ಶ್ರವಣಬೆಳಗೊಳಕ್ಕೆ KUWJ ಅಧ್ಯಕ್ಷ ಶಿವಾನಂದ ತಗಡೂರು ಭೇಟಿ

ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ
ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸನ್ಮಾನಿಸಿ ಶುಭ ಹಾರೈಸಿದರು.

ಶ್ರವಣಬೆಳಗೊಳದ ಕ್ಷೇತ್ರದ ಪತ್ರಕರ್ತರಾದ ಶಿವಾನಂದ ತಗಡೂರು ಅವರು
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಎರಡನೇ ಬಾರಿಗೆ ಅಧ್ಯಕ್ಷರಾಗಿರುವುದು ಅಭಿಮಾನದ ಸಂಗತಿ ಎಂದು
ಸಂತಸ ವ್ಯಕ್ತಪಡಿಸಿದರು.

ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಶಿವಾನಂದ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಂಘಟಿಸಿದ, ಜಿಲ್ಲಾ ಪತ್ರಕರ್ತರ ಸಮ್ಮೇಳನ, ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನ, ಅಲ್ಲದೆ, ಹಾಸನ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಾಣ ಮಾಡಿದ ಶ್ರಮವನ್ನು ಸ್ವಾಮೀಜಿ ಸ್ಮರಿಸಿದರು.

ಕುಗ್ರಾಮವಾದ ತಗಡೂರಿನಿಂದ ಜಿಲ್ಲೆ, ರಾಜ್ಯ ಮಟ್ಟದ ತನಕ ಹಂತ ಹಂತವಾಗಿ ಪತ್ರಕರ್ತರಾಗಿ, ಸಂಘಟನೆಯ ಮೂಲಕ ಬೆಳೆದ ಬಗೆಯನ್ನು
ನೆನಪಿಸಿದ ಸ್ವಾಮೀಜಿ, ಪ್ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರ ಶ್ರೇಯೋಭಿವೃದ್ದಿಗೆ ಸದಾ ಸಮಾಜಮುಖಿಯಾಗಿ ಸೇವೆ ಸಲ್ಲಿಸುವಂತೆ, ಸಂಘಟನೆಗೆ ಹೊಸ ಹುರುಪು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸ್ವಾಮೀಜಿ ಸಲಹೆ ನೀಡಿದರು.

ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಆರ್ಶೀವಾದಕ್ಕೆ ಧನ್ಯವಾದ ಸಲ್ಲಿಸಿದರು. ನಾಡಿನ ಪತ್ರಕರ್ತರ ವಿಶ್ವಾಸ, ಚನ್ನರಾಯಪಟ್ಟಣ ಮತ್ತು ಹಾಸನದವರ ಪ್ರೀತಿಗೆ ನಾನು ಋಣಿಯಾಗಿರುವೆ ಎಂದು ಶಿವಾನಂದ ತಗಡೂರು ಅವರು ಪ್ರತಿಕ್ರಿಯಿಸಿದರು.

Please follow and like us: