ವಾಟ್ಸಾಪ್‌ ಗ್ರೂಪ್‌ನಲ್ಲಿ ಸದಸ್ಯರ ಮೆಸೇಜ್‌ಗಳನ್ನು ಅಡ್ಮಿನ್‌ ಕೂಡ ಡಿಲೀಟ್‌ ಮಾಡಬಹುದು!

Kannadanet NEWS ಹೊಸ ಅಪ್‌ಡೇಟ್‌:

ವಾಟ್ಸಾಪ್‌ ಗ್ರೂಪ್‌ಗಳ ಅಡ್ಮಿನ್‌ಗಳು ಗ್ರೂಪಿನ ಇತರ ಸದಸ್ಯರ ಸಂದೇಶಗಳನ್ನು ಅಳಿಸಲು ಅನುಮತಿ ನೀಡುವ ಮೂಲಕ ಮೆಟಾ ಒಡೆತನದ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಗ್ರಾಹಕರಿಗಾಗಿ ಹೊಸ ವೈಶಿಷ್ಟ್ಯತೆಯೊಂದನ್ನು ಪರಿಚಯಿಸಿದೆ.

ವಾಟ್ಸಾಪ್‌ನ ಸುದ್ದಿಗಳನ್ನು ನಿರಂತರವಾಗಿ ಗಮನಿಸುವ ವಾಟ್ಸಾಪ್‌ ಬೀಟಾ ಇನ್ಫೋ ಪ್ರಕಾರ, ವಾಟ್ಸಾಪ್‌ ಗ್ರೂಪ್‌ನ ಅಡ್ಮಿನ್‌ ನಿರ್ದಿಷ್ಟ ಸಂದೇಶವನ್ನು ಅಳಿಸಿದಾಗ ಬಳಕೆದಾರರು ‘ಈ ಮೆಸೇಜ್‌ ಅನ್ನು ಅಡ್ಮಿನ್‌ ಅಳಿಸಿದ್ದಾರೆ’ (This was Deleted by an admin) ಎಂಬ ಸಂದೇಶವನ್ನು ನೋಡಬಹುದಾಗಿದೆ.‘ನೀವು ಯಾವುದಾದರೂ ಗ್ರೂಪ್ ಅಡ್ಮಿನ್ ಆಗಿದ್ದರೆ, ನಿಮ್ಮ ಗ್ರೂಪಿನಲ್ಲಿರುವ ಪ್ರತಿಯೊಬ್ಬರ ಯಾವುದೇ ಸಂದೇಶವನ್ನು ಅಳಿಸಲು ನಿಮಗೆ ಸಾಧ್ಯವಾಗುತ್ತದೆ. ಎಂದು ವ್ಯಾಟ್ಸಾಪ್‌ ಬೀಟಾ ಇನ್ಫೋ ಟ್ವೀಟ್‌ನಲ್ಲಿ ತಿಳಿಸಿದೆ.

ವ್ಯಾಟ್ಸಾಪ್, ಬೀಟಾ ಇನ್ಫೋ ಟ್ವೀಟ್‌ನೊಂದಿಗೆ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದು, ಗ್ರೂಪ್‌ ಅಡ್ಮಿನ್‌ನಿಂದ ಅಳಿಸಲಾದ ಸಂದೇಶವು ಆಂಡ್ರಾಯ್ಡ್ ಬಳಕೆದಾರರಿಗೆ ಹೇಗೆ ತೋರಿಸುತ್ತದೆ ಎಂಬುದನ್ನು ತೋರಿಸಿದ್ದಾರೆ. ಇದರಿಂದಾಗಿ, ಗ್ರೂಪ್‌ ಅಡ್ಮಿನ್‌ಗಳು ಅಶ್ಲೀಲ ಅಥವಾ ಆಕ್ಷೇಪಾರ್ಹ ಸಂದೇಶಗಳನ್ನು ಅಳಿಸಲು ಸುಲಭವಾಗುತ್ತದೆ ಎಂದು ವಿವರಿಸಿದ್ದಾರೆ.

ವಾಟ್ಸಪ್ ತನ್ನ ಡೆಸ್ಕ್ಟಾಪ್ ಅಪ್ಲಿಕೇಶನ್ ಮತ್ತು ವೆಬ್ ಆವೃತ್ತಿಗೆ ಎರಡು-ಹಂತದ ಪರಿಶೀಲನೆಯನ್ನು ಸೇರಿಸುವ ಸಾಮರ್ಥ್ಯವನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಮೊಬೈಲ್ ಅಪ್ಲಿಕೇಶನ್ ಆವೃತ್ತಿಯಲ್ಲಿ ಎರಡು-ಹಂತದ ಪರಿಶೀಲನೆ ಈಗಾಗಲೇ ಲಭ್ಯವಿದ್ದು, ವಾಟ್ಸಾಪ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನೋಂದಾಯಿಸುವಾಗ ವೈಯಕ್ತಿಕ ಪಿನ್ ಅನ್ನು ನಮೂದಿಸಬೇಕು.

Please follow and like us: