ಪಕ್ಷಕ್ಕೆ ಬರುವವರ ಹೆಸರು ಈಗಲೇ ಹೇಳುವುದಿಲ್ಲ- ಸಿಎಂ ಬೊಮ್ಮಾಯಿ 6 ತಿಂಗಳ ಅವಧಿ ಮುಗಿದಿದೆ -ಸತೀಶ್ ಜಾರಕಿಹೊಳಿ

Kannadanet NEWS
ಇನ್ನೂ ಒಂದು ವರ್ಷ ಸಮಯ ಇದೆ. ಬೇರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರ ಹೆಸರು ಈಗಲೇ ಹೇಳುವುದಿಲ್ಲ. ಚುನಾವಣೆ ಸಮೀಪ ಬಂದಾಗ ಹೇಳುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ನೀರಾವರಿಗಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರ ೬೮ ಸಾವಿರ ಕೋಟಿ ನೀಡಿದೆ. ಮೇಕೆದಾಟು ಯೋಜನೆ ಹಿಂದೆಯೇ ಜಾರಿಯಾಗಬೇಕಿತ್ತು. ಆಗಿಲ್ಲ ಆ ಕಾರಣಕ್ಕಾಗಿಯೇ ನಮ್ಮನ್ನು ವಿರೋಧ ಪಕ್ಷದಲ್ಲಿ ಕೂಡಿಸಿದ್ಧಾರೆ. ಬಿಜೆಪಿ ಅಧಿಕಾರದಲ್ಲಿಯಲ್ಲಾ ಅವರು ಮಾಡಬಹುದಿತ್ತು ಇನ್ನೂ ಯಾಕೆ ಮಾಡಿಲ್ಲ. ಕರೋನಾ ಮುಗಿದ ನಂತರ ಎಲ್ಲ ನಿಂತಿತ್ತೋ ಅಲ್ಲಿಂದಲೇ ಮೇಕೇದಾಟು ಪಾದಯಾತ್ರೆ ಮತ್ತೆ ಆರಂಭವಾಗುತ್ತೆ . ಸಿ.ಎಂ. ಇಬ್ರಾಹಿಂರು ಇನ್ನೂ ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಅವರಿಗೆ ಸ್ಥಾನಮಾನ ಸಿಗಬೇಕು ಎಂದರೇ ಕಾಯಬೇಕು. ಅವರ ಸಾಲದ ವಿಚಾರ ಇನ್ನಿತರ ವಿಚಾರಗಳು ವೈಯುಕ್ತಿಕ. ನಾನು ಸಿಎಂ ರೇಸ್ ನಲ್ಲಿ ಇಲ್ಲ. ನಾವೇನಿದ್ದರೂ ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಮಾಜಿ ಸಚಿವ ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ. ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಕೃಷ್ಣ ಇಟ್ಟಂಗಿ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಟಿ. ರತ್ನಾಕರ್, ಬ್ಲಾಕ್ ಅಧ್ಯಕ್ಷರುಗಳಾದ ಕೃಷ್ಣಾರಡ್ಡಿ ಗಲಿಬಿ ಕೊಪ್ಪಳ, ಗಂಗಾಧರಸ್ವಾಮಿ ಕನಕಗಿರಿ, ಬಸವರಾಜ ಉಳ್ಳಾಗಡ್ಡಿ ಯಲಬುರ್ಗಾ, ಕಾಟನ್ ಪಾಶಾ ಕೊಪ್ಪಳ ನಗರ, ಜಿಲ್ಲಾ ಪಂಚಾಯತಿ ಸದಸ್ಯ ಗೂಳಪ್ಪ ಹಲಗೇರಿ, ವಾಲ್ಮೀಕಿ ಗುರುಪೀಠ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಮಾಲತಿ ನಾಯಕ್, ರಾಜ್ಯ ಎಸ್.ಟಿ. ಸೆಲ್ ಪ್ರಧಾನ ಕಾರ್ಯದರ್ಶಿ ರಾಜು ನಾಯಕ್, ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಮಣಿ ಜಿಂಕಲ್, ರಾಜ್ಯ ಪದಾಧಿಕಾರಿಗಳಾದ ಕಿಶೋರಿ ಬೂದನೂರ, ಭಾರತಿ ನೀರಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ಜಿಲ್ಲಾ ಕಾರ್ಯದರ್ಶಿ ವಿಶಾಲಾಕ್ಷಿ ತಾವರಗೇರಿ, ಪರಿಶಿಷ್ಟ ಪಂಗಡ ಘಟಕದ ಶಿವರಡ್ಡಿ ನಾಯಕ ಕಾರಟಗಿ, ಬಸವರಾಜ ನಾಯಕ, ಮಾನಪ್ಪ ತಳವಾರ ಕುಷ್ಟಗಿ, ಮುತ್ತಣ್ಣ ಬ್ಯಾಡರ ಕುಕನೂರ, ಓಬಳಪ್ಪ ಯಲಬುರ್ಗಾ, ಮುಖಂಡರುಗಳಾದ ಭರಮಪ್ಪ ನಗರ, ಕೆ. ಎಂ. ಸೈಯ್ಯದ್, ಅಮ್ಜದ್ ಪಟೇಲ್, ಪ್ರಸನ್ನ ಗಡಾದ, ಶಿವಮೂರ್ತಿ ಗುತ್ತೂರ, ಯಮನೂರಪ್ಪ ನಾಯಕ್, ರಮೇಶ ನಾಯಕ ಹುಲಿಹೈದರ್, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ಮೈನಾರಿಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಲೀಂ ಅಳವಂಡಿ, ಸೇವಾದಳ ಜಿಲ್ಲಾಧ್ಯಕ್ಷ ನಿಂಗರಾಜ ಕಾಳೆ, ಶಿವಕುಮಾರ ಪಾವಲಿಶೆಟ್ಟರ್, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ ಇತರರು ಇದ್ದರು.Complete Video
https://fb.watch/aWkZ_GR-hj/

Please follow and like us: