ಮಹಿಳೆ ಸೃಷ್ಟಿ, ಸ್ಪೂರ್ತಿ,ಶಕ್ತಿಯಾಗಿದ್ದಾರೆ – ಶಿವನಗೌಡ ಪೊಲೀಸ್ ಪಾಟೀಲ

ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರೊಫೆಷನಲ್ ಸೋಶಿಯಲ್ ವರ್ಕರ್ ಅಸೋಸಿಯೇಷನ್ ಕೊಪ್ಪಳ ಜಿಲ್ಲಾ ಘಟಕದಿಂದ ಮತ್ತು ಶ್ರೀ ಚನ್ನಬಸನಗೌಡ ಪೊಲೀಸ್ ಪಾಟೀಲ್ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ(ರಿ ) ನವಲಹಳ್ಳಿ ಸಂಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವನಗೌಡ ಪೊಲೀಸ್ ಪಾಟೀಲ್ ಮಹಿಳೆಯರು ಒಂದು ಕ್ಷೇತ್ರಕ್ಕೆ ಮೀಸಲಿರದೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಮಹಿಳೆಯೆಂದರೆ ಸೃಷ್ಟಿ,ಸ್ಪೂರ್ತಿ ಮತ್ತು ಶಕ್ತಿ ಆಗಿದ್ದಾಳೆ. ಆದ್ದರಿಂದ ಮಹಿಳೆ ಮಹಿಳೆಯರ ಕಾರ್ಯಗಳನ್ನು ಮಹಿಳೆಯರಿಗಿರುವ ಅವಕಾಶಗಳನ್ನು ಮಹಿಳೆಯರ ಹಕ್ಕುಗಳನ್ನು ಸ್ವಾತಂತ್ರವನ್ನು ಒದಗಿಸುವುದು ಕೊಡುವುದು ಇವತ್ತಿನ ಸಮಾಜದ ಆದ್ಯ ಕರ್ತವ್ಯವಾಗಿದೆ ಇಂಥ ಕಾರ್ಯಕ್ರಮಗಳ ಮೂಲಕವಾಗಿ ಮಹಿಳೆಯರಿಗೆ ಸಿಗಬೇಕಾಗಿರುವ ಅಂತ ಕಾರ್ಯಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಅವಶ್ಯವಾಗಿದೆ.

ಕಾರ್ಯಕ್ರಮದಲ್ಲಿ ಸ್ಥಳೀಯವಾಗಿರುವ ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯುಸಿ ಓದುತ್ತಿರುವ ಕುಮಾರಿ ಅಕ್ಷತಾ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಕ್ಷತಾ ಪ್ರತಿಯೊಬ್ಬ ಮಹಿಳೆಯಿಂದ ಪುರುಷ ಇದ್ದೇ ಇರುತ್ತಾನೆ ಎಂಬಂತೆ ನನ್ನ ಸಾಧನೆಗೆ ನನ್ನ ತಂದೆ ತಾಯಿಗಳು ಮತ್ತು ನನ್ನ ಶ್ರಮ ಮತ್ತು ಕಠಿಣ ಪರಿಶ್ರಮ ಸಾಧ್ಯವಾಗಿದೆ ನಾನು ರಾಜ್ಯಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರತಿಭೆಯಲ್ಲಿ ಪಾಲ್ಗೊಳ್ಳಲು ನನ್ನ ಗುರುಗಳು ಮಾರ್ಗದರ್ಶನ ಸಮಾಜ ಸ್ವೀಕರಿಸಿರುವ ರೀತಿಯ ಸಾಧನೆಗೆ ಸಾಧ್ಯವಾಗಿದೆ ಎಂಬುದನ್ನು ತಿಳಿಸಿದರು.

ಸ್ಥಳೀಯ ಪ್ರತಿಭೆಯನ್ನು ಗುರುತಿಸುವ ರೀತಿಯಲ್ಲಿ ಮಾತನಾಡಿದ ಮಾರುತಿ ಗುರಿಕಾರ್ ಅಕ್ಷತಾ ಇವರು ಮೂಲತಃ ಬಲ ಕುಟುಂಬದಿಂದ ಬಂದಿದ್ದು ಅಗಾಧ ಪ್ರತಿಭೆಯನ್ನು ಒಂದೇ ಪ್ರಥಮ ಪಿಯುಸಿ ಹಂತದಲ್ಲಿ ರಾಜ್ಯಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಹಲವಾರು ಪ್ರಶಸ್ತಿ ಮತ್ತು ಪಡೆಯುವುದರ ಮೂಲಕವಾಗಿ ನಮ್ಮ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಮಾದರಿಯಾಗಿದ್ದಾರೆ ಆಕೆಯ ಶ್ರಮ ಪರಿಶ್ರಮ ತ್ಯಾಗ ಸಮಯ ಪ್ರಜ್ಞೆ ಕಾರಣದಿಂದಾಗಿ ಇಂದು ಮಹಿಳೆ ಸನ್ಮಾನ ಗೊಳ್ಳುತ್ತಿರುವುದು ಎಂಬುದನ್ನು ತಿಳಿಸಿದರು.

ಕಾರ್ಯಕ್ರಮದ ಅತಿಥಿಯಾಗಿದ್ದ ಶ್ರೀಮತಿ ದೀಪ ಬೆಟ್ಟಿಗೇರಿ ಅವರು ಮಾತನಾಡಿ ಮಹಿಳೆಯರ ಪ್ರತಿಯೊಂದು ಸಮಸ್ಯೆಗೂ ಅದರದೇ ಆದ ಪರಿಹಾರಗೊಳ್ಳುತ್ತವೆ ಆ ಪರಿಹಾರವನ್ನು ನಾವು ಉಳಿಸಿಕೊಳ್ಳುವುದರ ಮೂಲಕವಾಗಿ ನಮ್ಮ ಸಾಧನೆಗೆ ನಾವೇ ಪರಿಶ್ರಮಪಡಬೇಕಾಗುತ್ತದೆ ಎಂಬುದನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಪ್ರಾಚಾರ್ಯರಾದ ಡಾಕ್ಟರ್ ವೀರೇಶ್ ಕುಮಾರ್ ಮಾತನಾಡಿ ಇಂಥ ಕಾರ್ಯಕ್ರಮಗಳಲ್ಲಿ ಸಾಧಕರನ್ನು ಗುರುತಿಸುವುದು ಮೂಲಕ ಸಾಧಕರ ಸಾಧನೆಗಳನ್ನು ನಾವೆಲ್ಲರೂ ಅವುಗಳನ್ನು ಸ್ವೀಕರಿಸಿ ನಮ್ಮ ಜೀವನಕ್ಕೆ ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸಿದರು.

ಉಪನ್ಯಾಸಕರಾದ ವಾಸನ ಗೌಡ ಮಾತನಾಡಿ, ತಮ್ಮ ಸ್ವರಚಿತ ಕವನವನ್ನು ವಾಚಿಸಿದರು ಮೂಲಕವಾಗಿ “ಮಹಿಳೆ ಶಾಂತಿಯ ಪ್ರತಿರೂಪ, ಅವಳಲ್ಲಿ ಇರುವುದು ಕ್ರಾಂತಿಯ ಬಹುರೂಪ ಶಾಂತಿಯು ನೀನೇ, ಅಶಾಂತಿಯು ನೀನೇ, ಎಲ್ಲದರ ಕ್ರಾಂತಿಯು ನೀನೇ, ನಿನಗಾಗಿ ಈ ದಿನ, ನಿನಗೆ ಕೃತಜ್ಞತೆ ಸಲ್ಲಿಸಲು ನಮಗೆ ಸಿಕ್ಕಿರುವ ಶುಭದಿನ” ಎಂದು ಹೇಳುವುದರ ಮೂಲಕ ವಾಗಿ ಮಹಿಳೆಯರ ಸಾಮರ್ಥ್ಯದ ಬಗ್ಗೆ ಮಹಿಳೆಯರ ಪರಿಶ್ರಮದ ಬಗ್ಗೆ ತ್ಯಾಗದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಶಿವನಗೌಡ ಪೊಲೀಸ್ ಪಾಟೀಲ್ ಮಾತನಾಡಿದರು, ಸ್ವಾಗತವನ್ನು ಉಪನ್ಯಾಸಕರಾದ ಹನುಮಂತಪ್ಪ ಅಗಲಕೇರಿ, ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ರವಿ ಸುಣ್ಣಗಾರ ಅವರು ಮಾಡಿದರು, ಪ್ರಾರ್ಥನೆಯನ್ನು ಕುಮಾರಿ ಭವ್ಯ ನಿರ್ವಹಿಸಿದರು, ವಂದನಾರ್ಪಣೆಯನ್ನು ಉಪನ್ಯಾಸಕರಾದ ದೇವರೆಡ್ಡಿ ಅವರು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಹನುಮಂತಪ್ಪ ಆಲೂರು, ಬಾಳಪ್ಪ ತಳವಾರ್, ದೀಪ ಬೆಟಗೇರಿ, ಶಿವಯ್ಯ, ಈಶಪ್ಪ ದೊಡ್ಡಮನಿ, ಶ್ರೀಧರ ವಾಣಿ, ಕುಬೇರಪ್ಪ ದಂಡಿ, ಪದವಿಪೂರ್ವ ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

Please follow and like us: