ಕೊಪ್ಪಳ ನಗರದಲ್ಲಿ ಮಾ. 07 ರಂದು ನೀರು ಸರಬರಾಜು ಕಾರ್ಯ ಸ್ಥಗಿತ


ಕೊಪ್ಪಳ, ಪೈಪ್‌ಲೈನ್ ಜೋಡಣೆ ಕಾರ್ಯದ ನಿಮಿತ್ತ ಕೊಪ್ಪಳ ನಗರದಲ್ಲಿ ಮಾ. 07 ರಂದು ನೀರು ಸರಬರಾಜು ಕಾರ್ಯ ಸ್ಥಗಿತವಾಗಲಿದೆ.
ಕೊಪ್ಪಳ ನಗರದ ಗವಿಮಠ ರಸ್ತೆಯಲ್ಲಿರುವ ಕುಣಿಕೇರಿ ಕ್ರಾಸ್‌ನಲ್ಲಿ 600 ಎಂ.ಎಸ್. ಪೈಪ್‌ಲೈನ್ ನಿಂದ ಹೊಸದಾಗಿ ನಿರ್ಮಿಸಿರುವ ಓ.ಹೆಚ್.ಟಿ ಟ್ಯಾಂಕ್‌ಗೆ ಪೈಪ್‌ಲೈನ್ ಜೋಡಣೆ ಮಾಡುವ ಕಾಮಗಾರಿಯನ್ನು ನಿರ್ವಹಿಸಬೇಕಾಗಿದೆ. ಆದಕಾರಣ ಮಾ. 07 ರಂದು ಕೊಪ್ಪಳ ನಗರಕ್ಕೆ ನೀರು ಸರಬರಾಜು ಕಾರ್ಯ ಸ್ಥಗಿತಗೊಳ್ಳಲಿದ್ದು, ನಗರದ ಎಲ್ಲಾ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Please follow and like us: