ಪತ್ರಕರ್ತರ ಕ್ಷೇಮ ನಿಧಿಗೆ 30 ಕೋಟಿ ರೂ ಬಜೆಟ್ ನಲ್ಲಿ ಮೀಸಲಿಡಲು ಮನವಿ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಕ್ಷೇಮ ನಿಧಿಗೆ 30 ಕೋಟಿ ರೂ ಬಜೆಟ್ ನಲ್ಲಿ ಮೀಸಲಿಡಬೇಕು ಎಂದು ಒತ್ತಾಯಿಸಲಾಯಿತು.
ಪತ್ರಿಕಾ ವಿತರಕರಿಗೆ ವೈದ್ಯಕೀಯ ಸೌಲಭ್ಯ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವಂತೆ ಮನವಿಯಲ್ಲಿ ಕೇಳಿಕೊಳ್ಳಲಾಗಿದ್ದು, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ)ದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, IFWJ ಅಧ್ಯಕ್ಷರಾಗಿರುವ ಬಿ.ವಿ. ಮಲ್ಲಿಕಾರ್ಜುನಯ್ಯ, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ಮತ್ತು ಪದಾಧಿಕಾರಿಗಳು ನಿಯೋಗದಲ್ಲಿದ್ದರು.

ಮನವಿ

ಮುಖ್ಯಮಂತ್ರಿಗಳಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಪತ್ರಿಕಾ ವಿತರಕರು ಹಾಗೂ ಹಂಚಿಕೆದಾರರು ಮತ್ತು ಬೀಟ್ ಹಾಕುವ ಹುಡುಗರು ಸೇರಿ ಕರ್ನಾಟಕ ರಾಜ್ಯಾದ್ಯಂತ 70000 ವಿತರಕರು ಮತ್ತು ಪತ್ರಿಕೆ ಹಾಕುವ ಹುಡುಗರು ಎರಡುವರೆ ಲಕ್ಷ ಜನರು ಒಟ್ಟು ಈ ಪತ್ರಿಕೆಯನ್ನು ನಂಬಿಕೊಂಡು ಸುಮಾರು 3.50 ಲಕ್ಷ ಕುಟುಂಬಗಳವೆ , ಆದ್ದರಿಂದ 30 ಕೋಟಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕಾಗಿದೆ ಕೇಳಕೊಳ್ಳುತ್ತೇವೆ .

ಬೇಡಿಕೆಗಳು …. ಪತ್ರಿಕಾ ವಿತರಕರು ಹಾಗೂ ಹಂಚಿಕೆದಾರರು ಮತ್ತು ಪತ್ರಿಕೆ ಹಾಕುವ ಹುಡುಗರಿಗೆ 2022 ಹಾಗೂ 2023 ಈ ಬಜೆಟ್ಟಿನಲ್ಲಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ 30 ಕೋಟಿ ಮೀಸಅಡಬೇಕು . ಪತ್ರಿಕೆ ವಿತರಕರು ಕೊರೋನಾ ಸಂದರ್ಭದಲ್ಲಿ ಮೃತಪಟ್ಟ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಕೂಡಲೇ ನೀಡಬೇಕು 60 ವರ್ಷ ಮೇಲ್ಪಟ್ಟು ಪತ್ರಿಕೆ ವಿತರಕರಿಗೆ ಪ್ರತಿ ತಿಂಗಳು 5000 ಪಿಂಚಣಿಯನ್ನು ನೀಡಬೇಕು . ಪತ್ರಿಕೆ ವಿತರಕರಿಗೆ ಪತ್ರಿಕೆ ಹಾಕುವ ಸಮಯದಲ್ಲಿ ಮೃತಪಟ್ಟರೆ 5 ಲಕ್ಷ ಪರಿಹಾರ ಮತ್ತು ಆಕ್ಸಿಡೆಂಟ್ ಆದವರಿಗೆ ವೈದ್ಯಕೀಯ ಸೌಲತ್ತುಗಳನ್ನು ಪರಿಹಾರವಾಗಿ ನೀಡಬೇಕು . ಧನ್ಯವಾದಗಳೊಂದಿಗೆ , ಕರ್ನಾಟಕ 5. ಪತ್ರಿಕಾ ವಿತರಕರನ್ನು ಗುರುತಿಸಿ ಸರ್ಕಾರದ ಕಾರ್ಯಕ್ರಮದಲ್ಲಿ ಕೆಂಪೇಗೌಡ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು . 6. ಪತ್ರಿಕಾ ವಿತರಕರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವ್ಯಾಸಂಗಕ್ಕೆ ಸಹಾಯಧನ ಮಾಡಬೇಕು . 7. ಪತ್ರಿಕಾ ವಿತರಕರಿಗಾಗಿ ಆದಾಯ ನಿಖರತೆ ಇಲ್ಲದ ಕಾರಣ ಬಿಪಿಎಲ್ ಕಾರ್ಡ್ ಇಎಸ್‌ಐ ಸೌಲಭ್ಯಗಳನ್ನು ಕಲ್ಪಸಿಕೊಡಬೇಕು . 8. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಮಾನ್ಯತೆ ಪಡೆದ ಎಲ್ಲಾ ವಿತರಕರಿಗೂ ಈ ಸೌಲಭ್ಯಗಳನ್ನು ನೀಡಬೇಕಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ( ಲಿ . ) ತಮ್ಮ ವಿಶ್ವಾಸಿಗಳು , ಶಂಭುಲಿಂಗ ಕೆ . ರಾಜ್ಯಾಧ್ಯಕ್ಷರು

Please follow and like us: