ಶಾಲಾ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮೂಲಭೂತ ಸೌಲಭ್ಯಕ್ಕೆ ಒತ್ತಾಯ

ಕೊಪ್ಪಳ : ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಇಂದಿನ ಪ್ರಜೆಗಳಾದ ಮಕ್ಕಳಿಗೆ ಸ್ಥಳೀಯ ಸರ್ಕಾರದ ಆಗುಹೋಗುಗಳ ಕುರಿತು ಮಕ್ಕಳಲ್ಲಿ ಈಗಿನಿಂದಲೇ ತಿಳಿಸಬೇಕಾದ ಅವಶ್ಯಕತೆ ಇದೆ. ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆದಿರುವುದಿಲ್ಲ ಇದರಿಂದ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಹಕ್ಕುಗಳ ಮತ್ತು ಸಮಸ್ಯೆಗಳ ಕುರಿತು ಚರ್ಚೆ ನಡೆದಿರುವುದಿಲ್ಲ. ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇರುವ ಏಕೈಕ ವೇದಿಕೆಯೆಂದರೆ ಮಕ್ಕಳ ಗ್ರಾಮಸಭೆ ಆಗಿದೆ. ಕೋವಿಡ್ 19 ಕಾರಣದಿಂದಾಗಿ ಮಕ್ಕಳ ಗ್ರಾಮಸಭೆಗಳು ನಡೆಯದಿರುವುದು ಮಕ್ಕಳಿಗೆ ಮತ್ತು ನಮ್ಮೆಲ್ಲರಿಗೂ ನಿರಾಸೆಯನ್ನುಂಟು ಮಾಡಿದೆ.

ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುವ ಕುಕನೂರು. ಯಲಬುರ್ಗಾ. ಕುಷ್ಟಗಿ ತಾಲೂಕಗಳ ಸರ್ಕಾರಿ ಹಿರಿಯ ಪ್ರಾಥಮಿಕ. ಪ್ರೌಢಶಾಲೆಯ ಮಕ್ಕಳ ಹಕ್ಕುಗಳ ಕ್ಲಬ್ ಗಳಲ್ಲಿ ಮಕ್ಕಳ ಸಮಸ್ಯೆಗಳನ್ನು ಚರ್ಚಿಸಿ ಮಾಡಲಾದ ಪಟ್ಟಿಯಂತೆ ಮುರಡಿ. ನರಸಾ ಪೂರ. ತರಲಕಟ್ಟಿ. ಮುರುಡಿ ತಾಂಡಾ. ತರಲಕಟ್ಟಿ ತಾಂಡಾ. ಚಿಕ್ಕಮ್ಯಾಗೇರಿ. ಕುಡಗುಂಟಿ. ಮಲಕಸಮುದ್ರ. ವಣಗೇರಿ. ಲಕಮನಗುಳಿ. ಗುತ್ತೂರು. ಕಿಲ್ಲಾರ ಹಟ್ಟಿ ತಾಂಡ. ಶಿರೂರು ಮುಂತಾದ ಸರ್ಕಾರಿ ಶಾಲಾ ಮಕ್ಕಳಿಗೆ ತಕ್ಷಣ ಗ್ರಾಮ ಸಭೆ ನಡೆಸಬೇಕು. ಊಟದ ತಟ್ಟೆ ಮತ್ತು ಗ್ಲಾಸ್ ಗಳನ್ನು. ಬಿಸಿ ಊಟದ ಜೊತೆಯಲ್ಲಿ ಹಣ್ಣು. ಹಾಲು. ರೊಟ್ಟಿ ಒದಗಿಸಬೇಕು. ಶಾಲಾ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಶಾಲಾ ಮೈದಾನಗಳು ಸಮತಟ್ಟು ಮಾಡಬೇಕು. ಆಟದ ಸಾಮಗ್ರಿಗಳು ಪೂರೈಸಬೇಕು. ಶೌಚಾಲಯಗಳಿಗೆ ದುರಸ್ಥಿ ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ಮಂಜೂರಾದ ಶಿಕ್ಷಕರ ಹುದ್ದೆಗಳು ಪೂರ್ಣವಾಗಿ ತುಂಬಬೇಕು. ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕೊಠಡಿಗಳ ದುರಸ್ಥಿಗೊಳಿಸಬೇಕು. ಗ್ರಂಥಾಲಯಗಳಲ್ಲಿ ಅಗತ್ಯ ಪುಸ್ತಕಗಳನ್ನು ಒದಗಿಸಬೇಕು. ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಹಲವಾರು ಶಾಲೆಗಳ ಕಿಟಕಿ ಬಾಗಿಲು. ಗೇಟ್ ಗಳನ್ನು ದುರಸ್ಥಿಗೊಳಿಸಬೇಕು ಎಂದು ಶಾಲಾ ಮಕ್ಕಳಾದ ಗಾಯತ್ರಿ. ಪ್ರತಿಮಾ. ಮಾಂತೇಶ್. ಬಸಮ್ಮ ಮುಂತಾದ ಹಲವು ಮಕ್ಕಳೊಂದಿಗೆ ಬೆಂಬಲವಾಗಿ ಕೋವಿಡ್ ರೆಸ್ಪಾನ್ಸ್ ಯೋಜನೆಯ ಜಿಲ್ಲಾ ಸಂಯೋಜಕ ಧರ್ಮರಾಜ್ ಗೋನಾಳ್. ಕ್ರಿಯಾ ಯೋಜನೆಯ ಸುಂಕಪ್ಪ ಮೀಸಿ. ಅನುಸೂಯ ಪಾಟೀಲ್. ಕ್ರಿಯಾ ಯೋಜನೆಯ ಪ್ರೇರಕ ಬಸವರಾಜ್ ಬಳಿಗೇರ್. ರಮೇಶ್ ಕುದ್ರಿಕೋಟಗಿ. ದೊಡ್ಡ ಬಸಮ್ಮ ಕುಷ್ಟಗಿ. ಕುಕನೂರು ತಾಲೂಕಿನ ಸಂಯೋಜಕ ಪ್ರಕಾಶ್ ಹಳ್ಳಿ. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಪಿ ಚಿಕೇನಕೊಪ್ಪ ಮುಂತಾದವರು ಒತ್ತಾಯಿಸಿದ್ದಾರೆ.

Please follow and like us: