ನಡುರಸ್ತೆಯಲ್ಲಿ ಧಗಧಗನೆ ಉರಿದು ಸುಟ್ಟು ಭಸ್ಮವಾದ ಕ್ರಷರ್

ಕೊಪ್ಪಳದಲ್ಲೊಂದು ಅವಘಡ. ತಿಕೋಟಿಕರ ಪೆಟ್ರೋಲ್ ಬಂಕ್ ಬಳಿ ಸ್ವಾಮಿ ವಿವೇಕಾನಂದ ಶಾಲೆಗೆ ಹೋಗುವ ಸರ್ಕಲ್ ನಲ್ಲಿ ಕ್ರಷರ್ ಟ್ರಾಕ್ಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಜನನಿಬಿಡ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದ್ದು ಮುಖ್ಯ ರಸ್ತೆಯಲ್ಲಿ ಆತಂಕ ಸೃಷ್ಟಿಸಿತ್ತು. ಧಗಧಗನೆ ಹತ್ತಿಉರಿದ ಟ್ರಾಕ್ಸ್ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತು. ಟೈರ್ ಗಳು ಬೆಂಕಿಗೆ ಸುಟ್ಟು ಬ್ಲಾಸ್ ಆದವು.ಬೆಂಕಿಗೆ ಕಾರಣ ಏನು ಎನ್ನುವುದು ಖಚಿತವಾಗಿ ತಿಳಿದು ಬಂದಿಲ್ಲ. ಮುಖ್ಯ ರಸ್ತೆಯಲ್ಲಿಯೇ ಬೆಂಕಿ ಹತ್ತಿದ್ದರಿಂದ ವಾಹನಗಳು ನಿಂತಲ್ಲೇ ನಿಂತು ಟ್ರಾಪಿಕ್ ಜಾಮ್ ಸೃಷ್ಟಿಸಿತ್ತು. ಕೆ ಎ ೪೪, ೩೫೮೭ ನಂಬರಿನ ಈ ವಾಹನ ಬಾಗಲಕೋಟೆ ಮೂಲದ್ದು ಎಂದು ಹೇಳಲಾಗಿದೆ.ಖಾಸಗಿ ಫೈನಾನ್ಸ್ ನವರ ಕಿರುಕುಳ ಹಿನ್ನಲೆ ವಾಹನ ಮಾಲೀಕನಿಂದಲೇ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ ಎನ್ನಲಾಗುತ್ತಿದೆ. ರಸ್ತೆ ಮಧ್ಯೆ ವಾಹನಕ್ಕೆ ಬೆಂಕಿ ಹಚ್ಚಿದ ಮಾಲೀಕ ಕೊಪ್ಪಳದ ಬಸ್ ನಿಲ್ದಾಣದ ಬಳಿ ಘಟನೆ ಬಾಗಲಕೋಟೆ ಜಿಲ್ಲೆಯ ವಾಹನ ಮಾಲೀಕನಿಂದ‌ ಕ್ರೂಸರ್ ವಾಹನಕ್ಕೆ ಬೆಂಕಿ ಬದಾಮಿ ತಾಲೂಕಿನ ಗುಳೆದಗುಡ್ಡ ಸ್ಟೇಶನ್ ನ ಸುಭಾಶಚಂದ್ರ ನಿಂದ ಕ್ರೂಸರ್ ವಾಹನಕ್ಕೆ ಬೆಂಕಿ ಕೆಎ 44 3587 ಕ್ರೂಷರ್ ವಾಹನಕ್ಕೆ ಬೆಂಕಿ ಕಂತು ಕಟ್ಟಲು ಕಿರಕುಳ ನೀಡುತ್ತಿದ್ದ ಖಾಸಗಿ ಫೈನಾನ್ಸ್ ಕಂಪನಿ ಇಂದು ಖಾಸಗಿ ಫೈನಾನ್ಸ್ ನವರು ಸುಭಾಷಚಂದ್ರ ಜೊತೆಗೆ ವಾಗ್ವಾದ ಈ ಹಿನ್ನಲೆಯಲ್ಲಿ ಕ್ರೂಸರ್ ಗೆ ಬೆಂಕಿ ಹಚ್ಚಿದ ಸುಭಾಷಚಂದ್ರ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮನ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
Video…

Please follow and like us: