ಈರಪ್ಪ ಬಿಜಲಿಯವರ ಶ್ವೇತ ಹೃದಯ ಮತ್ತು ಮುಗಿಲ ಸಂಚಲನ ಲೋಕಾರ್ಪಣೆ : ಸನ್ಮಾನ

ಸಾಹಿತಿ ಈರಪ್ಪ ಬಿಜಲಿಯವರಿಗೆ ಹನುಮಂತಪ್ಪ ಅಂಡಗಿ ಸನ್ಮಾನ
ಕೊಪ್ಪಳ : ಸೌಜನ್ಯ ಪ್ರಕಾಶನ ಭಾಗ್ಯನಗರ ಇವರ ಆಯೋಜಕತ್ವದಲ್ಲಿ ಕೊಪ್ಪಳದ ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡ ಸಾಹಿತಿ ಈರಪ್ಪ ಬಿಜಲಿಯವರ ಚೊಚ್ಚಲ ಕೃತಿಗಳಾದ ಶ್ವೇತ ಹೃದಯ ಮತ್ತು ಮುಗಿಲ ಸಂಚಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಹಿತಿ ಈರಪ್ಪ ಬಿಜಲಿಯವರನ್ನು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸನ್ಮಾನಿಸಿದರು.


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ, ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ, ಹಿರಿಯ ಸಾಹಿತಿಗಳಾದ ಎ.ಎಂ.ಮದರಿ, ಈಶ್ವರ ಹತ್ತಿ, ಡಿ.ಎಂ.ಬಡಿಗೇರ, ಸಾವಿತ್ರಿ ಮುಜುಮದಾರ, ಸುರೇಶ ಕಂಬಳಿ, ಡಾ.ಪವನಕುಮಾರ ಗುಂಡೂರ, ಶಿಕ್ಷಕರಾದ ಸುಭಾಷರೆಡ್ಡಿ ಕಿನ್ನಾಳ, ವೀರೇಶ ಅರಳಿಕಟ್ಟಿ, ಬಸವರಾಜ ಕೋಮಲಾಪುರ, ಮಹೇಶ ಟಂಕಸಾಲಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸೌಜನ್ಯ ಪ್ರಕಾಶನ ಭಾಗ್ಯನಗರ ಇವರ ಆಯೋಜಕತ್ವದಲ್ಲಿ ಕೊಪ್ಪಳದ ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡ ಸಾಹಿತಿ ಈರಪ್ಪ ಬಿಜಲಿಯವರ ಚೊಚ್ಚಲ ಕೃತಿಗಳಾದ ಶ್ವೇತ ಹೃದಯ ಮತ್ತು ಮುಗಿಲ ಸಂಚಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಹಿತಿ ಈರಪ್ಪ ಬಿಜಲಿಯವರನ್ನು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸನ್ಮಾನಿಸಿದರು.

Please follow and like us: