ಮುಜಾಫರ್‌ಪುರದ ಆಶ್ರಮದ ಭಯಾನಕ ಕತೆ ಆಧರಿಸಿ ಸಿದ್ಧವಾಗುತ್ತಿದೆ ನಫೀಸಾ

ಬಿಹಾರದ ಮುಜಾಫರ್‌ಪುರದ ಸರ್ಕಾರಿ ಬಾಲಕಿಯರ ಆಶ್ರಯಧಾಮದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಅನುಭವಿಸಿದ ಲೈಂಗಿಕ ದೌರ್ಜನ್ಯತೆಯ ಭಯಾನಕತೆಗೆ ಸಂಬಂಧಿಸಿ ಸಿದ್ಧವಾಗುತ್ತಿರುವ “ನಫೀಸಾ” ಸಿನಿಮಾ ಸುದ್ದಿಯಲ್ಲಿದೆ.
ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳ್ಳಗಾಗಿ ಅನುಭವಿಸಿದ ಹಿಂಸೆ ಇಡೀ ದೇಶವೇ ಬಿಚ್ಚಿಬೀಳುವ ಹಾಗೆ ಮಾಡಿತ್ತು. ಇದೇ ವಿಚಾರವನ್ನು ಸಿನಿಮಾದ ರೂಪದಲ್ಲಿ ತೆರೆ ಮೇಲೆ ತರಲು ನಿರ್ಮಾಪಕ, ನಿರ್ದೇಶಕ ಕುಮಾರ್ ನೀರಜ್ ಬಯಸಿದ್ದಾರೆ.
“ಹಲವಾರು ವರ್ಷಗಳಿಂದ ಪ್ರಭಾವೀ ವ್ಯಕ್ತಿಗಳ ಸಂಪರ್ಕದಲ್ಲಿರುವ ವ್ಯಕ್ತಿಯೊಬ್ಬನ ನಿರ್ದೇಶನದ ಮೇರೆಗೆ ಅನಾಥಾಶ್ರಮದ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ಸಾಗಿದ ಲೈಂಗಿಕ ಹಲ್ಲೆ, ಯುವತಿಯರು ಎದುರಿಸಿದ ಕಷ್ಟಗಳಿಗೆ ಸಂಬಂಧಿಸಿದ ಕಥಾಹಂದರವನ್ನು ಸಿನಿಮಾ ಹೊಂದಿದೆ. ದೇಶ ವ್ಯಾಪಿ ಕೂಲಾಹಲ ಸೃಷ್ಟಿಸಿದ ನೈಜ ವಿಚಾರವನ್ನು ಹೊತ್ತು ಸಿನಿಮಾ ಸಾಗಲಿದೆ.
ಈಗಾಗಲೇ ಕೊರೊನಾದಿಂದಾಗಿ ಚಿತ್ರ ಪ್ರಾರಂಭಿಸಲು ತುಂಬ ತಡವಾಗಿದ್ದು, ಮಾರ್ಚ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಬಿಹಾರ್ ಮತ್ತು ಮುಂಬೈನಲ್ಲಿ ನಗರಗಳಲ್ಲಿ ಶೂಟಿಂಗ್ ನಡೆಯಲಿದೆ”. ಘಟನೆಯಾಗಿ 5 ವರ್ಷಗಳ ನಂತರ ಅಲ್ಲಿನ ಪರಿಸ್ಥಿತಿಯನ್ನು ಜನರ ಮುಂದಿಡಲು ನಿರ್ದೇಶಕ ಕುಮಾರ್ ನೀರಜ್ ಬಯಸಿದ್ದಾರೆ.
ನಿರ್ದೇಶಕ ಕುಮಾರ್ ನೀರಜ್ ನೈಜ ಕಥೆಗಳಾಧರಿತ ಸಿನಿಮಾಗಳಿಗೆ ಪ್ರಸಿದ್ಧರು. ಇವರ ಹಿಂದಿ ಸಿನಿಮಾ “ಗ್ಯಾಂಗ್ಸ್ ಆಫ್ ಬಿಹಾರ್” ಬಹಳಷ್ಟು ಪ್ರಸಿದ್ಧಿ ಪಡೆದು ಜನಮನ್ನಣೆ ತಂದುಕೊಟ್ಟಿದೆ.

Please follow and like us: