ನ್ಯೂಯಾರ್ಕ್ ಟೈಮ್ಸ್‌ ತೆಕ್ಕೆಗೆ ವರ್ಡಲ್ ಆನ್‌ಲೈನ್ ಗೇಮ್‌


ನೆಟ್ಟಿಗರ ಕಣ್ಮನ ಸೆಳೆಯುತ್ತಿರುವ, ತುಂಬಾ ಕಡಿಮೆ ಅವಧಿಯಲ್ಲಿ ಜನಪ್ರಿಯವಾದ ವರ್ಡಲ್ ಆನ್ಲೈನ್ ಗೇಮ್ ಅನ್ನು ಸೋಮವಾರ ನ್ಯೂಯಾರ್ಕ್ ಟೈಮ್ಸ್ ಖರೀದಿಸಿದ್ದು, ಕೊಂಡುಕೊಂಡ ಬೆಲೆ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ

ಅಮೆರಿಕ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್ ಜೋಶ್ ವಾರ್ಡಲ್ ಈ ಆಟವನ್ನು ರಚಿಸಿದ್ದಾರೆ. ಒಂದು ದಿನದಲ್ಲಿ ಆರು ಪ್ರಯತ್ನಗಳಲ್ಲಿ ಐದು ಅಕ್ಷರದ ಪದವೊಂದನ್ನು ಊಹಿಸುವ ಮೂಲಕ ಮೆದುಳಿಗೆ ಕೆಲಸ ಕೊಡುವ ಗೇಮ್ ವರ್ಡಲ್. ದಿನಕ್ಕೊಂದರಂತೆ ಮಾತ್ರವಲ್ಲದೇ ಪ್ರತಿದಿನ ಹಲವಾರು ಪದಗಳನ್ನು ಹುಡುಕುವ ಆಟವು ಇದರಲ್ಲಿದೆ.

ನಾಲ್ಕು ತಿಂಗಳ ಹಿಂದೆ ಬಳಕೆದಾರರಿಗೆ ಪರಿಚಯವಾದ ಈ ಗೇಮ್‌ಗೆ ಪ್ರಸ್ತುತ 3 ಲಕ್ಷಕ್ಕಿಂತಲೂ ಹೆಚ್ಚು ಗ್ರಾಹಕರಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಅಕ್ಟೋಬರ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಾರಂಭವಾದ ಈ ಗೇಮ್, ನವೆಂಬರ್ ಆರಂಭದಲ್ಲಿ 90 ಆಟಗಾರರನ್ನು ಹೊಂದಿತ್ತು. ಜನವರಿಯ ಆರಂಭದ ವೇಳೆಗೆ, ಬಳಕೆದಾರರ ಸಂಖ್ಯೆ 3 ಲಕ್ಷ ಮೀರಿದೆ. ಪ್ರತಿದಿನ ಲಕ್ಷಾಂತರ ಜನರು ಈ ಆನ್‌ಲೈನ್ ಆಟ ಆಡುತ್ತಿದ್ದಾರೆ.

ಈ ಗೇಮ್ ತುಂಬಾ ಸರಳವಾಗಿದ್ದು, ಆಡಲು ವಯಸ್ಸಿನ ಮಿತಿ ಇಲ್ಲ. ದಿನಕ್ಕೆ ಒಂದು ಪದ ಮಾತ್ರ ಊಹಿಸಬಹುದು ಎಂಬುದನ್ನು ಸೇರಿದಂತೆ ಪ್ರತಿದಿನ ಪ್ರತಿ ಹೊಸ ಪದ ಹುಡುಕಲು ಗೇಮ್ ಸಹಕಾರಿಯಾಗಿದೆ. ಹಾಗೆಯೇ ಈ ಗೇಮ್ ಆಡುವವರು ತಮ್ಮ ಫಲಿತಾಂಶಗಳನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಗೆಳೆಯರೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು. ಈ ಸಾಮುದಾಯಿಕ ಅನುಭವವೇ ಆಟವನ್ನು ಜನಪ್ರಿಯಗೊಳಿಸಿದೆ.

ಅಕ್ಷರಗಳನ್ನು ಜೋಡಿಸಿ ಪದ ಹುಡುಕುವ ಆಧುನಿಕ ಪದಬಂಧದ ಆಟವಾದ ಇದು, ಸರಳವಾಗಿದ್ದರೂ ಗೀಳಾಗಿಸುವ ಗುಣ ಹೊಂದಿದೆ. ಉಚಿತವಾಗಿ ಆಡಬಹುದಾದ ವರ್ಡಲ್ ಅನ್ನು ಆ್ಯಪ್ ಡೌನ್ಲೋಡ್ ಮಾಡಿ, ಸೈನ್ ಅಪ್ ಆಗದೆಯೇ ಆಡಬಹುದಾಗಿದೆ. ಇದರಲ್ಲಿ ಪದವನ್ನು ಊಹಿಸಿ ಅಕ್ಷರಗಳನ್ನು ಜೋಡಿಸಬೇಕಿರುತ್ತದೆ. ಪದ ನಿರ್ಮಾಣ ನೇರವಾಗಿಯೂ ಇರಬಹುದು, ಲಂಬವೂ ಆಗಿರಬಹುದು. ಒಟ್ಟು ಆರು ಪ್ರಯತ್ನಗಳಲ್ಲಿ ಪದವನ್ನು ಊಹಿಸುವುದು ಮುಖ್ಯ. ಖಂಡಾಂತರದಾದ್ಯಂತ ಈ ಆಟದಲ್ಲಿ ಬಳಸಿರುವ ಪದಗಳು ಒಂದೇ ಆಗಿರುತ್ತವೆ. ಪ್ರತಿದಿನ ಊಹಿಸಲು ಒಂದು ಪದವನ್ನು ಮಾತ್ರ ನೀಡಲಾಗಿರುತ್ತದೆ.

Please follow and like us: