ಭಾಗ್ಯನಗರದಲ್ಲಿ ತಡರಾತ್ರಿ ಭೀಕರ ಅಪಘಾತ : ಇಬ್ಬರು ಗಂಭೀರ ಗಾಯ, ಓರ್ವ ಚಿಂತಾಜನಕ

ಭಾಗ್ಯನಗರ : ಭಾಗ್ಯನಗರ ಪಟ್ಟಣದಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

ಭಾಗ್ಯನಗರದ ಮುಖ್ಯ ರಸ್ತೆಯಲ್ಲಿ ಶಾಸ್ತ್ರೀ ಕಾಲೋನಿಗೆ ಹೊರಳುವ ದಾರಿಯ ಸಮೀಪ ಅಪಘಾತ ಸಂಭವಿಸಿದ್ದು ವೇಗವಾಗಿ ಬಂದ ಇನ್ನೋವಾ ಕಾರು ಎರಡು ಬೈಕ್ ಗಳನ್ನು ನುಜ್ಜುಗುಜ್ಜಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಹೊಡೆದ ನಂತರ ಇನ್ನೊವಾ ಕಾರು ಹಿಂದೆ ಪುಟಿದು ಕಾಂಪ್ಲೆಕ್ಸ್ ನ ಮೆಟ್ಟಿಲೇರಿದೆ‌.

ಇನ್ನೋವಾದಲ್ಲಿದ್ದ ಕೊಪ್ಪಳದ ಕವಲೂರು ಓಣಿಯ ಕಳಕಪ್ಪ ಗೆಜ್ಜಿ, ಕಳಕಪ್ಪ ಕುಕನೂರು ಮತ್ತು ಜಾನ್ಸನ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಈರ್ವನ ಸ್ಥಿತಿ ಚಿಂತಾಜನಕವಾಗಿದ್ದು ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us: