ಜಿಲ್ಲಾ ಕಾರಾಗೃಹ ಕೋಪ್ಪಳದಲ್ಲಿ ವಿಚಾರಣಾಧೀನ ಬಂದಿಗಳಿಗೆ “ಬಂದಿಗಳ ಹಕ್ಕುಗಳು” ಕುರಿತು – ವಿಶೇಷ ಉಪನ್ಯಾಸ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೊಪ್ಪಳ ಮತ್ತು ಜಿಲ್ಲಾ ವಕೀಲರ ಸಂಘ ಕೊಪ್ಪಳದ ಸಂಯೋಗದಲ್ಲಿ ಜಿಲ್ಲಾ ಕಾರಾಗೃಹ ಕೋಪ್ಪಳದಲ್ಲಿ ವಿಚಾರಣಾಧೀನ ಬಂದಿಗಳಿಗೆ “ಬಂದಿಗಳ ಹಕ್ಕುಗಳು”  ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶರಾದ  ನ್ಯಾ|| ದೇವೇಂದ್ರ ಪಂಡಿತ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಪ್ರಭಾರಿ ಅಧೀಕ್ಷಕ ರಾದ ಹನುಮಂತರಾಯ ಹಾಗೂ ಜೈಲರ್ ಕಲ್ಲಪ್ಪ ಗಸ್ತಿ ಉಪಸ್ಥಿತರಿದ್ದರು.