ಸಂವಿಧಾನದ ಆಶಯಗಳಂತೆ ಸಾಹಿತಿ ಎ.ಎಸ್ ಮಕಾನದಾರ ಪುತ್ರಿಯ ವಿವಾಹ

ಸರ್ವಧರ್ಮ ಸಮನ್ವಯ ಸೂತ್ರದ ಅಡಿಯಲ್ಲಿ ಜರುಗಿದ ಅಪರೂಪದ ನಿಕಾಹ ಸಮಾರಂಭ

ಗದಗ 1:ಗಜೇಂದ್ರಗಡವು ಭಾವೈಕ್ಯತೆಯ ತವರೂರಾಗಿದ್ದು, ಇಂಥ ನೆಲದ ಕವಿಯಾಗಿರುವ ಎ.ಎಸ್ ಮಕಾನದಾರಅವರ ಕವಿತೆಗಳುಮಾತ್ರ ಜನಪ್ರಿಯವಾಗಿಲ್ಲ ಅವರ ಆಲೋಚನೆ ಗಳು ಸಮಾಜಮುಖಿ ಯಾಗಿವೆ, ಟೆಕ್ಕೆದ ದರ್ಗಾದ ಮೂಲಕ ಭಾವೈಕ್ಯತೆ ಬೆಸೆಯುವವಲ್ಲಿ ಮಕಾನದಾರ ಸಹೋದರರ ಸಾಮಾಜಿಕ ಭದ್ಧತೆ, ಭಾಷಾಭಿಮಾನ ಶ್ಯಾಘನೀಯವಾದುದು.
ಇವರ ಸುಪುತ್ರಿಯ ಈ ವಿವಾಹೋತ್ಸವ ಕನ್ನಡ ಸಾಹಿತ್ಯ ಸಮ್ಮೇಳನ ದಂತೆ ರೂಪ ಪಡೆದಿದ್ದು ಕೌಟುಂಬಿಕ ಕಾರ್ಯಕ್ರಮ ಸಾಹಿತ್ಯ ಸಂಸ್ಕೃತಿ ಪ್ರತಿ ಬಿಂಬಿಸುವ ಮೂಲಕ ಕನ್ನಡಭಾಷಾ ಪ್ರೇಮದ ದ್ಯೋತಕವಾಗಿದೆ ಎಂದು ಬೆಳಗಾವಿ ಜಿಲ್ಲೆಯ ಚಿಂಚಲಿ ಮಠದ ಅಲ್ಲಮಪ್ರಭು ಸ್ವಾಮಿಗಳು ನುಡಿದರು.

ನಗರದಲ್ಲಿ ಜರುಗಿದ ಜಿಲ್ಲೆಯ ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಎ.ಎಸ್ ಮಕಾನದಾರ ಅವರ ಸುಪುತ್ರಿ ಅನ್‌ಫಿನಾ ಹಾಗೂ ಗಜೇಂದ್ರಗಡದ ಮಾಸೂಮ್ ಅಲಿ ಹವಾಲ್ದಾರ್ ಅವರ ಸುಪುತ್ರ ಮೈನುದ್ದೀನ್ ಇವರ ನಿಕಾಹ ಸಮಾರಂಭದಲ್ಲಿ ಸಮ್ಮುಖವಹಿಸಿ ಮಾತನಾಡಿ,
ಸೂಫಿ ಸಂತರು ಭಾವೈಕ್ಯತೆಗೆ, ಮನುಷ್ಯನ ಬದುಕಿಗೆ ಹತ್ತಿರವಾಗಿರುವ ನೀತಿ ಪಾಠಗಳಿಗೆ ಹೆಸರಾಗಿದ್ದು, ಅವರ ತತ್ವಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.

ಸರ್ವಧರ್ಮ ಸಮನ್ವಯ ಸೂತ್ರದ ಅಡಿಯಲ್ಲಿ ಜರುಗಿರುವ ಈ ಅಪರೂಪದ ನಿಕಾಹ ಸಮಾರಂಭದಲ್ಲಿ ಕುರಾನ್, ಹದೀಸ್ ಮತ್ತು ಸಂವಿಧಾನ ಸಾಕ್ಷಿಯಾಗಿ ನವಜೀವನಕ್ಕೆ ಕಾಲಿಟ್ಟಿರುವ ನೂತನ ದಂಪತಿಗಳ ಬದುಕು ಹ ಸನಾಗಿರಲಿ ಎಂದು ಹಾರೈಸಿದರು.
ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ,ಅರಳಿ ನಾಗರಾಜಅವರು ಮಾತನಾಡಿ, ನಮ್ಮ ದೇಶದಲ್ಲಿ ಹೋರಾಟವಾಗಬೇಕಾದಲ್ಲಿ ಹೊಂದಾಣಿಕೆಯಾಗಿದೆ, ಹೊಂದಾಣಿಕೆಯಾಗಬೇಕಾದಲ್ಲಿ ಹೋರಾಟವಾಗಿದೆ ಇಂಥ ದ್ವಂದ್ವಯುತ ಪರಿಸ್ಥಿತಿಯನ್ನು ಬದಲಿಸುವ ಅವಕಾಶ ಯುವ ಜನತೆಗೆ ಇದೆ. ದಂಪತಿಗಳಲ್ಲಿ ಪರಸ್ಪರ ವಿಶ್ವಾಸ ಬಹಳ ಮುಖ್ಯವಾಗಿದ್ದು, ಜೀವನದಲ್ಲಿ ಯಶಸ್ಸು ಕಾಣಲು ಹೊಂದಾಣಿಕೆ ಮನೋಭಾವದಿಂದ ದಂಪತಿಗಳು ಮುನ್ನಡೆಯಬೇಕಾಗುತ್ತದೆ ಎಂದರು. ಮಕಾನದಾರ ಅವರು ನಿಕಾಹ ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನದ ಪೂರ್ವಪೀಠಿಕೆಯ ಮುದ್ರಣ ಮೊದಲುಗೊಂಡು ಮದುವೆಯ ಸಕಲ ಆಚರಣೆಗಳೂ ಸಂವಿಧಾನಕ್ಕೆ ಪೂರಕವಾಗಿರುವಂತೆ ವಿನೂತನವಾಗಿ ವಿವಾಹೋತ್ಸವ ಜರುಗಿತು. ಮದುವೆಗೆ ದಯಮಾಡಿಸಿದವರಿಗೆ ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಪರಿಕಲ್ಪನೆಯಲ್ಲಿ ಕಲಾವಿದ,ಸಿ.ಎನ್. ಪಾಟೀಲ್ ಅವರ ಕುಂಚದಲ್ಲಿ ಮೂಡಿಬಂದ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಲಾಯಿತು.
ಸಮಾರಂಭ ದಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತ ಮಠದ
ಶಾಂತಲಿಂಗ ಸ್ವಾಮೀಜಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು ಟೆಕ್ಕೆದ ದರ್ಗಾ ದ ಪೀಠಾಧಿಕರಿಗಳಾದಹಜರತ್ ಸಯ್ಯದ್ ನಿಜಾಮುದ್ದಿನ ಶಾ ಅವರ ಪೂರ್ವಶ್ರಮದ ತಂದೆ ಮಾಸೂಮ್ಅಲಿ ಮಕಾನದಾರ ಅಡವೇಂದ್ರ ಸ್ವಾಮೀಜಿ ಮಠದ ಶ್ರೀಗಳು, ಮಾಜಿ ಶಾಸಕ.ಡಿ ಆರ್ ಪಾಟೀಲ್, ಹಾಜಿ ಮೌಲಾನ ಮೈನುದ್ದಿನ್ ಸಾಹೇಬ, ಗದಗ, ಗಜೇಂದ್ರಗಡ ಅಂಜುಮನ್ ಇಸ್ಲಾಂ ಕಮಿಟಿಯ ಪದಾಧಿಕಾರಿಗಳು, ಗದಗ ಜಿಲ್ಲಾ ನ್ಯಾಯವಾದಿ ಗಳ ಸಂಘದ ಸದಸ್ಯರು,ಗಜೇಂದ್ರಗಡ ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ,ಯು.ಆರ್. ಚನ್ನಮ್ಮನವರ್

ಹಿರಿಯ ಸಾಹಿತಿಗಳಾದ ಚಂದ್ರಶೇಖರ ವಸ್ತ್ರ ದ, ಹಿರೇಹಾಳ ದ ಸಾಹಿತ್ಯ ಪೋಷಕ ಎಚ್.ಡಿ ದಾದಾ ಖಲಂದರ, ರಂಗಕರ್ಮಿ ಅಬ್ದುಲ್ಲಾ, ಡಾ ಲತಾ ಜಿ. ನಿಡಗುಂದಿ, ಡಾ. ಪುಷ್ಪ ಶಲವಡಿಮಠ, ಜಿಗಳೂರ್ ಕಾಶಿಮ್ , ಡಿ.ರಾಮಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಹುಬ್ಬಳ್ಳಿ ಗ್ರಾಮೀಣ ಘಟಕದ ಅಧ್ಯಕ್ಷ, ರಂಜಾನ್ ಹೆಬಸೂರ್, ನೂರ್ ನಾಗನೂರ ನ್ಯಾಯಾಂಗ ಇಲಾಖೆ ನೌಕರರ ಸಂಘದ ಮೈಸೂರು, ಬೆಂಗಳೂರು, ಶಿವಮೊಗ್ಗ ಬಳ್ಳಾರಿ ಹಾವೇರಿ ದಾವಣಗೆರೆ ವಿಜಯ ಪುರ ಧಾರವಾಡ, ಬೆಳಗಾವಿ ರಾಯಚೂರು ಕೊಪ್ಪಳ ಜಿಲ್ಲೆಗಳ ನೌಕರಬಂಧುಗಳು , ಪಿ. ಚಲುವಯ್ಯ, ಬೆಳಗಾವಿಯ ಶಾಮ್ ಮಾಳಿ, ಸತೀಶ್ ಬುರಡ್,ಪಾಟೀಲ್, ವೆಂಕಟೇಶ್, ಹರಪನಹಳ್ಳಿ ಯ ಪಿ.ಯಶೋಧ, ಡಾ. ಜಯಣ್ಣ,ಡಿ ಎಂ ನದಾಫ್. ಶಹನಾಜ್ ತೆಗ್ಗಿನ ಮನಿ. ಡಾ ವಿ ಎಸ್ ಸಪ್ತಾಳಕಾರ, ಪ್ರಕಾಶ್ ಗಡಾದ್ ಅಶೋಕ್ ಸಕ್ಕರಿ ಗೌಡರ ಆರ್. ಎಂ ನಾಯಕ.ಈಶಪ್ಪ ರೇವಡಿ, ಬಸವ ರಾಜ ಕೋಟಗಿ ಉಪಸ್ಥಿತರಿದ್ದರು

ಹಿರಿಯ ಸಾಹಿತಿ ರಾಮಪ್ಪ ಫ.ಲೋಟಗೇರಿ ಸ್ವಾಗತ ಕೋರಿದರು, ಬಸವ ರಾಜ್ ಬಡಿಗೇರ ವಂದಿಸಿದರು.ಸಾಹಿತಿ ಶಿಕ್ಷಕ ಆರ್ ಕೆ ಭಗವಾನ್ ದಾವಲ್ ತಾಳಿಕೋಟಿ ಕಾರ್ಯಕ್ರಮ ನಿರೂಪಿಸಿದರು

Please follow and like us: