ಹೆಣ್ಣು ಹುಟ್ಟಿದರೆ ಹೊರೆ ಎಂದುಕೊಳ್ಳದೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕರಿಸಿ: DC ಸುರಳ್ಕರ್

ಅಂತರಾಷ್ಟಿçÃಯ ಮಹಿಳಾ ದಿನಾಚರಣೆ-2022


ಕೊಪ್ಪಳ, ಮನೆಯಲ್ಲಿ ಹುಟ್ಟಿದ ಮಗು ಹೆಣ್ಣು ಎಂದ ಕೂಡಲೇ ಹೆತ್ತವರ ಸಂತೋಷವೇ ಮಾಯವಾಗುತ್ತದೆ. ಅದರ ಬದಲು ಹೆಣ್ಣು ಮಗು ಹೊರೆ ಎಂದುಕೊಳ್ಳದೆ ಅವಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕರಿಸಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಮಂಗಳವಾರದAದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್., ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ-2022 ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಗು ಹುಟ್ಟಿದ ಮೇಲೆ ಅವಳಿಗೆ ಎಂತಹ ಶಿಕ್ಷಣ ಕೊಡಿಸಬೇಕು. ಅವಳನ್ನು ಹೇಗೆ ಸ್ವಾವಲಂಬಿ ಆಗಿಸಬೇಕು ಎಂಬುದರ ಬದಲಾಗಿ ಅವಳಿಗೆ ಸಾಧ್ಯವಾದಷ್ಟು ಬೇಗ ಮದುವೆ ಮಾಡಿಕೊಡಬೇಕು ಎಂದೇ ಬಹುತೇಕ ಪಾಲಕರು ಯೋಚಿಸುತ್ತಾರೆ. ಆದರೆ ಇಂತಹ ವಿಚಾರ ತಪ್ಪು. ಮಗ-ಮಗಳು ಎಂಬ ಬೇಧವಿಲ್ಲದೆ ಮಗಳಿಗೂ ಉತ್ತಮ ಶಿಕ್ಷಣ ಕೊಡಿಸಬೇಕು. ಕನಿಷ್ಠ ಪಕ್ಷ ತನ್ನೊಬ್ಬಳ ಬದುಕನ್ನು ಸ್ವಾವಲಂಬಿಯಾಗಿ ಕಟ್ಟಿಕೊಳ್ಳುವಷ್ಟು ಶಿಕ್ಷಣ ಮತ್ತು ಸಮಯವನ್ನು ಪಾಲಕರು ಕೊಡಬೇಕು ಎಂದು ಅವರು ಹೇಳಿದರು.
ಇಂದು ಆಚರಿಸುತ್ತಿರುವ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯು ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರö್ಯವನ್ನು ಮಹಿಳೆಯರಿಗೆ ತಿಳಿಸಿಕೊಡುವ ಉದ್ದೇಶದಿಂದ ಆರಂಭವಾಗಿದೆ. ಹೆಣ್ಣು ಮಕ್ಕಳು ಉನ್ನತ ಶೈಕ್ಷಣಿಕ ಸಾಧನೆಯಿಂದ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡರೆ ಮುಂದಿನ 50 ವರ್ಷಗಳಲ್ಲಿ ಇಂತಹ ದಿನಾಚರಣೆಯನ್ನು ಆಚರಿಸುವ ಅಗತ್ಯವೇ ಇರುವುದಿಲ್ಲ. ಹೆಣ್ಣು ಮಕ್ಕಳಿಗೆ ಮುಖ್ಯವಾಗಿ ಸ್ವಾತಂತ್ರö್ಯ ಅದರಲ್ಲೂ ಆರ್ಥಿಕ ಸ್ವಾತಂತ್ರö್ಯ ಅತ್ಯಗತ್ಯವಾಗಿ ಇರಬೇಕು. ಪ್ರತಿಯೊಂದಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತವಾದರೆ ಸಹಜವಾಗಿಯೇ ಮಹಿಳೆಯು ಎಲ್ಲ ಸ್ವಾತಂತ್ರö್ಯವನ್ನು ತಾನಾಗಿಯೇ ಕಳೆದುಕೊಳ್ಳುತ್ತಾಳೆ. ಆದ್ದರಿಂದ ಪೋಷಕರು ಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಸ್ವತಂತ್ರವಾಗಿ ಯೋಚಿಸುವ, ನಿರ್ಧಾರ ಕೈಗೊಳ್ಳುವ, ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವ ಗುಣಗಳನ್ನು ಚಿಕ್ಕಂದಿನಿAದಲೇ ರೂಢಿಸಬೇಕು. ಹೆಣ್ಣು ಮಕ್ಕಳು ಕೂಡ ತಮ್ಮ ಸುತ್ತ ತಾವೇ ನಿರ್ಬಂಧಗಳನ್ನು ಹಾಕಿಕೊಳ್ಳದೆ ಪಾಲಕರು ನೀಡಿದ ಅವಕಾಶವನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣ ಮತ್ತು ಸ್ವಾವಲಂಬಿ ಉದ್ದೇಶಗಳು ಮಾತ್ರ ಹೆಣ್ಣನ್ನು ಸ್ವತಂತ್ರವಾಗಿರಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ದೇವೇಂದ್ರ ಪಂಡಿತ್ ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರನ್ನು ದೇವತೆ ರೂಪದಲ್ಲಿ ಪೂಜಿಸುತ್ತಾರೆ. ಆದರೆ ಇಂತಹ ದೇಶದಲ್ಲಿಯೇ ಮಹಿಳೆಯರ ರಕ್ಷಣೆಗಾಗಿ ಅತಿ ಹೆಚ್ಚು ಕಾನೂನುಗಳಿರುವುದು ವಿಪರ್ಯಾಸದ ಸಂಗತಿ. ಹೆಣ್ಣು ಮಕ್ಕಳನ್ನು ದೇವತೆ ಎಂದು ಪೂಜಿಸುವುದು ತಪ್ಪಲ್ಲ ಆದರೆ ಆ ಹೆಸರಿನಲ್ಲಿ, ಶಾಸ್ತçಗಳ ರೂಪದಲ್ಲಿ ಮಹಿಳೆಯರಿಗೆ ಅಲಿಖಿತ ನಿಯಮಗಳನ್ನು ಹುಟ್ಟಿನಿಂದಲೇ ವಿಧಿಸಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂಬ ಒತ್ತಡವನ್ನು ಮಾನಸಿಕವಾಗಿ ಅವಳ ಮೇಲೆ ಹೇರಲಾಗುತ್ತದೆ. ದಿನ ಕಳೆದಂತೆ ಮಹಿಳೆಯು ಅವುಗಳನ್ನೇ ಬದುಕಿನ ಮೌಲ್ಯಗಳು ಎಂಬರ್ಥದಲ್ಲಿ ರೂಢಿಸಿಕೊಂಡು, ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಸಮಾಜ ಹಾಕಿದ ಅಲಿಖಿತ ನಿಯಮಗಳ ವೃತ್ತದಿಂದ ಹೊರಬರಲು ಕಾನೂನು ಹೋರಾಟ ಮಾಡುವ ಸಂದರ್ಭದಲ್ಲಿ ನಾವಿಂದು ಇದ್ದೇವೆ ಎಂದು ಹೇಳಿದರು.
ದೈನಂದಿನ ಬದುಕಿನಲ್ಲಿ ಹುಟ್ಟಿನಿಂದ ಸಾಯುವವರೆಗೂ ಮಹಿಳೆಗೆ ಒಂದಲ್ಲ ಒಂದು ರೀತಿಯಲ್ಲಿ ಕಾನೂನಿನ ರಕ್ಷಣೆ ಇಂದು ಅತ್ಯಗತ್ಯವಾಗಿದೆ. ವಿಷಾದವೆಂದರೆ, ಪ್ರತಿ ವಿಷಯದಲ್ಲೂ ಕಾನೂನು ನೆರವು ಪಡೆಯುವ ಅವಕಾಶವಿದಾಗ್ಯೂ ಕೂಡ ಮಹಿಳೆಯರಿಗೆ ತಮ್ಮ ಹಕ್ಕುಗಳು, ರಕ್ಷಣೆಯ ಕಾನೂನುಗಳ ಬಗ್ಗೆ ತಿಳುವಳಿಕೆ ಕಡಿಮೆ. ಪ್ರತಿ ವರ್ಷ ಮಾರ್ಚ್ 08 ರಂದು ಮಾತ್ರ ಮಹಿಳೆಯರನ್ನು ರಕ್ಷಿಸುವ, ಅವರ ಹಕ್ಕುಗಳನ್ನು ದೊರಕಿಸಿಕೊಡುವ ಮತ್ತು ಗೌರವಿಸುವ ರೂಢಿ, ನಿಯಮಗಳು ಪಾಲನೆಯಾಗುತ್ತವೆ. ಆದರೆ ದೈನಂದಿನ ಬದುಕಲ್ಲಿ ಹೆಣ್ಣು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಲೇ ಇದ್ದಾಳೆ. ಸಾಲದೆಂಬAತೆ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ಒಳಪಡಿಸಿ ಅವಳ ಬದುಕುವ ಹಕ್ಕನ್ನೇ ಕಿತ್ತುಕೊಳ್ಳಲಾಗುತ್ತದೆ. ಬಾಲ್ಯ ವಿವಾಹ ಮಾಡಿದವರ ಮತ್ತು ಬಾಲ್ಯ ವಿವಾಹದಲ್ಲಿ ಪಾಲ್ಗೊಂಡವರಿಗೆ ಕಠಿಣ ಶಿಕ್ಷೆಗಳಿವೆ. ಆದ್ದರಿಂದ ನಿಮ್ಮ ಸುತ್ತಲಿನ ಪೋಷಕರಿಗೆ, ಮಕ್ಕಳಿಗೆ ಬಾಲ್ಯವಿವಾಹದ ದುಷ್ಪರಿಣಾಮ, ಅದಕ್ಕಿರುವ ಶಿಕ್ಷೆಗಳು, ವಿವಿಧ ರೀತಿಯ ದೌರ್ಜನ್ಯಗಳು ಮತ್ತು ಕಾನೂನು ಪರಿಹಾರಗಳ ಬಗ್ಗೆ ತಿಳುವಳಿಕೆ ಮೂಡಿಸಿ. ಅಗತ್ಯ ಸಂದರ್ಭಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಹಾಯವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ಗ್ರಾಮ ಅಥವಾ ಪಟ್ಟಣ ಯಾವುದೇ ಆದರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯವಾಗಿ ಬೇಕು. ಶಿಕ್ಷಣವೇ ಶಕ್ತಿ ಎಂಬುದನ್ನು ಅರಿತು ಪಾಲಕರು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಆರ್ಥಿಕವಾಗಿ ಸದೃಢಗೊಳಿಸಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಮನೆಯ ಮಗಳು ಶಿಕ್ಷಣವಂತೆಯಾದರೆ ಆ ಮನೆಗೂ ಅನುಕೂಲವಾಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳನ್ನು ರಕ್ಷಿಸಲು ಕಾನೂನು ನೆರವು ಪಡೆಯುವ ಹಂತಕ್ಕೆ ಹೋಗದೆ ತನ್ನ ಹಕ್ಕನ್ನು ತಾನು ಅರಿತು ಬದುಕುವಂತೆ ಹೆಣ್ಣು ಮಕ್ಕಳನ್ನು ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಮಾರ್ಚ್ 21 ರಂದು ಹಮ್ಮಿಕೊಂಡಿರುವ ಉದ್ಯೋಗ ಮೇಳದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಫೌಜಿಯಾ ತರನ್ನುಮ್ ಅವರಿಗೆ ಸನ್ಮಾನಿಸಲಾಯಿತು. ಅಳವಂಡಿಯ ಶ್ರೀ ಬಾಂಧವ್ಯ ಸಂಜೀವಿನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟ ಸೇರಿದಂತೆ ವಿಜ್ಞಾನ ಪರೀಕ್ಷೆಯಲ್ಲಿ, ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ, ಎನ್.ಆರ್.ಎಲ್.ಎಂ, ಅಂಗನವಾಡಿ, ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಲಘು ವಾಹನ ತರಬೇತಿ ಪಡೆದ 34 ಮಹಿಳೆಯರಿಗೆ ಚಾಲನಾ ಪರವಾನಗಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್. ಸ್ವಾಗತಿಸಿದರು. ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ನಿರೂಪಿಸಿದರು. ಚೈತ್ರಾ ಹಾಗೂ ಸಂಗಡಿಗರು ನಾಡಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಸಂದರ್ಭ ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶರಣ ಬಸವರಾಜ, ಮುಖ್ಯ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಪಾಯಲ್ ಸುರಳ್ಕರ್, ಕವಿತಾ ಎಂ., ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಅಂಗನವಾಡಿ, ಎಸ್‌ಬಿಎಂ ಕಾಯಕರ್ತೆಯರು ಮುಂತಾದವರು ಉಪಸ್ಥಿತರಿದ್ದರು

Please follow and like us: