ಪೊಲೀಸ್ ಜೀಪ್ ನ್ನೇ ಕಳ್ಳತನ ಮಾಡಿ ಪರಾರಿಯಾದ ವ್ಯಕ್ತಿ

ಪೊಲೀಸ್ ಜೀಪ್ ನ್ನೇ ಕಳ್ಳತನ ಮಾಡಿದ ಘಟನೆ ನಡೆದಿದೆ. . ಪ್ರತಿದಿನ ಪೊಲೀಸ್ ವಾಹನವನ್ನು ಕ್ಲೀನ್ ಮಾಡಲು ಠಾಣೆ ಗೆ ಬರುತ್ತಿದ್ದ ವ್ಯಕ್ತಿಯೊರ್ವ ಪೋಲಿಸ್ ಜೀಪ್ ನ್ನೇ ಕದ್ದ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಘಟನೆ ನಡೆದಿದ್ದು ನಾಗಪ್ಪ ಹಡಪದ ಜೀಪ್ ಕದ್ದ ವ್ಯಕ್ತಿ. ಎಂದಿನಂತೆ ಪೋಲಿಸ್ ಠಾಣೆಗೆ ಬಂದಿ ಜೀಪ್ ನ್ನು ಕ್ಲೀನ್ ಮಾಡಿದ್ದಾನೆ. ನಂತರ ಪೊಲೀಸ್ ಠಾಣೆ ಯಿಂದ ಪೊಲೀಸ್ ಜೀಪ್ ನೊಂದಿಗೆ ಎಸ್ಕೇಪ್ ಗಿದ್ದಾನೆ.ಜೀಪ್ ನೊಂದಿಗೆ ಪರಾರಿಯಾಗುತ್ತಿದ್ದ ನಾಗಪ್ಪನನ್ನು ಬೆನ್ನಟ್ಟಿ ಪೋಲಿಸರು ಹಿಡಿದಿದ್ದಾರೆ. ನಂತರ ಠಾಣೆಗೆ ಕರೆತಂದಿದ್ದಾರೆ. ಪೊಲೀಸ್ ಜೀಪ್ ನೊಂದಿಗೆ ನಾಗಪ್ಪ ನ ಬಂಧನ ಬಂಧಿತನಾಗಿರುವ ನಾಗಪ್ಪ ಅಣ್ಣಿಗೇರಿ ಪಟ್ಟಣದಲ್ಲಿಯೇ ವಾಸಮಾಡುತ್ತಿದ್ದ ಹಲವಾರು ದಿನಗಳಿಂದ ವಾಹನಗಳ ಸ್ವಚ್ಛ ಕಾರ್ಯ ಮಾಡುತ್ತಿದ್ದ ಎನ್ನಲಾಗಿದ್ದು ಅಣ್ಣಿಗೇರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ಧಾಖಲಾಗಿದೆ.Please follow and like us: