ಕೊಪ್ಪಳದ ಭರತ್ ಕಂದಕೂರಗೆ ರಾಷ್ಟ್ರಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ WPAI ಚಿನ್ನದ ಪದಕ

ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಛಾಯಾಗ್ರಹಣ ಸ್ಪರ್ಧೆ

ಕೊಪ್ಪಳ: ಮಧ್ಯಪ್ರದೇಶದ ಕಲಾಕುಂಭ್ ಫೋಟೋಗ್ರಫಿ ಕ್ಲಬ್‌ನಿಂದ ನಡೆದ `ದೇವಾಸ್ ಸಲೋನ್-2022′ ರಾಷ್ಟ್ರಮಟ್ಟದ ಛಾಯಾಚಿತ್ರ ನಗರದ ಪತ್ರಿಕಾ ಛಾಯಾಗ್ರಾಹಕ ಭರತ್ ಕಂದಕೂರಗೆ ವೈಲ್ಡ್ ಲೈಫ್ ಫೋಟೋಗ್ರಫಿ ಅಸೋಸಿಯೇಷನ್ ಆಫ್ ಇಂಡಿಯಾದ ಚಿನ್ನದ ಪದಕ (WPAI Gold) ದೊರೆತಿದೆ.

ಭರತ್ 2020ರಲ್ಲಿ ಸೆರೆಹಿಡಿದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವದ ಚಿತ್ರಕ್ಕೆ ಸ್ಪರ್ಧೆಯ ಫೋಟೋ ಟ್ರಾವೆಲ್ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ. ದೇಶದ ವಿವಿಧ ರಾಜ್ಯಗಳ 528 ಜನ ಛಾಯಾಗ್ರಾಹಕರ 6,914 ಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಅಖಿಲ್ ಹಾರ್ದಿಯಾ, ಅನುರಾಗ್ ಬಡೋಲಿಯಾ, ಸುಧೀರ್ ಸಕ್ಸೇನಾ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು. ಆಯ್ಕೆಗೊಂಡ ಚಿತ್ರಗಳನ್ನು ಮಾರ್ಚ್ 30 ರಂದು ನಡೆಯಲಿರುವ ಆನ್‌ಲೈನ್ ಎಕ್ಸಿಬಿಷನ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುವುದು ಎಂದು ಸ್ಪರ್ಧೆಯ ಚೇರ್‌ಮನ್ ಕೈಲಾಶ್ ಸೋನಿ ತಿಳಿಸಿದ್ದಾರೆ

Please follow and like us: