ಪಂಚರಾಜ್ಯಗಳ ಚುನಾವಣೆ : ಬಿಜೆಪಿ ಸಂಭ್ರಮಾಚರಣೆ

ಕೊಪ್ಪಳ : ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಕಾರ್ಯಕರ್ತರು, ನಾಯಕರು ಸಂಭ್ರಮಾಚರಣೆ ಮಾಡಿದರು.

ಕೊಪ್ಪಳದ ಅಶೋಕ ಸರ್ಕಲ್ ಮತ್ತು ಭಾಗ್ಯನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಭಾಗ್ಯನಗರದ ಸಂಭ್ರಮಾಚರಣೆ ಸಂದರ್ಭದಲ್ಲಿ ಹಿರಿಯ ಮುಖಂಡರಾದ ರಾಘವೇಂದ್ರ ಪಾನಘಂಟಿ, ಪೆದ್ದ ಸುಬ್ಬಯ್ಯ, ಕೋಟ್ರೇಶ್ ಶೆಡ್ಮಿ, ಮಹೇಶ್ ಅಂಗಡಿ , ವಿಜಯ್, ಗಿರೀಶ ಪಾನಘಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: