ನ್ಯಾಯಾಧೀಶರ ನಡೆ ಖಂಡಿಸಿ ದಿ ೧೧ರಂದು ಕೊಪ್ಪಳ ಬಂದ್ ಕರೆ

Kannadanet

ರಾಯಚೂರಿನ ಜಿಲ್ಲಾ ನ್ಯಾಯಾಧೀಶರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ತೆಗಿಸಿದ್ದು ಅತ್ಯಂತ ಆಘಾತಕಾರಿ ಹಾಗೂ ಅಸಮರ್ಥ ನೀಯವಾಗಿದೆ ಈ ಅಪಮಾನ ವಿರುದ್ಧ ಕೊಪ್ಪಳ ಬಂದ್ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಸಂವಿದಾನ ಉಳಿಸಿ ಆಂದೋಲನ ಸಮಿತಿ ಸದಸ್ಯರು ಹೇಳಿದ್ದಾರೆ.
ಕೊಪ್ಪಳದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರ ಗಾಂಧಿ ಹಾಗೂ ಅಂಬೇಡ್ಕರ್ ಇವರಗಳ ಫೋಟೋ ಇರಿಸಬೇಕೆಂಬುದು ಸಾಮಾನ್ಯ ತಿಳುವಳಿಕೆ ಹೀಗೆ ಇದ್ದಾಗ್ಯೂ, ಅಂಬೇಡಕರವರಿಗೆ ಅವಮಾನ ಮಾಡುವಂತೆ ನ್ಯಾಯಾಧೀಶರ ನಡೆದುಕೊಂಡ ವರ್ತನೆಯ ವಿರುದ್ಧ ಈಗಾಗಲೇ ಎಲ್ಲ ಕಡೆಗೂ ಪ್ರತಿಭಟನೆ ನಡೆದಿವೆ.ನ್ಯಾಯದಾನ ನೀಡಬೇಕಾದ ಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಇವರ ವರ್ತನೆಯು ಈಗಾಗಲೇ ಜಾತೀವಾದ – ಕೋಮುವಾದಗಳ ಸಂಘ?ದಲ್ಲಿ ಬೇಯುತ್ತಿರುವ ನಮ್ಮ ಸಮಾಜದಲ್ಲಿ ಮತ್ತ? ಧಗೆಯನ್ನು ಹುಟ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ನ್ಯಾಯಾಧೀಶರ ಈ ನಡೆಯು ಅವರ ಉದ್ದೇಶವನ್ನು ಪ್ರಶ್ನಾರ್ಹವನ್ನಾಗಿಸುತ್ತದೆ. ಇಂತಹ ವಿವಾದಗಳು ಜನರ ಗಮನವನ್ನು ಅವರ ಮೂಲಭೂತ ಸಮಸ್ಯೆಗಳಿಂದ ದಿಕ್ಕುತಪ್ಪಿಸುತ್ತವೆ ಎಂಬುದನ್ನು ಅರಿಯದ? ವಿವೇಚನಾರಹಿತರಾಗುವುದು ಸಾಧ್ಯವೇ? ಎಂಬ ಪ್ರಶ್ನೆ ಎಲ್ಲಾ ಪ್ರಜ್ಞಾವಂತರನ್ನೂ ಕಾಡುತ್ತಿದೆ.

ಘಟನೆ ನಡೆದು ಇ? ದಿನ ಕಳೆದರೂ ಕರ್ನಾಟಕದ ಮುಖ್ಯಮಂತ್ರಿಗಳಾಗಲಿ, ಹೈಕೋರ್ಟ ಮುಖ್ಯ ನ್ಯಾಯಾಧೀಶರಾಗಲಿ, ಕಾನೂನು ಸಚಿವರಾಗಲಿ, ಗೃಹ ಸಚಿವರಾಗಲಿ ಈ ಕುರಿತು ಮೌನ ವಹಿಸಿರುವುದು ವಿಷಾದದ ಸಂಗತಿ, ಜನವರಿ ೨೬ ಪ್ರಜಾರಾಜ್ಯವಾದ ದಿನ , ಸಂವಿಧಾನ ಜಾರಿಗೆ ಬಂದ ದಿನ, ಈ ಮಹತ್ವದ ದಿನದಂದು ಸಂವಿಧಾನ ಪಿತಾಮಹ ಡಾ|| ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇರಬೇಕೆಂದು ಸಾಮಾನ್ಯ ಜ್ಞಾನವನ್ನು ನ್ಯಾಯಾಧೀಶರಿಗಿಲ್ಲದಿರುವುದು ಶೋಚನೀಯ ಸಂಗತಿ. ಪ್ರತಿಯೊಂದಕ್ಕೂ ಸುತ್ತೋಲೆ ಬಯಸುವುದು ದುರಂತ, ಅಧೀನ ನ್ಯಾಯಾಲಯಗಳು ಹೈಕೋರ್ಟಿನ ಆದೇಶ ಪಾಲಿಸಬೇಕಾದದ್ದು ನ್ಯಾಯಾಂಗದ ನೀತಿ ಅದನ್ನು ನಾವು ಒಪ್ಪುತ್ತೇವೆ. ಆದರೆ ಗಣರಾಜ್ಯೋತ್ಸವದಂದು ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಧ್ವಜಾರೋಹಣ ನೆರವೇರಿಸಿದ್ದರೆ ಈ ಮಲ್ಲಿಕಾರ್ಜುನಗೌಡರಿಗೆ ಗಲ್ಲು ಶಿಕ್ಷೆಯಾಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಸಿ.ಆರ್. ಚಂದ್ರಶೇಖರ್ ರಾವ್ ಸಂವಿಧಾನವನ್ನು ಬದಲಾಯಿಸಬೇಕೆನ್ನುವ ಹೇಳಿಕೆಯನ್ನು ಸಹ ಖಂಡಿಸುತ್ತೇವೆ. ಈ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಸರಕಾರ ಮತ್ತು ಹೈಕೋರ್ಟ್ ಈ ಕುರಿತು ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು. ಕೈಗೊಳ್ಳದಿದ್ದರೆ ಜನರ ಆಕ್ರೋಶ ಎದುರಿಸಬೇಕಾಗುತ್ತದೆ.
ದಿನಾಂಕ: ೧೧.೦೨.೨೦೨೨ ರಂದು ಕೊಪ್ಪಳ ಬಂದ್ ಹೋರಾಟ ಅಂಬೇಡ್ಕರ್ ಸರ್ಕಲ್‌ದಿಂದ ಮೆರವಣಿಗೆ ಪ್ರಾರಂಭವಾಗಿ ಗಡಿಯಾರ ಕಂಬ, ಅಶೋಕ್ ಸರ್ಕಲ್ ಮೂಲಕ ಗಂಜ್ ಸರ್ಕಲ್ ನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಮುಕ್ತಾಯಗೊಳಿಸಲಾಗುವುದು. ಅಂದಿನ ಆ ಹೋರಾಟಕ್ಕೆ ಪ್ರಗತಿ ಪರ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಸಮಸ್ತ ಜನತೆ ಪಾಲ್ಗೊಳ್ಳುವುದರ ಮೂಲಕ ಕೊಪ್ಪಳ ಬಂದ್ ಚಳುವಳಿಯನ್ನು ಯಶಸ್ವಿಗೊಳಿಸಬೇಕೆಂದು ಸಂವಿಧಾನ ಉಳಿಸಿ ಆಂದೋಲನ ಸಮಿತಿಯು ಕೊಪ್ಪಳ ವಿನಂತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಎ.ವಿ. ಕಣವಿ ವಕೀಲರು (ಬಾರ್ ಕೌನ್ಸಿಲ್ ಅಧ್ಯಕ್ಷರು)ಗಾಳೆಪ್ಪ ಕಡೆಮನಿ, ಈಶಣ್ಣ ಕೊರ್ಲ್ಳ್ಳಿ (ರಾಷ್ಟ್ರೀಯ ಬಸವದಳ) ರಾಜು ಶಶಿಮಠ (ಬಸವಕೇಂದ್ರ),ಪರಶುರಾಮ (ನಗರಸಭೆ ಸದಸ್ಯರು) ಸಿದ್ಧಪ್ಪ ಹೊಸಮನಿ (ಚಲುವಾದಿ ಸಮಾಜ ಮು.)ಯಲ್ಲಪ್ಪ ಬಳಗನೂರು (ಚಲುವಾದಿ)ರಾಮಣ್ಣ ಕಲ್ಲಣ್ಣನವರು (ವಾಲ್ಮೀಕಿ ಸಮಾಜ)ನಾಗರಾಜ (ಮಡಿವಾಳರ ಸ.)ರಮೇಶ ವಂಕಲಕುಂಟಿ (ಂIಆಙಔ ಜಿಲ್ಲಾ ಅಧ್ಯಕ್ಷರು) ಹನುಮಂತಪ್ಪ ಕೌದಿ (ಹಾಲುಮತ ಸ.) ಬಾಲಚಂದ್ರ (ಮಾ. ತಾ. ಪಂ. ಅಧ್ಯಕ್ಷರು) ಯಲ್ಲಪ್ಪ ಕಲ್ಲಣೆದೇವರ (ಸುಡಗಾಡ ಸಿದ್ಧರು ಸ.) ಈರಣ್ಣ ಹುಣಸಿನ ಮರ (ಮೋಚಿ ಸ.) ಲೋಕೇಶ್ ಭಜಂತ್ರಿ , ಯಂಕನಗೌಡ ಹೊರತಟ್ನಾಳ (ಉಪ್ಪಾರ್ ಸ.)ಸಂಗಮೇಶ ಬಾದವಾಡಗಿ (ಪಂಚಮ ಸಾಲಿ ಸ.) ಶಂಕರ ನಾಯಕ (ಲಂಬಾಣಿ ಸ.) ರಮೇಶ ಹಡಪದ್ (ಹಡಪದ್ ಸ.) ಗೈಬುಸಾಬ ಚಟ್ನಿ (ಮುಸ್ಲಿಂ ಪಂಚ ಕಮಿಟಿ) ಇತರರು ಉಪಸ್ಥಿತರಿದ್ದರು.

Please follow and like us: