ಬೈಟು ಲವ್ ಟೈಟಲ್ ಟ್ರ್ಯಾಕ್ ರಿಲೀಸ್

ನಟ ಧನವೀರ್ ಮತ್ತು ನಟಿ ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿಅಭಿನಯಿಸಿರುವ “ಬೈಟು ಲವ್” ಆಕ್ಷನ್ ಮತ್ತು ರೋಮ್ಯಾಂಟಿಕ್ ಚಿತ್ರ. ಸಿನಿಮಾದ ಟೈಟಲ್ ಹಾಡು ಇಂದು ಬೆಳಿಗ್ಗೆ 11.22ಕ್ಕೆ ಬಿಡುಗಡೆಯಾಯಿತ್ತು. ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದ್ದು, ಟೈಟಲ್ ಟ್ರ್ಯಾಕ್ ಬಹಳ ಸೊಗಸಾಗಿ ಮೂಡಿಬಂದಿದೆ. ಸದ್ಯ ಆನಂದ್ ಆಡಿಯೋ ಯ್ಯೂಟೂಬ್ ಚಾನೆಲ್‌ನಲ್ಲಿ ಹಾಡನ್ನು ವೀಕ್ಷಿಸಬಹುದು. ಈ ಹಾಡನ್ನು ಮನು ಹಾಡಿದ್ದಾರೆ.ಸಿನಿಮಾದ ರಚನೆ, ನಿರ್ದೇಶನ ಮತ್ತು ಸಾಹಿತ್ಯ ಮಾಡುವ ಜವಬ್ದಾರಿಯನ್ನು ಹರಿ ಸಂತೋಷ್ ಹೊತ್ತಿದ್ದಾರೆ. ಅಜನೀಶ್ ಲೋಕನಾಥ್ ಸಿನಿಮಾದ ಸಂಗೀತ ನಿರ್ದೇಶನ ಮಾಡಿದ್ದು, ಕೆ.ಎಂ. ಪ್ರಕಾಶ್ ಸಂಕಲನ ಮತ್ತು ಮಹೇಶ್ ಸಿಂಹ ಅವರ ಛಾಯಾಗ್ರಹಣವಿದೆ. ಕೊಣಾಂಕಿ ಕೆವಿಎನ್ ಪ್ರೊಡಕ್ಷನ್ಸ್ ಅಡಿ ನಿಶಾ ವೆಂಕಟ್ ಸಿನಿಮಾ ನಿರ್ಮಿಸುತ್ತಿದ್ದಾರೆ.#kannadacinema #by2love

Please follow and like us: