ಹಿಜಾಬ್ ವಿವಾದ : ಮುಸ್ಲಿಂ ಯುವ ಸಮಿತಿ ಪ್ರತಿಭಟನೆ

ಕನ್ನಡನೆಟ್ : ರಾಯಚೂರಿನ ನ್ಯಾಯಾಧೀಶರ ವಿರುದ್ಧ ಕ್ರಮಕೈಗೊಳ್ಳದೆ ಇರುವ ಮತ್ತು ಕರಾವಳಿ ಭಾಗದಲ್ಲಿ ಹಿಜಾಬ್ ವಿಷಯವಾಗಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಾಲಾ / ಕಾಲೇಜ್‌ಗಳಲ್ಲಿ ತಾರತಮ್ಯ ನೀತಿ ವಿರೋಧಿಸಿ ಮುಸ್ಲಿಂ ಯುವ ಸಮಿತಿಯ ನೇತೃತ್ವದಲ್ಲಿ ಕೊಪ್ಪಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ ಅಶೋಕ ಸರ್ಕನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಗಣರಾಜ್ಯೋತ್ಸದಂದು ಬಾಬಾಸಾಹೇಬ ಅಂಬೇಡ್ಕರವರ ಭಾವಚಿತ್ರ ತೆಗೆಸಿದ ರಾಯಚೂರಿನ ನ್ಯಾಯಾಧೀಶರ ವಿರುದ್ಧ ಇದುವರೆಗೆ ಯಾವುದೇ ಕ್ರಮಕೈಗೊಳ್ಳದೆ ಇರುವ ಮತ್ತು ಕರಾವಳಿ ಭಾಗದಲ್ಲಿ ಹಿಜಾಬ್ ವಿಷಯವಾಗಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಾಲಾ / ಕಾಲೇಜ್‌ಗಳಲ್ಲಿ ಪ್ರವೇಶ ನೀಡದೆ ಇರುವ ಸರ್ಕಾರದ ತಾರತಮ್ಯ ನೀತಿಯನ್ನು ವಿರೋಧಿಸಿ ಘೋಷಣೆ ಕೂಗಿದರು. ಈ ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಈ ಸಂದರ್ಭದಲ್ಲಿ

ಕಾಟನ್ ಪಾಷಾ, ಅಮ್ಜದ್ ಪಟೇಲ್ , ಮಾನ್ವಿ ಪಾಷಾ, ಜಾಕೀರ್ ಕಿಲ್ಲೇದಾರ್ , ಖತಿಬ್ ಭಾಷು ಸಾಬ
ಪಿರಾಂ ಹುಸೇನ್ ಮುಜಾವರ್
ಎಮ್ ಎಸ್ ಮಂಡಲಗೇರಿ
ನಾಸಿರ್ ಮುಲ್ಲಾ AAP
ಹುಜುರ್ ಅಹೇಮದ್
ಸಲಿಂ ಗೊಂಡಬಾಳ
ಆಸೀಫ್ ಖಾನ್
ಸೈ.ಮಹೇಮುದ್ ಹುಸೇನಿ ಬಲ್ಲೆ
ಸೈ ಮಹೇಮುದ್ ಚೋಟು.
ರಘು ಬೆಲ್ಲದ್
ಶರಣಪ್ಪ ಓಜಿನಹಳ್ಳಿ
ಯುಸುಪ್ ಮಾಳೆಕೊಪ್ಪ
ಅಸ್ಪಾಕ್
ಸದ್ದಾಮ್, ನಿಜಾಮ್ ಮಾಳೆಕೊಪ್ಪ,
ಸದ್ದಾಮ್ , ಮಹೇತಾಬ್, ಇರ್ಫಾನ್
ನಜೀರ್ ಮುದ್ಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Please follow and like us: