ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ೧೦೦೦ ರೂ ಬೆಂಬಲ ಬೆಲೆ ನೀಡಿ: ಪತ್ರೇಶ್ ಹಿರೇಮಠ ಆಗ್ರಹ

ಹಗರಿಬೊಮ್ಮನಹಳ್ಳಿ:- ಕಬ್ಬನ್ನು ಕಟಾವು ಮಾಡಲು ಹಾಗು ಕಾರ್ಖಾನೆಗೆ ಸಾಗಾಣಿಕೆ ಮಾಡಲು ತುಂಬಾ ವೆಚ್ಚವಾಗುತ್ತಿದ್ದು ರೈತರು ಕಬ್ಬು ಬೆಳೆಯಿಂದ ತುಂಬಾ ನಷ್ಟ ಅನುಭವಿಸುತ್ತಿದ್ದು ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಸರ್ಕಾರವನ್ನು ಒತ್ತಾಯಿಸಿದ್ದಾರೆ
ಹಗರಿಬೊಮ್ಮನಹಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ಗೆ ರೈತರಿಗೆ ೨೯೦೦ ರೂ ನಿಗದಿಪಡಿಸಿದ್ದು ಅದರಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕ ವೆಚ್ಚ ಮುರಿದು ರೈತರಿಗೆ ಪ್ರತಿ ಟನ್‌ಗೆ ೨೧೫೦ ರೂ ನೀಡುತ್ತಿದ್ದಾರೆ. ಇದಲ್ಲದೇ ಕಬ್ಬು ಬೆಳೆಗಾರರು ಮತ್ತೆ ಪ್ರತಿ ಟನ್ ಗೆ ಕಟಾವು ಮಾಡುವವರಿಗೆ ೪೦೦ ರೂ, ಟ್ರಾಕ್ಟರ್ ಸಿಂಗಲ್ ಟ್ರಾಲಿಗೆ ೪೦೦ ರೂ ಜೊತೆಗೆ ಲೇಬರ್ ಕರೆತರುವ ಟಾಟಾ ಎಸಿ ವಾಹನದ ಬಾಡಿಗೆ ೧೦೦೦ ರೂ ನೀಡಬೇಕಿದೆ. ರೈತರಿಗೆ ಪ್ರತಿ ಟನ್ ಗೆ ಕೇವಲ ೧೪೦೦ ರೂಗಳಿಂದ ೧೫೦೦ ರೂ ಮಾತ್ರ ಸಿಗಲಿದ್ದು ವರ್ಷಗಟ್ಟಲೆ ಶ್ರಮ ವಹಿಸಿ ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿದೆ ಎಂದು ಪತ್ರೇಶ್ ಅಸಮಧಾನ ವ್ಯಕ್ತಪಡಿಸಿದರುತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಕಬ್ಬು ಬೆಳೆಯುವ ರೈತರಿಗೆ ಪ್ರತಿ ಟನ್ ಗೆ ೧೦೦೦ ರೂ ಬೆಂಬಲ ಬೆಲೆ ನೀಡಿ ಸಂಕಷ್ಟದಿಂದ ಪಾರು ಮಾಡುವ ಜೊತೆಗೆ ಕಬ್ಬು ಕಟಾವು ಮತ್ತು ಸಾಗಾಟ ವೆಚ್ಚದ ಕುರಿತಂತೆ ಸೂಕ್ತ ನಿಯಮಾವಳಿಗಳನ್ನು ರೂಪಿಸಲು ಪತ್ರೇಶ್ ಆಗ್ರಹಿಸಿದರು

Please follow and like us: