ಉಕ್ರೇನ್ ನಲ್ಲಿ ಸಿಲುಕಿದ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ

ಕೊಪ್ಪಳ : ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಯುದ್ದಪೀಡಿತ
ಉಕ್ರೇನ್ ನಲ್ಲಿ ಸಿಲುಕಿದ್ದಾರೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದ ವಿದ್ಯಾರ್ಥಿ ಸಂಗಮೇಶ ಸೊಪ್ಪಿಮಠ‌ ವೈದ್ಯಕೀಯ ವಿದ್ಯಾಭ್ಯಾಸ ಮಾಡುವುದಕ್ಕಾಗಿ ಉಕ್ರೇನ್ ಗೆ ತೆರಳಿದ್ದರು. ಕಳೆದ ಆರು ತಿಂಗಳ ಹಿಂದೆ ಗ್ರಾಮಕ್ಕೆ ಬಂದು ಹೋಗಿರೋ ಸಂಗಮೇಶ VNMU ಯುನಿವರ್ಸಿಟಿಯಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉಕ್ರೇನ್ ನ ಬೆಳವಣಿಗೆಗಳನ್ನು ನೋಡಿ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಆತಂಕದಲ್ಲಿರುವ ವಿದ್ಯಾರ್ಥಿ ಗೆ ಜಿಲ್ಲೆಯ ನಾಯಕೆಹ ಧೈರ್ಯ ತುಂಬಿದ್ದಾರೆ.
ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಮನೆಯವರಿಗೆ ಸಂಗಮೇಶ್ ತಿಳಿಸಿದ್ದಾರೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ, ನವೀನ ಗುಳಗಣ್ಣನವರ ವಿದ್ಯಾರ್ಥಿಗೆ ಸಂಪರ್ಕಿಸಿ ಮಾತನಾಡಿದ್ದಾರೆ.
ಸಂಗಮೇಶ ಸೊಪ್ಪಿಮಠ ಅವರನ್ನು ಸುರಕ್ಷಿತವಾಗಿ ಕರೆ ತರಲು ವಿದೇಶಾಂಗ ಸಚಿವರಿಗೆ ಸಂಸದ ಕರಡಿ ಸಂಗಣ್ಣ ಪತ್ರ ಬರೆದಿದ್ದಾರೆ.

Please follow and like us: