ಕವಯತ್ರಿ ಶಾಂತಾದೇವಿ ಹಿರೇಮಠರಿಗೆ ಶ್ರದ್ದಾಂಜಲಿ

ಕನ್ನಡನೆಟ್ : ಇಂದು ನಿಧನರಾದ ಜಿಲ್ಲೆಯ ಹಿರಿಯ ಕವಯತ್ರಿ ಶಾಂತಾದೇವಿ ಹಿರೇಮಠರಿಗೆ ಸಾಹಿತ್ಯ ಬಳಗದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಎಲ್ಲರಿಗೂ ಮಾದರಿಯಾದ ಶಾಂತಾದೇವಿಯರ ಕುರಿತು ಹಿರಿಯ ಬರಹಗಾರರು, ಒಡನಾಡಿಗಳು ಮಾತನಾಡಿದರು. ಶಾಂತಾದೇವಿಯವರ ದೇಹದಾನಕ್ಕೂ ಮುನ್ನ ಅವರ ನಿವಾಸಕ್ಕೆ ದರ್ಶನಕ್ಕೆ ಆಗಮಿಸಿದ್ದ ಹಿರಿ, ಕಿರಿಯ ಸಾಹಿತಿಗಳು ಒಡನಾಡಿಗಳು ಹಿರೇಮಠರ ಸಾಹಿತ್ಯ ಸೇವೆ, ಹೃದಯ ವೈಶಾಲ್ಯತೆ ಎಲ್ಲರೊಂದಿಗಿನ ಒಡನಾಟವನ್ನು ಸ್ಮರಿಸಿದರು.‌ಶೀಘ್ರವೇ ಅವರ ಮುದ್ರಿತವಾಗಿರುವ ಕೊನೆಯ ಪುಸ್ತಕವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಹೆಚ್.ಎಸ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ಎ ಎಂ ಮದರಿ, ಜಿ.ಎಸ್.ಗೋನಾಳ, ಈಶ್ವರ ಹತ್ತಿ,ಡಾ. ಮಹಾಂತೇಶ ಮಲ್ಲನಗೌಡರ, ಬಿ.ಎಸ್.ಪಾಟೀಲ್, ರವಿ ಕಾಂತನವರ, ಅಮರದೀಪ್, ಶ್ರೀನಿವಾಸ ಚಿತ್ರಗಾರ, ವಿಜಯಲಕ್ಷ್ಮಿ ಕೊಟಗಿ, ಅನಸೂಯಾ ಜಾಗೀರದಾರ, ಸರೋಜಾ ಮೇಡಂ, ಶಾಂತಮ್ಮ ಟೀಚರ್, ರುದ್ರಮ್ಮ, ಸಾವಿತ್ರಿ ಮುಜುಂದಾರ್, ಸಿರಾಜ್ ಬಿಸರಳ್ಳಿ ಸತೀಶ್ , ಕುಟುಂಬದ ಸದಸ್ಯರು ಸೇರಿದಂತೆ ಇತರರು ಭಾಗವಹಿಸಿ ದ್ದರು.

Please follow and like us: