ರಿಲೀಸ್‌ಗೆ ಸಿದ್ಧವಾದ ದಕ್ಷಿಣದ ಬಿಗ್ ಬಜೆಟ್ ಸಿನಿಮಾಗಳು

ಕೊರೊನಾ ಕಾರಣದಿಂದ ತೆರೆಗೆ ಬರಲು ತಡವಾಗಿದ್ದ ದಕ್ಷಿಣ ಭಾರತದ ಚಿತ್ರೋದ್ಯಮಗಳ ಹಲವು ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ದಿನಾಂಕಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ. ರಿಲೀಸ್ ದಿನಾಂಕ ಮೂಂದೂಡಿದ್ದ ಹಲವು ಸಿನಿಮಾಗಳು ಹೊಸ ಬಿಡುಗಡೆಯ ದಿನಾಂಕಗಳನ್ನು ಘೋಷಿಸಿವೆ. ಮುಖ್ಯವಾಗಿ ದೇಶಾದ್ಯಂತ ಕ್ರೇಜ್ ಸೃಷ್ಟಿಸಿದ್ದ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್’ ಸಿನಿಮಾದ ಮುಂದಿನ ಭಾಗವಾದ ‘ಕೆಜಿಎಫ್ ನ ಚ್ಯಾಪ್ಟರ್ -2’ ಏಪ್ರಿಲ್ 14 ಕ್ಕೆ ಬಿಡುಗಡೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಟಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳಾದ ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್‌ಚರಣ್ ಅಭಿನಯದ ರಾಜಮೌಳಿ ನಿರ್ದೇಶನದ ’ಆರ್‌ಆರ್‌ಆರ್‌’ ಸಿನಿಮಾ ಮಾರ್ಚ್ 25ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರೋಮ್ಯಾಂಟಿಕ್ ಸಿನಿಮಾ ‘ರಾಧೆ ಶ್ಯಾಮ್’ ಮಾರ್ಚ್ 11ಕ್ಕೆ ಚಿತ್ರಮಂದಿರ ಪ್ರವೇಶಿಸುತ್ತಿದೆ ಎಂದು ನಟ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿದ್ದಾರೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರವೂ ಏಪ್ರಿಲ್ 29ಕ್ಕೆ ಬಿಡುಗಡೆ ದಿನವನ್ನು ಕಾಯ್ದಿರಿಸಿದೆ. ಪ್ರಿನ್ಸ್ ಮಹೇಶ್ ಬಾಬು ನಟಿಸಿರುವ ‘ಸರ್ಕಾರುವಾರಿ ಪಾಟಾ’ ಮೇ 12ಕ್ಕೆ ತೆರೆ ಕಾಣಲಿದೆ.

ಕಾಲಿವುಡ್‌ನಲ್ಲಿ ಕೊರೊನಾ ನಂತರ ತಡವಾಗಿದ್ದ ಸಿನಿಮಾಗಳು ಥಿಯೇಟರ್‌ ದಾರಿ ಕಾಣುತ್ತಿವೆ. ಸೂರ್ಯ ನಟಿಸಿರುವ ಬಹು ನಿರೀಕ್ಷಿತ ಚಿತ್ರ ‘ಎಥಾರ್ಕ್ಕುಂ ಟುನ್ನಿದವಂ’ ಮಾರ್ಚ್ 10ಕ್ಕೆ ಬಿಡುಗಡೆಯಾಗುತ್ತಿದೆ. ಉದಯ್ ನಿಧಿ ಸ್ಟಾಲಿನ್ ಅಭಿನಯದ ‘ಎಫ್ಐಆರ್’ ಸಿನಿಮಾ ಫೆಬ್ರವರಿ 11ಕ್ಕೆ ರಿಲೀಸ್ ಆಗುತ್ತಿದೆ. ಅಜಿತ್ ನಟನೆಯ ‘ವಲೈಮಲೈ’ ಚಿತ್ರ ಫೆಬ್ರವರಿ 24ಕ್ಕೆ ತೆರೆಗೆ ಬರುವುದಾಗಿ ತಿಳಿಸಿದೆ. ವಿಶಾಲ್ ಅಭಿನಯದ ‘ವೀರಾಮೇ ವಾಂಗೈ ಸುಡುಂ’ ಸಿನಿಮಾ ಫೆಬ್ರವರಿ 4ಕ್ಕೆ ಪ್ರದರ್ಶನ ಆರಂಭಿಸಲಿದೆ ಎಂದು ಚಿತ್ರ ತಂಡ ಹೇಳಿದೆ.Please follow and like us: