ಗಡಿಪಾರು ಗೊಂದಲ : ಇನ್ನೂ 13 ಜನರ ಆದೇಶ ಬಾಕಿ

ಕೊಪ್ಪಳ : ನಿನ್ನೆ ಪೋಲಿಸ್ ಇಲಾಖೆಯಿಂದ ಹೊರಡಿಸಲಾದ ಗಡಿಪಾರು ಆದೇಶದ ಪ್ರಕಟಣೆ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆಯೇ ಈ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಈಗ ಮತ್ತೊಮ್ಮೆ ಗಡಿಪಾರು ಮಾಡಲಾಗಿದೆಯಾ? ಎನ್ನುವ ಪ್ರಶ್ನೆಗಳು ಕೇಳಿಬಂದಿವೆ.
ಆದರೆ ಸೂಕ್ಷ್ಮವಾಗಿ ಇಲಾಖೆಯ ಪ್ರಕಟಣೆಯ ಗಮನಿಸಿದವರಿಗೆ ಸ್ಪಷ್ಟವಾಗಿ ಗೊತ್ತಾಗುತ್ತೆ ಇದು ಈ ವರ್ಷದ ಹೊಸ ಗಡಿಪಾರು ಆದೇಶ ಅಲ್ಲ ಎನ್ನುವುದು ಗೊತ್ತಾಗುತ್ತೆ. ಪ್ರಕಟಣೆಯಲ್ಲಿ ನೀಡಿರುವ ಮಾಹಿತಿಯಂತೆ

ಕೊಪ್ಪಳ ಜಿಲ್ಲೆಯಲ್ಲಿ ಮಟ್ಕಾ , ಇಸ್ಪೀಟ್ ಜೂಜಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ 2019 , 2020 ಹಾಗೂ 2021 ನೇ ಸಾಲಿನಲ್ಲಿ ಕೊಪ್ಪಳ ನಗರ ಮತ್ತು ಜಿಲ್ಲೆಯ ಇತರೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ , ಮಟ್ಕಾ , ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಈಗಾಗಲೇ ಜಿಲ್ಲೆಯ ಪೊಲೀಸ್ ಇಲಾಖೆಯಿಂದ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರುತ್ತದೆ . ನಿರಂತರವಾಗಿ ಮಟ್ಕಾ , ಇಸ್ಪೀಟ್ ಜೂಜಾಟದಂತಹ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಮತ್ತು ನಡೆಸುವವರ ವಿರುದ್ಧ ಸೂಕ್ತ ನಿಗಾವಣೆ ವಹಿಸಿ ಗಡೀಪಾರು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ . ತಾವರಗೇರಾ ಪೊಲೀಸ್ ಠಾಣೆ ಕಾರಟಗಿ ಪೊಲೀಸ್‌ ಠಾಣೆ ರೂಢಿಗತವಾಗಿ ಸದರಿ ಮಟ್ಕಾ ಜೂಜಾಟದಲ್ಲಿ ತೊಡಗಿರುವ 27 ವ್ಯಕ್ತಿಗಳನ್ನು ಗಡಿಪಾರು ಮಾಡುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಕಛೇರಿಗೆ ಶಿಫಾರಸ್ಸು ಕಳುಹಿಸಲಾಗಿದ್ದು , ಅದರಲ್ಲಿ ಈ ಕೆಳಗಿನ 14 ವ್ಯಕ್ತಿಗಳ ವಿರುದ್ಧ ಗಡೀಪಾರು ಆದೇಶ ಹೊರಡಿಸಲಾಗಿದೆ , ಇನ್ನೂ 13 ವ್ಯಕ್ತಿಗಳ ವಿರುದ್ಧ ಗಡಿಪಾರು ಆದೇಶ ಬಾಕಿ ಇರುತ್ತದೆ .
ಎಂದು ಹೇಳಲಾಗಿದೆ ಅಂದರೆ ಈ 14 ವ್ಯಕ್ತಿಗಳ ಗಡಿಪಾರು ಆದೇಶ ಈಗಾಗಲೇ 2019,20,21ನೇ ಸಾಲಿನಲ್ಲಿಯೇ ಮಾಡಲಾಗಿದೆ. ಕೆಲವರು ಈ ಆದೇಶವನ್ನು ಪ್ರಶ್ನಿಸಿ ಕೋರ್ಟ ಮೊರೆ ಹೋಗಿದ್ದಾರೆ. ಕೆಲವರು ಗಡಿಪಾರಾಗಿದ್ದಾರೆ. ಇನ್ನೂ ಕೆಲವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಮತ್ತೆ ಕೆಲವರು ಗಡಿಪಾರು ಶಿಕ್ಷೆ ಅನುಭವಿಸಿ ವಾಪಸ್ ಆಗಿ ಸಹಜ ಜೀವನ ನಡೆಸುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇನ್ನೂ 13 ವ್ಯಕ್ತಿಗಳ ವಿರುದ್ದ ಗಡಿಪಾರು ಆದೇಶ ಬಾಕಿ ಇದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಮುಂದಿನ ದಿನಗಳಲ್ಲಿ ಮಟ್ಕಾ , ಇಸ್ಪೀಟ್ ಜೂಜಾಟದಂತಹ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಮತ್ತು ನಡೆಸುವವರ ವಿರುದ್ಧ ಸೂಕ್ತ ನಿಗಾವಣೆ ವಹಿಸಿ ಗಡೀಪಾರು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿಯವರು ಎಚ್ಚರಿಕೆ ನೀಡಿದ್ದಾರೆ.

Please follow and like us: