ಕೊಪ್ಪಳ ಜಿಲ್ಲೆಯಿಂದ ಗಡಿಪಾರಾದ ೧೪ ಜನ ಯಾರು ಗೊತ್ತಾ?

ಕೊಪ್ಪಳ : ಕೊಪ್ಪಳ ನಗರ ಠಾಣೆ ಕೊಪ್ಪಳ ಜಿಲ್ಲೆಯಲ್ಲಿ ಮಟ್ಕಾ , ಇಸ್ಪೀಟ್ ಜೂಜಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ 2019 , 2020 ಹಾಗೂ 2021 ನೇ ಸಾಲಿನಲ್ಲಿ ಕೊಪ್ಪಳ ನಗರ ಮತ್ತು ಜಿಲ್ಲೆಯ ಇತರೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ , ಮಟ್ಕಾ , ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಈಗಾಗಲೇ ಜಿಲ್ಲೆಯ ಪೊಲೀಸ್ ಇಲಾಖೆಯಿಂದ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರುತ್ತದೆ . ನಿರಂತರವಾಗಿ ಮಟ್ಕಾ , ಇಸ್ಪೀಟ್ ಜೂಜಾಟದಂತಹ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಮತ್ತು ನಡೆಸುವವರ ವಿರುದ್ಧ ಸೂಕ್ತ ನಿಗಾವಣೆ ವಹಿಸಿ ಗಡೀಪಾರು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ . ತಾವರಗೇರಾ ಪೊಲೀಸ್ ಠಾಣೆ ಕಾರಟಗಿ ಪೊಲೀಸ್‌ ಠಾಣೆ ರೂಢಿಗತವಾಗಿ ಸದರಿ ಮಟ್ಕಾ ಜೂಜಾಟದಲ್ಲಿ ತೊಡಗಿರುವ 27 ವ್ಯಕ್ತಿಗಳನ್ನು ಗಡಿಪಾರು ಮಾಡುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಕಛೇರಿಗೆ ಶಿಫಾರಸ್ಸು ಕಳುಹಿಸಲಾಗಿದ್ದು , ಅದರಲ್ಲಿ ಈ ಕೆಳಗಿನ 14 ವ್ಯಕ್ತಿಗಳ ವಿರುದ್ಧ ಗಡೀಪಾರು ಆದೇಶ ಹೊರಡಿಸಲಾಗಿದೆ , ಇನ್ನೂ 13 ವ್ಯಕ್ತಿಗಳ ವಿರುದ್ಧ ಗಡಿಪಾರು ಆದೇಶ ಬಾಕಿ ಇರುತ್ತದೆ .

. ಗಡಿಪಾರಾದ ವ್ಯಕ್ತಿಗಳ ವಿವರ

1. ಶಿವರೆಡ್ಡಿ ತಂದೆ ದೇವರೆಡ್ಡಿ ಸಾ : ಬೆಕಿನಗರ , ಕೊಪ್ಪಳ

೨.ಸೈಯ್ಯದ್ ಮಹಿಮೂದ ಮಸೇನಿ ತಂದೆ ಸೈಯ್ಯದ ಖಾಲೀದ ಸಾ : ಕೊಪ್ಪಳ

3. ಸುಮಾ ಗಂಡ ರವೀಂದ್ರ ಹಿರೇಮಠ ಸಾ ಬಸಪ್ಪ ದಿವಟರ ನಗರ ಕೊಪ್ಪಳ

4. ರಾಮಣ್ಣ ತಂದೆ ತಿಮ್ಮಣ್ಣ ಈಳಿಗೇರಾ ಸಾ : ಮುದೇನೂರು 5. ಕುಮಾರ ತಂದೆ ಮುದಕಪ್ಪ ಪಲ್ಲೇದ ಸಾ : ಮರ್ಲಾನಹಳ್ಳಿ ಜಿ : ಕೊಪ್ಪಳ 6. ಆಂಜಿನೇಯ ತಂದೆ ನಾರಾಯಣಪ್ಪ ದುಡೂ ಸಾ : ಶಿವನಗರ ಕಾರಟಗಿ 7. ಶರಣಪ್ಪ ತಂದೆ ಶಿವಬಸಪ್ಪ ಗದ್ದಿ ಮರು : 45 ವರ್ಷ ಸಾ : ಜೆ.ಪಿ ನಗರ ಕಾರಟಗಿ 8. ಆಟೋ ಶಂಕರ್ ಲಿಂಗಪ್ಪ ತಂದೆ ಲಚಮಪ್ಪ @ ಲಕ್ಷ್ಮಪ್ಪ ಗಂಗಾವತಿ ನಗರ 9. ಶಾಮೀದ್ ಅಲಿ @ ಶಾಮೀದಸಾಬ ತಂದೆ ಹುಸೇನಸಾಬ ಗಂಗಾವತಿ 10. ನರಸಪ್ಪ ತಂದೆ ಶಿವಪ್ಪ ಕುಷ್ಟಗಿ ಗಂಗಾವತಿ ನಗರ ಪೊಲೀಸ್ ಠಾಣೆ 2 ಕುಷ್ಟಗಿ ಪೊಲೀಸ್ ಠಾಣೆ ಮುನಿರಾಬಾದ್ ಶಾಕ ಕನಕಗಿರಿ ಪೊಲೀಸ್ ಠಾಣೆ II , ಯಮನೂರ ತಂದೆ ಮೇಘರಾಜ ಸಿಂಧನೂರ ಸಾ : ತಗ್ಗಿನ ಓಣಿ ಕುಷ್ಟಗಿ 12. ರವಿ ತಂದೆ ಯಮನಪ್ಪ ಕೊಡದಾಳ ಸಾ : ನಾಗೇಶನಹಳ್ಳಿ ತಾ : ಜಿ . ಕೊಪ್ಪಳ 13. ಪಾಂಡು ತಂದೆ ಜಿ.ಕಣ್ಣನ್ ಸಾ : ಹೊಸಲಿಂಗಾರ ತಾ : ಜಿ : ಕೊಪ್ಪಳ 14. ವಿಶ್ವನಾಥ ಸ್ವಾಮಿ ತಂದೆ ಸಂಗಯ್ಯ ಸ್ವಾಮಿ ಸಾ : ಕನಕಗಿರಿ ತಾ : ಕನಕಗಿರಿ ಸಾಮಾಜಿಕ ಪಿಡುಗು ಆಗಿರುವ ಮಟ್ಕಾ , ಇಸ್ಪೀಟ್ ಜೂಜಾಟವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು , ಮಟ್ಕಾ , ಇಸ್ಪೀಟ್ ಜೂಜಾಟ ಮತ್ತು ಇತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡೀಪಾರು ಮಾಡಲು ಮತ್ತು ಗೂಂಡಾ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ.

Please follow and like us: