ಹಾಸ್ಯನಟನ “ಊ ಅಂಟಾವಾ” ವಿಡಿಯೋಗೆ ಪ್ರತಿಕ್ರಯಿಸಿದ ನಟಿ ಸಮಂತಾ

“ಪುಷ್ಪ” ಚಿತ್ರದಲ್ಲಿ ನಟಿ ಸಮಂತಾ ಅಭಿನಯಿಸಿದ “ಊ ಅಂಟಾವಾ” ಹಾಡು ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿಈ ಹಾಡನ್ನು ತಮಾ‍ಷೆಗಾಗಿ ಭಿನ್ನ ರೀತಿಯಲ್ಲಿ ಹಲವರು ವಿಡಿಯೋ ಮಾಡುತ್ತಿದ್ದಾರೆ. ಹಾಗೆಯೇ ಹಾಸ್ಯ ನಟರೊಬ್ಬರು ತಮಾಷೆ ಪೂರ್ವಕವಾಗಿ “ಊ ಅಂಟಾವಾ” ಹಾಡಿನ ವಿಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಾಸ್ಯ ವಿಡಿಯೋವನ್ನು ನಟಿ ಸಮಂತಾ ರುತ್ ಪ್ರಭು ಮೆಚ್ಚಿಕೊಂಡು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಈ ವಿಡಿಯೋ ಹಾಕುವುದರ ಜೊತೆ ನಟಿ ಸಮಂತಾ “ROFL”(ಹೊಟ್ಟೆ ಹುಣಾಗುವಷ್ಟು ನಗುತ್ತಿರುವುದು) ಎಂದು ಬರೆದುಕೊಂಡಿದ್ದಾರೆ. ಹಾಸ್ಯ ನಟ ಅಭಿಷೇಕ್ ಕುಮಾರ್ ಈ ತಮಾಷೆ ತುಣುಕನ್ನು ಪೋಸ್ಟ್ ಮಾಡಿದ್ದಾರೆ ಮತ್ತು “ಊ ಅಂಟಾವಾ, ಹಾಡನ್ನು ತಲೆಯಿಂದ ತೆಗೆಯಲು ಸಹಾಯ ಬೇಕಿದೆ” ಎಂದು ಬರೆದಿದ್ದಾರೆ. ವಿಡಿಯೋದಲ್ಲಿ ಅಭಿಷೇಕ್ ಅವರ ಸ್ನೇಹಿತ ನಿರ್ಮಲ್ ಪಿಳೈ ಅವರಿಗೆ ಈ ಹಾಡು ತಲೆಯಲ್ಲಿ ಯಾವಾಗಲೂ ಉಳಿದಿದೆ ಮತ್ತು ಅಭಿ‍ಷೇಕ್‌ಗೆ ಹಾಡು ಹೇಳುವುದನ್ನು ನಿಲ್ಲಿಸುವಂತೆ ಹೇಳಿ ಬಾತ್ ರೂಂಗೆ ಹೋಗಿ ಅವರೇ ಸ್ವತಹಾ ಹಾಡು ಗುನುಗುವುದು ಬಹಳ ಹಾಸ್ಯದಿಂದ ಕೊಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

“ಪುಷ್ಪ” ಸಿನಿಮಾದ “ಊ ಅಂಟಾವಾ” ಹಾಡಿನಲ್ಲಿ ನಟ ಅಲ್ಲು ಅರ್ಜುನ್, ನಟಿ ಸಮಂತಾ ಅಭಿನಯಿಸಿದ್ದಾರೆ.

Please follow and like us: