ಅಂಬೇಡ್ಕರ್‌ರವರ ಭಾವಚಿತ್ರ ತೆಗೆಯಲು ಸೂಚಿಸಿದ ವಿಷಯ ಖಂಡನೀಯ-ಅನೀಸ್ ಪಾಷಾ

ದಾವಣಗೆರೆ :: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರಿನ ಜಿಲ್ಲಾ ನ್ಯಾಯಧೀಶರಾದ ಮಲ್ಲಿಕಾರ್ಜುನ ಗೌಡರವರು ಡಾ . ಬಿ.ಆರ್ . ಅಂಬೇಡ್ಕರ್‌ರವರ ಭಾವಚಿತ್ರವನ್ನು ತೆಗೆಯಲು ಸೂಚಿಸಿದ ವಿಷಯವು ತುಂಬಾ ಖಂಡನೀಯವಾಗಿದೆ ಎಂದು ಪೀಪಲ್ ಲಾಯರ್ಸ್ ಗಿಲ್ಡ್ ರಾಜ್ಯ ಸಂಚಾಲಕರಾದ ಅನೀಸ್ ಪಾಷಾ ಹೇಳಿದ್ದಾರೆ

ಮುಖ್ಯವಾಗಿ ನ್ಯಾಯಾಂಗ ವ್ಯವಸ್ಥೆಗೆ ಆಗಿರುವ ಆಘಾತದ ಸಂಗತಿ ಈ ಘಟನೆ ನಡೆಯಲು ಮುಖ್ಯವಾಗಿ ಸರ್ಕಾರದ ನಿರ್ಲಕ್ಷ ದೋರಣೆ ಕೂಡ ಮುಖ್ಯ ಕಾರಣವಾಗಿದೆ . ದಿ : 25/01/2020 ರಂದು ಸರ್ಕಾರವು ಸುತ್ತೋಲೆಯನ್ನು ಹೊರಡಿಸಿ ಸರ್ಕಾರಿ ಕಛೇರಿಗಳು , ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲಾ ಕಾಲೇಜು ಸೇರಿದಂತೆ ಸರ್ಕಾರ ವತಿಯಿಂದ ನಡೆಯುವ ಎಲ್ಲಾ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಂವಿಧಾನದ ಪಿತಾಮಹ ಡಾ | ಬಿ.ಆರ್ . ಅಂಬೇಡ್ಕರ್‌ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಲಾಗಿತ್ತು . ಹೀಗಿದ್ದಾಗ ನ್ಯಾಯಾಂಗ ಇಲಾಖೆಯ ಆಡಳಿತ ಅಧಿಕಾರಿಗಳು ಈ ವಿಚಾರವನ್ನು ಪರಿಶೀಲಿಸಿ ತಮ್ಮ ಅಧೀನ ನ್ಯಾಯಾಲಯಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಬೇಕಾಗಿತ್ತು . ಕಳೆದ ವರ್ಷ ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಕೂಡ ಫೋಟೋ ವಿಚಾರದ ಬಗ್ಗೆ ಗೊಂದಲದ ವಾತಾವರಣ ಸೃಷ್ಟಿಯಾಗಿ ದಾವಣಗೆರೆಯ ವಕೀಲರ ಒಂದು ನಿಯೋಗ ಉಚ್ಚ ನ್ಯಾಯಾಲಯದ ರಿಜಿಸ್ಟಾರ್‌ರವರಿಗೆ ಮನವಿಯನ್ನು ಕೂಡ ಮಾಡಿತ್ತು . ಆ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಸ್ಪಷ್ಟವಾದ ನಿರ್ದೇಶನವನ್ನು ಅಧೀನ ನ್ಯಾಯಾಲಯಗಳಿಗೆ ನೀಡಿದ್ದರೆ , ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲವೆನೊ , ಅಧೀನ ನ್ಯಾಯಾಲಯದ ನ್ಯಾಯಾಧೀಶರು ಉಚ್ಚ ನ್ಯಾಯಾಲಯದ ಆದೇಶವನ್ನು ಚಾಚು ತಪ್ಪದೆ ಪಾಲಿಸಬೇಕಾಗುತ್ತದೆ ಹಾಗಾಗಿ ರಾಯಚೂರಿನ ಘಟನೆಯಲ್ಲಿ ಸರ್ಕಾರದ ನಿರ್ಲಕ್ಷತನವು ಕೂಡ ಒಂದು ಕಾರಣವಾಗಿದ್ದು , ಸರ್ಕಾರವು ಕೂಡ ಇದಕ್ಕೆ ನೇರ ಹೊಣೆಯಾಗಿದೆ . ಧನ್ಯವಾದಗಳೊಂದಿಗೆ , ಆದ್ದರಿಂದ ಈ ಮೂಲಕ ಮುಖ್ಯ ಮಂತ್ರಿಗಳು ಈ ಘಟನೆಯನ್ನು ಲಘುವಾಗಿ ಪರಿಗಣಿಸದೆ CMV ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಲು ಎಲ್ಲಾ ಇಲಾಖೆಗಳಿಗೆ ಸ್ಪಷ್ಟವಾದ ನಿರ್ದೇಶನವನ್ನು ನೀಡಿ ಗೊಂದಲ ನಿವಾರಣೆ ಮಾಡಿ ನಮ್ಮ ದೇಶದ ಸಂವಿಧಾನವನ್ನು ಅದರ ಸೃಷ್ಟಿಕರ್ತರಾದ ಡಾ || ಬಿ.ಆರ್ ಅಂಬೇಡ್ಕರ್‌ರವರ ಹಾಗೂ ನ್ಯಾಯಾಂಗದ ಘನತೆ ಮತ್ತು ಗೌರವವನ್ನು ಕಾಪಾಡಬೇಕಾಗಿದೆ ಎಂದು. ಅನೀಸ್ ಪಾಷ ಆಗ್ರಹಿಸಿದ್ದಾರೆ

Please follow and like us: