನಾ೯ಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ನ ಉತ್ಪನ್ನಗಳ ಹಾಗೂ ಎಲ್ಲಾ ಮಕ್ಕಳಿಗೂ ಶಿಕ್ಷಣ ಲಭಿಸಬೇಕೆಂದು ಪ್ರಚಾರದ ನಿಮಿತ್ತ ಶಿಕ್ಷಣ ಇಲಾಖೆಯ ಸವ೯ಶಿಕ್ಷಣ ಅಭಿಯಾನದ ಮತ್ತು ಇಂಧನ ಇಲಾಖೆಯ ಎಲ್ ಇ ಡಿ ವಿದ್ಯುತ್ ದೀಪವನ್ನು ಬಳಕೆ ಮಾಡಲು ಜಾಗೃತಿ ಮೂಡಿಸಲು ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಪ್ರಚಾರದ,ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಚಾರದ ನಿಮಿತ್ತ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ಕೌಶಲ್ಯಾ ಭಿವೃದ್ದಿ ಯೋಜನೆಯ ಅಡಿಯಲ್ಲಿ ಕೈಗಾರಿಕಾ ತರಬೇತಿ ಪ್ರವೇಶಾತಿಗಳ ಪ್ರಯುಕ್ತ ಹಾಗೂ ಮತದಾನದ ಜನಜಾಗೃತಿ ಮೂಡಿಸಲು ಚುನಾವಣೆ ಆಯೋಗದ ರಾಯಭಾರಿಯಾಗಿ ಹೀಗೆ ಸಕಾ೯ರಿ ಸ್ವಾಮ್ಯದ ಅನೇಕ ಸಂಸ್ಥೆಗಳಿಗೆ ರಾಯಭಾರಿಯಾಗಿ ಉಚಿತವಾಗಿ ಪ್ರಚಾರ ಮಾಡಿದ ಧಿಮಂತ ವ್ಯಕ್ತಿ ಹಾಗೂ ನಂದಿನಿ ಬ್ರಾಂಡ್ ನ ಉತ್ಪನ್ನಗಳ ಪ್ರಚಾರದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಪ್ರಯುಕ್ತ ನಂದಿನಿ ಹಾಲು ಉತ್ಪಾದಕರ ಒಕ್ಕೂಟವು ಸಂಭಾವನೆ ಕೊಡಲು ಮುಂದಾದಾಗ ಆಗ ಇವರು ಇದು ರೈತರ ಸಂಸ್ಥೆ ನನಗೆ ಸಂಭಾವನೆ ಬೇಡ ನನಗೆ ನೀಡುವ ಸಂಭಾವನೆ ರೈತರ ಶ್ರೇಯೋಭಿವೃದ್ದಿಗೆ ಬಳಸಿರಿ ಎಂದು ಹಾಗೂ ಎಲ್ಲಾ ಮಕ್ಕಳಿಗೂ ಶಿಕ್ಷಣ ಲಭಿಸಲಿ ಎಂಬುದು ನನ್ನ ಆಶಯ,ಹೀಗಾಗಿ ನನಗೆ ಸಂಭಾವನೆ ಬೇಡ ಎಂದು ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿಸಿ ಎಲ್ಲರ ಪ್ರೀತಿಸುವ ಧ್ರುವತಾರೆಯಾಗಿ ಪ್ರಜ್ವಲಿಸಿದವರು,,,,,,,,,,,,,,,,,,,,,,,,,,,,,,,,,,,,,,,,,,,,,,,, ಪುನೀತ್ ರಾಜಕುಮಾರ್ ಅವರು ಸಂಕಷ್ಟದಲ್ಲಿರುವ ಎಷ್ಟೋ ಕುಟುಂಬಗಳ ಬದುಕಿಗೆ ನೆರಳಾಗಿ ಬೆಳಕಾಗಿ ಸಹಾಯ ಸಹಕಾರ ನೀಡಿದ ಕಲಿಯುಗದ ದಾನಶೂರ ಕಣ೯, ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗ ಬಾರದು ಎನ್ನುವ ನಿಲುವುನ್ನು ಇಟ್ಟುಕೊಂಡು ಬದುಕಿದವರು,ಅವರು ಇದ್ದಾಗ ಜನರ ನೆರವಿಗೆ ಸಹಾಯ ಹಸ್ತ ನೀಡಿದ್ದು ಎಂದಿಗೂ ತೋರಿಸಿ ಕೊಂಡವರಲ್ಲ, ಸ್ವತಃ ಅವರ ಕುಟುಂಬ ವಗ೯ಕ್ಕೂ ತಿಳಿದಿರಲಿಲ್ಲ,ಎಷ್ಟೋ ಮಕ್ಕಳಿಗೆ ಅನ್ನ ಕೊಟ್ಟು ಆಶ್ರಯ ನೀಡಿ ಶಿಕ್ಷಣಕ್ಕಾಗಿ ಸಹಾಯ ಮಾಡಿದ್ದು ಮತ್ತು,ಅನಾಥ ಶ್ರಮಗಳಿಗೆ, ವೃದ್ದಾಶ್ರಮಗಳಿಗೆ & ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದು,& ಅನಾರೋಗ್ಯ ಸಮಸ್ಯೆಯಾಗಿ ಚಿಕಿತ್ಸೆಗಾಗಿ ಆಥಿ೯ಕ ತೊಂದರೆಯಿಂದ ಪರಿತಪಿಸುತ್ತಿದ್ದ ಎಷ್ಟೋ ಕುಟುಂಬಗಳಿಗೆ ಚಿಕಿತ್ಸೆಗೆ ನೆರವಾಗಿ ಹಣದ ಸಹಾಯ ಮಾಡಿದ್ದು & ಕರೋನಾ ವೈರಸ್ ಹಾವಳಿಯಿಂದ ಲಾಕಡೌನ ಸಂದರ್ಭದಲ್ಲಿ ಹಲವಾರು ಜಿಮ್ ತರಬೇತಿದಾರರಿಗೂ ಅವರ ಖಾತೆಗೆ ಹಣ ಹಾಕಿದ್ದು & ಕಲಾವಿದರ, ಕರಕುಶಲ ಕಾಮಿ೯ಕ ವಗ೯ದ ಹಾಗೂ ಇನ್ನಿತರ ಹಲವು ವಲಯದ ಕೆಲಸಗಾರರ ಕಾಮಿ೯ಕರ ಬದುಕಿಗೆ ಸಹಾಯ ಮಾಡಿ ಅವರ ಮಕ್ಕಳ ಶಿಕ್ಷಣ ಹಾಗೂ ಕಲ್ಯಾಣ ಕಾಯ೯ಗಳಿಗೆ ನೆರವು ನೀಡಿದ್ದು, ಹಾಗೂ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕೆಲವುರು ಬಸ್ಸುಗಳು ಸರಿಯಾದ ಸಮಯದಲ್ಲಿ ಬರದೇ ಲೇಟಾಗಿ ಬಂದ ಸಿನಿಮಾ ಕಾಯ೯ದ ಹಲವು ಹುಡುಗರಿಗೆ ಸ್ವಂತ ಬೈಕ್ ಕೊಡಿಸಿದ್ದು,ಹಾಗೂ ಶಕ್ತಿ ಧಾಮದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಅವರ ಬದುಕಿಗೆ ಆಸರೆಯಾಗಿ ಶ್ರಮಿಸಿದ್ದು ಹಾಗೂ ತಾನೊಬ್ಬ ಮಹಾನ ನಟ ಎಂದು ತೋರಿಸಿಕೊಳ್ಳದೇ ಸಾಮಾನ್ಯರಂತೆ ಇದ್ದವರು ಒಮ್ಮೆ ಈ ಭಾಗದಲ್ಲಿ ಬಂದಾಗ ಕುರಿಗಾಯಿ ಜನಗಳೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿ ಅವರ ಜೊತೆ ಪ್ರೀತಿಯಿಂದ ಮಾತನಾಡಿ ಅವರ ಮಕ್ಕಳೊಂದಿಗೆ ಸಮಯ ಕಳೆದು ಅವರ ಬದುಕಿಗೆ ಸಹಾಯ ಮಾಡಿದ್ದು ಹಾಗೂ ಪುನೀತ್ ರಾಜಕುಮಾರ್ ಅವರು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಸಹಾಯ ಕೇಳಿ ಬಂದ ಅದೆಷ್ಟೋ ಕುಟುಂಬಗಳಿಗೆ, ಜನಗಳಿಗೆ, ಮತ್ತು ಶಾಲೆಗಳ ಅಭಿವೃದ್ಧಿಗೆ, ಸಹಾಯ ಮಾಡಿದವರು ಮತ್ತು ಶೂಟಿಂಗ್ ಸಂದರ್ಭದಲ್ಲಿ ಎಷ್ಟೇ ಬಿಜಿ ಇದ್ದರು ತನ್ನನ್ನು ನೋಡಲು ಬಂದ ಅಭಿಮಾನಿಗಳನ್ನು ತಾಳ್ಮೆ ಯಿಂದ ಅಕ್ಕರೆಯಿಂದ ಮಾತನಾಡಿಸಿ ಅವರೊಂದಿಗೆ ಪೋಟೋ ತೆಗೆಸಿಕೊಂಡು ಪ್ರೀತಿಯಿಂದ ಕಂಡವರು ಹಾಗೂ ಕಲಾ ಪ್ರತಿಭೆ ಇರುವ ಅದೆಷ್ಟೋ ಯುವಕರಿಗೆ ತಮ್ಮ ಪಿ ಆರ್ ಕೆ ಬ್ಯಾನರನ ಮೂಲಕ ಚಿತ್ರದಲ್ಲಿ ಅವಕಾಶ ಕೊಟ್ಟು ಕತ್ತಲು ತುಂಬಿದ ಅವರ ಬದುಕಿಗೆ ಬೆಳಕಾದವರು,ಹಾಗೂ ಖಾಸಗಿ ವಾಹಿನಿಯಲ್ಲಿ ನೆಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಮತ್ತು ಪ್ಯಾಮಿಲಿ ಪವರ್ ಕಾಯ೯ಕ್ರಮದ ಸಂಚಿಕೆಯ ಸ್ಪದೆ೯ಯಲ್ಲಿ ಅನೇಕರು ಅಲ್ಲಿ ಕೇಳುವ ಪ್ರಶ್ನೆಗಳಿಗ ಉತ್ತರ ನೀಡಿ ಹಣವನ್ನು ಗೆದ್ದು ತಮ್ಮ ಸಂಕಷ್ಟದ ಬದುಕಿಗೆ ನಾಂದಿ ಹಾಡಿ ಹೊಸ ಜೀವನ ಕಂಡು ಕೊಳ್ಳಲು ಕೆಲವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸೋತು ನಿರಾಸೆಗೊಂಡ ಅನೇಕರ ಬದುಕಿಗೆ ವೈಯಕ್ತಿಕವಾಗಿ ಪುನೀತ್ ರಾಜಕುಮಾರ್ ಯಾರಿಗೂ ಗೊತ್ತಾಗಂದಂತೆ ಸಹಾಯ ಮಾಡಿ ಅವರುಗಳು ಸಂಕಷ್ಟದ ಜೀವನಕ್ಕೆ ಆಸರೆಯಾಗಿ ಸುಂದರ ಬದುಕನ್ನು ರೂಪಿಸಿಕೊಟ್ಟವರು, ಹೀಗೆ ಅವರ ದಾನದ ವಿಷಯದಲ್ಲಿ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ, ಇಂತಹ ಒಬ್ಬ ಮಹಾನ ದಾನಶೂರ ಅಂತಕರಣ ನಗುವಿನ ರಾಜಕುಮಾರ್ ಪ್ರತಿ ಮನೆ ಮನಗಳ ದೇವರಾಗಿ ಪೂಜಿಸಲ್ಪಟ್ಟವರು ಹಾಗೂ ಇವರ ಚಿತ್ರರಂಗದ ಸೇವೆ ಮತ್ತು ಸಮಾಜ ಸೇವೆಗೆ ಕನಾ೯ಟಕ ಸರಕಾರವು ಕನಾ೯ಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ಹಾಗೂ ಮೈಸೂರು ವಿಶ್ವ ವಿದ್ಯಾಲಯವು ಸಹ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ಡಾ,ರಾಜಕುಮಾರ್ ಅವರಂತೆ ನೇತ್ರದಾನ ಮಾಡಲು ಪ್ರೋತ್ಸಾಹಿಸಿದವರು,ತಂದೆ ತಾಯಿಯಂತೆ ಇವರು ಸಹ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದವರು, ಎರಡು ಕಣ್ಣುಗಳಿಂದ ಕನಿಷ್ಟ ಇಬ್ಬರು ಅಂಧರಿಗೆ ದೃಷ್ಟಿ ನೀಡಲಾಗುತ್ತಿತ್ತು, ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಅವರ ಎರಡು ಕಣ್ಣುಗಳನ್ನು ನಾಲ್ವರಿಗೆ ಕಸಿ ಮಾಡುವ ಮೂಲಕ ನಾಲ್ವರ ಅಂಧರ ಬಾಳಿನಲ್ಲಿ ಅಂಧಕಾರನ್ನು ದೂರ ಮಾಡಲಾಗಿದೆ, ಕಾನಿ೯ಯಲ್ ಕಾಯಿಲೆ ಇರುವ ಇಬ್ಬರಿಗೆ ಮೇಲ್ಪದರನ್ನು ಹಾಗೂ ಆಳವಾದ ಪದರನ್ನು ಎಂಡೋಥಿಲೀಯಲ್ ಅಥವಾ ಆಳವಾದ ಕಾನಿ೯ಯಲ್ ಪದರದ ಕಾಯಿಲೆ ಇರುವ ಇನ್ನುಳಿದ ಇಬ್ಬರಿಗೆ ಕಸಿ ಮಾಡುವದರ ಮೂಲಕ ನಾಲ್ವರ ಅಂಧರ ಬಾಳಿಗೆ ಬೆಳಕಾದವರು,ಸಾವಿನಲ್ಲೂ ಸಾಥ೯ಕತೆಯ ಆದಶ೯ದ ಬದುಕನ್ನು ಕಂಡವರು,ಇವರ ನೇತ್ರ ದಾನದಿಂದ ದಾನಿಗಳ ಸಂಖ್ಯೆ ಸಹ ಹೆಚ್ಚಾಗಿದೆ ಹಾಗೂ ಇವರ ಸಾವಿನ ನಂತರ ಪಾಥಿ೯ವ ಶರೀರದ ದಶ೯ನ ಪಡೆಯುವರ ಸಂಖ್ಯೆ ಇಪ್ಪತ್ತು ಲಕ್ಷ ಮೀರಿತ್ತು ಹೀಗೆ ಸಾವಿನಲ್ಲೂ ದಾಖಲೆ ಬರೆದ ಇವರ ಸಾಥ೯ಕಥೆಯ ಬದುಕಿಗೆ ಕೋಟಿ ಕೋಟಿ ನಮನಗಳು,ಹಾಗೂ ಇಂದಿಗೂ ಇವರ ಸಮಾಧಿಯನ್ನು ನೋಡಲು ದೇಶ ವಿದೇಶಗಳ ಹಾಗೂ ರಾಜ್ಯದ ಮೂಲೆಮೂಲೆಗಳಿಂದ ಸಹ ಬಂದು ದಶ೯ನ ಪಡೆದು ಭಾವುಕರಾಗಿ ನೆನೆಯುತ್ತಾ ನಮಿಸುವ ಕೋಟಿ ಕೋಟಿ ಅಭಿಮಾನಿಗಳ ಆರಾದ್ಯದೇವರು ಹಾಗೂ ಅಭಿಮಾನಿಗಳೇ ನಮ್ಮ ಮನೇ ದೇವರು ಎಂದು ಕಾಣುವ ಅಕ್ಕರೆಯ ದೇವತಾ ಮನುಷ್ಯ ಪುನೀತ್ ರಾಜಕುಮಾರನಿಗೆ ಇಂದು ಹುಟ್ಟು ಹಬ್ಬದ ನಿಮಿತ್ತ ಹಾಗೂ ಇವರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ರಾಜ್ಯಾದ್ಯಂತ ಬಿಡುಗಡೆಯ ನಿಮಿತ್ತವಾಗಿ ಮತ್ತು ಈ ಚಿತ್ರ ಶತದಿನೋತ್ಸವದತ್ತ ಮುನ್ನುಗ್ಗಿ ಯಶಸ್ಸು ಕೀತಿ೯ ಮತ್ತು ದಾಖಲೆಯ ಚಿತ್ರವಾಗಿ ರಾರಾಜಿಸಲಿ.ಎಂದು ಆಶಿಸುತ್ತಾ ಹೃದಯ ಪೂವ೯ಕವಾಗಿ ಹಾದಿ೯ಕ ಶುಭಾಶಯವನ್ನು ಕೋರುತ್ತೇನೆ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ,ಲೇಖನ –ರಾಜೇಶ ಜೀ ಬಳ್ಳಾರಿ ಕೊಪ್ಪಳ,,,,,,,,

Please follow and like us: