ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನೆ ನಿಯೋಜನೆ: ಉಕ್ರೇನ್‌ಅನ್ನು ಮೈತ್ರಿಗೆ ಎಳೆಯುತ್ತಿದೆ NATO..!

NATO ವಿಸ್ತರಣೆ ಮತ್ತು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಲು ತಯಾರಿ ನಡೆಸುತ್ತಿದೆ ಎಂಬ ಆತಂಕಗಳು ಜಗತ್ತನ್ನು ಆವರಿಸಿದೆ. ಈ ನಡುವೆ, NATO (North Atlantic Treaty Organization) ಸಂಸ್ಥೆಯು ಉಕ್ರೇನ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿಕೊಂಡಿದ್ದಾರೆ.

ರಾಜ್ಯ ದೂರದರ್ಶನದಲ್ಲಿ ಭಾನುವಾರದ ಕಾಮೆಂಟ್‌ಗಳಲ್ಲಿ, ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ನ್ಯಾಟೋದ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಣಾತ್ಮಕ ರಚನೆ ಎಂದು ಪ್ರಶ್ನಿಸಿದ್ದಾರೆ.

ಉಕ್ರೇನ್‌ನ ಗಡಿಯ ಬಳಿ ಅಂದಾಜು ಒಂದು ಲಕ್ಷ ರಷ್ಯಾ ಸೈನಿಕರು ಬೀಡು ಬಿಟ್ಟಿದ್ದಾರೆ. ಇದು ರಷ್ಯಾವು ಆಕ್ರಮಣಕ್ಕೆ ಮುಂದಾಗಿದೆ ಎಂಬ ಎಚ್ಚರಿಕೆಯನ್ನು ನೀಡಿದೆ. ಇದಕ್ಕೆ ವಿರುದ್ದವಾಗಿ NATO ಉಕ್ರೇನ್‌ಅನ್ನು ಮೈತ್ರಿಗೆ ಕರೆಯುತ್ತಿದೆ. ಅಲ್ಲದೆ, ರಷ್ಯಾದ ಗಡಿಗಳ ಬಳಿ ನ್ಯಾಟೋ ಶಸ್ತ್ರಾಸ್ತ್ರಗಳ ನಿಯೋಜನೆಗೆ ಮುಂದಾಗಿದೆ.

ನ್ಯಾಟೋ ನಡೆಯ ವಿರುದ್ದ ಕಿಡಿಕಾರಿರುವ ರಷ್ಯಾ, ತನ್ನ ಗಡಿಭಾಗದಲ್ಲಿ ನ್ಯಾಟೋ ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ನಿಲ್ಲಿಸಬೇಕು ಮತ್ತು ಪೂರ್ವ ಯುರೋಪ್‌ನಿಂದ ತನ್ನ ಪಡೆಗಳನ್ನು ಹಿಂಪಡೆಯುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದೆ.

ರಷ್ಯಾದ ಯೋಜಿತ ಆಕ್ರಮಣದ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ನೀಡುತ್ತಿರುವ ಎಚ್ಚರಿಕೆಗಳನ್ನು ರಷ್ಯಾ ಭದ್ರತಾ ಮಂಡಳಿಯ ಮುಖ್ಯಸ್ಥ ನಿಕೊಲಾಯ್ ಪಟ್ರುಶೆವ್ ಭಾನುವಾರ ತಿರಸ್ಕರಿಸಿದ್ದಾರೆ.

“ಈ ಸಮಯದಲ್ಲಿ, ರಷ್ಯಾ ಉಕ್ರೇನ್‌ಗೆ ಬೆದರಿಕೆ ಹಾಕುತ್ತದೆ ಎಂದು ಅವರು ಹೇಳುತ್ತಿದ್ದಾರೆ – ಅದು ಸಂಪೂರ್ಣವಾಗಿ ಹಾಸ್ಯಾಸ್ಪದವಾಗಿದೆ. ನಾವು ಯುದ್ಧವನ್ನು ಬಯಸುವುದಿಲ್ಲ ಮತ್ತು ನಮಗೆ ಅದು ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

NATO “ಈಗಾಗಲೇ ಉಕ್ರೇನ್ ಹತ್ತಿರ ಬಂದಿದೆ. ಅವರು ಈ ದೇಶವನ್ನು ತಮ್ಮತ್ತ ಎಳೆಯಲು ಬಯಸುತ್ತಿದೆ. ಆದರೆ, ನ್ಯಾಟೋ ಜೊತೆಗೆ ಮೈತ್ರಿಗೆ ಉಕ್ರೇಸ್‌ ಸಿದ್ದವಾಗಿಲ್ಲ. ರಾಷ್ಟ್ರಗಳ ಭದ್ರತೆಯನ್ನು ಬಲಪಡಿಸಲು ನ್ಯಾಟೋ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ ಎಂದು ಎಲ್ಲರೂ ಅರ್ಥಮಾಡಿಕೊಂಡಿದ್ದಾರೆ” ಎಂದು ಲಾವ್ರೊವ್ ಹೇಳಿದ್ದಾರೆ.

NATO ವಿಸ್ತರಣೆಯು ತನ್ನ ಸದಸ್ಯ ರಾಷ್ಟ್ರಗಳ ಹೊರಗೆ ಆಕ್ರಮಣಕಾರಿ ಕ್ರಮಗಳಲ್ಲಿ ತೊಡಗಿದೆ. ಹೀಗಾಗಿ, ಅವರು ರಷ್ಯಾ ಗಡಿ ಭಾಗ (ಪೂರ್ವ ಯುರೋಪ್‌)ದಲ್ಲಿ ಶಸಸ್ತ್ರಗಳನ್ನು ನಿಯೋಜಿಸಿದೆ. ಇದು ನೈಜ ಬೆದರಿಕೆಯಾಗಿದೆ ಎಂಬ ರಷ್ಯಾ ವಾದಿಸಿದೆ.

“ನ್ಯಾಟೋದ ನಡೆಯನ್ನು ರಕ್ಷಣಾತ್ಮಕ ಎಂದು ಕರೆಯುವುದು ಕಷ್ಟ. ಅವರು ಯುಗೊಸ್ಲಾವಿಯಾದಲ್ಲಿ ಸುಮಾರು ಮೂರು ತಿಂಗಳ ಕಾಲ ಬಾಂಬ್ ದಾಳಿ ನಡೆಸಿದರು, ಲಿಬಿಯಾವನ್ನು ಆಕ್ರಮಿಸಿದರು, ಯುಎನ್ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿದರು ಮತ್ತು ಅಫ್ಘಾನಿಸ್ತಾನದಲ್ಲಿ ಅವರು ಹೇಗೆ ವರ್ತಿಸಿದರು ಎಂಬುದನ್ನು ಮರೆಯಲಾಗಲು”ಎಂದು ಅವರು ಒತ್ತಿ ಹೇಳಿದ್ದಾರೆ.

ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅಥವಾ ವಾರ್ಸಾ ಒಪ್ಪಂದದ ಸದಸ್ಯರಾಗಿ ಅದರ ಪ್ರಭಾವದ ವಲಯದಲ್ಲಿದ್ದ ದೇಶಗಳನ್ನು NATO ತನ್ನತ್ತ ಸೆಳೆಯುತ್ತಿದೆ ಮತ್ತು ಆ ರಾಷ್ಟ್ರಗಳಿಗೆ ಮೈತ್ರಿಯಲ್ಲಿ ಸದಸ್ಯತ್ವವನ್ನು ನೀಡುವುದರ ಬಗ್ಗೆ ರಷ್ಯಾ ದೀರ್ಘಕಾಲದಿಂದ ಅಸಮಾಧಾನಗೊಂಡಿದೆ.

NATO ವಿಸ್ತರಣೆಯನ್ನು ನಿಲ್ಲಿಸುವಂತೆ ರಷ್ಯಾ ಇಟ್ಟಿದ್ದ ಬೇಡಿಕೆಗಳನ್ನು US ಮತ್ತು NATO ಔಪಚಾರಿಕವಾಗಿ ತಿರಸ್ಕರಿಸಿವೆ. ಆದಾಗ್ಯೂ ವಾಷಿಂಗ್ಟನ್ ಚರ್ಚೆಗಳು ಸಾಧ್ಯವಿರುವ ಪ್ರದೇಶಗಳನ್ನು ವಿವರಿಸಿದೆ, ಯುದ್ಧವನ್ನು ತಪ್ಪಿಸಲು ಒಂದು ಮಾರ್ಗವಿದೆ ಎಂದು ಭರವಸೆ ನೀಡುತ್ತದೆ.

U.S. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಶುಕ್ರವಾರ, “ರಷ್ಯಾ ಅಧ್ಯಕ್ಷ ಪುಟಿನ್ ಅವರು ಉಕ್ರೇನಿಯನ್ ನಗರಗಳು ಮತ್ತು “ಮಹತ್ವದ ಪ್ರದೇಶಗಳನ್ನು” ವಶಪಡಿಸಿಕೊಳ್ಳಲು ಅಥವಾ ಉಕ್ರೇನ್‌ನೊಳಗೆ ಒಡೆದುಹೋದ ಪ್ರದೇಶಗಳ ಗುರುತಿಸಿ “ದಬ್ಬಾಳಿಕೆಯ ಕೃತ್ಯಗಳು ಅಥವಾ ಪ್ರಚೋದನಕಾರಿ ರಾಜಕೀಯ ಕೃತ್ಯಗಳನ್ನು” ಕೈಗೊಳ್ಳಲು ತಮ್ಮ ಪಡೆಯ ಯಾವುದೇ ತುಕಡಿಯಲ್ಲಿ ಬಳಸಬಹುದು” ಎಂದು ಹೇಳಿದ್ದಾರೆ.

ಉಕ್ರೇನ್‌ನಿಂದ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ರಷ್ಯಾ ಸ್ವಾಧೀನಪಡಿಸಿಕೊಂಡ ನಂತರ 2014 ರಿಂದ ಪೂರ್ವ ಉಕ್ರೇನ್‌ನಲ್ಲಿರುವ ಎರಡು ಪ್ರದೇಶಗಳು ರಷ್ಯಾ ಬೆಂಬಲಿತ ಬಂಡುಕೋರರ ನಿಯಂತ್ರಣದಲ್ಲಿದೆ.

Please follow and like us: