ಹಾಲವರ್ತಿಯಲ್ಲಿ ಜಡೇಶ್ವರ ಜಾತ್ರಾ ಮಹೋತ್ಸವ

ಕೊಪ್ಪಳ : ಇದೇ ದಿ.೬,೭ ಮತ್ತು ೮ ರಂದು ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಶ್ರೀ ಜಡೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವ ನಿಮಿತ್ತ ಕುಂಭೋತ್ಸವ, ಸಾಮೂಹಿಕ ವಿವಾಹಗಳು, ಮಹಾ ರಥೋತ್ಸವ ಜೊತೆಗೆ ಶ್ರೀ ಜಡೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಕನಕಗುರು ಪೀಠ ತಿಂಥಣಿ ಬ್ರಿಡ್ಜ್ ನ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು, ಗವಿಮಠ ಶ್ರೀಗಳು, ಹಾಲವರ್ತಿಯ ಜಡೇಶ್ವರ ಮಠದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ಹಲವಾರು ಶ್ರೀಗಳು ಗಣ್ಯರು ಭಾಗವಹಿಸಲಿದ್ದಾರೆ. ದಿನಾಂಕ 7-3-2022 ರಂದು ‘ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ‘ ಸಾಮಾಜಿಕ ಕ್ರಾಂತಿಕಾರಿ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಸದ್ಭಕ್ತರು ಆಗಮಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಹಾಲವರ್ತಿ ಗ್ರಾಮದ ಆನಂದ ಕಿನ್ನಾಳ ಗ್ರಾಮ ಪಂಚಾಯತ್ ಸದಸ್ಯರು, ಮುದಿಯಪ್ಪ ಆದೋನಿ ಗ್ರಾಮ ಪಂಚಾಯತ್ ಸದಸ್ಯರು, ಹನುಮನಗೌಡ ರೆಡ್ಡೇರ ಗ್ರಾಮ ಪಂಚಾಯತ್ ಸದಸ್ಯರು, ದೇವಪ್ಪ ಗೊರವರ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಲವರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

Please follow and like us: