ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ ನ್ಯಾಯಾಧೀಶರ ವಿರುದ್ದ ಕ್ರಮಕ್ಕೆ ಕೊಪ್ಪಳ ಬಾರ್‌ ಕೌನ್ಸಿಲ್‌ ಆಗ್ರಹ

ಕೊಪ್ಪಳ: ಗಣರಾಜ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಾಯಚೂರಿನ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಎಂ.ಸಿ. ಪಾಟೀಲ್‌ (ಮಲ್ಲಿಕಾರ್ಜುನಗೌಡ) ಅವರ ವಿರುದ್ಧ ಸೂಕ್ತ ಹಾಗೂ ಕಠಿಣ ಕ್ರಮ ಜರುಗಿಸಬೇಕು ಎಂದು ಕೊಪ್ಪಳ ಜಿಲ್ಲಾ ವಕೀಲರ ಸಂಘ ಗೊತ್ತುವಳಿ ಸ್ವೀಕರಿಸಿದೆ.

ನೂತನ ಅಧ್ಯಕ್ಷ ಎ.ವಿ. ಕಣವಿ ಅಧ್ಯಕ್ಷತೆಯಲ್ಲಿ ಗುರುವಾರ ತುರ್ತು ಸಭೆ ಸೇರಿಸಲಾಗಿತ್ತು, ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ.ಸಿ. ಪಾಟೀಲ್‌ ಅವರ ವರ್ತನೆಯನ್ನು ಅಮಾನವೀಯ ಎಂದು ಸಭೆ ಖಂಡಿಸಿತು. ಅವರ ಈ ಕೃತ್ಯವು ಸಂವಿಧಾನವನ್ನು ತಂದುಕೊಟ್ಟಂತಹ ಮಹಾನ್‌ ವ್ಯಕ್ತಿಗೆ ಮಾಡಿದ ಅವಮಾನ ಎಂದು ಸಂಘವು ಆಕ್ರೋಶ ವ್ಯಕ್ತಪಡಿಸಿದೆ.

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಮಾಡಿದ ಅವಮಾನವನ್ನು ಸಹಿಸುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಅವರ ಮೇಲೆ ಕ್ರಮ ಜರುಗಿಸಲು ಮಾನ್ಯ ಉಚ್ಚ ನ್ಯಾಯಾಲಯವು ಒಂದು ಸಮಿತಿಯನ್ನು ರಚಿಸಬೇಕು ಹಾಗೂ ಇನ್ನುಳಿದ ಇಲಾಖೆಗಳ ಸಹಯೋಗದೊಂದಿಗೆ ವರದಿ ಪಡೆದುಕೊಂಡು ಸದರಿ ನ್ಯಾಯಾಧೀಶರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ದಿವಾಕರ ಎಸ್.‌ ಬಾಗಲಕೋಟೆ, ಪ್ರಧಾನ ಕಾರ್ಯದರ್ಶಿ ಬಿ.ವಿ. ಸಜ್ಜನ್‌, ಜಂಟಿ ಕಾರ್ಯದರ್ಶಿ ಎಲ್.ಎಚ್.‌ ಹಿರೇಗೌಡರ್‌, ಖಜಾಂಚಿ ಸಿ.ಎಂ. ಪೊಲೀಸ್‌ ಪಾಟೀಲ್‌ ಸಹಿತ ಕಾರ್ಯಕಾರಿಣಿಯ ಇತರ ಸದಸ್ಯರು ಹಾಗೂ ವಕೀಲರು ಹಾಜರಿದ್ದರು.

ಗೊತ್ತುವಳಿ ಹೀಗಿದೆ

ಕೊಪ್ಪಳ ಇಂದು ದಿನಾಂಕ : – 27-01-2022 ರಂದು ಜಿಲ್ಲಾ ವಕೀಲರ ಸಂಘ ಕೊಪ್ಪಳದಲ್ಲಿ ಜರುಗಿದ ತುರ್ತು ಸಭೆಯ ಅಂತೀಮ ನಿರ್ಣಯ ಈ ರೀತಿ ಇರುತ್ತದೆ . ತುರ್ತು ಸಭೆಯಲ್ಲಿ ಉಪಸ್ಥಿತಿರಿದ್ದ ಎಲ್ಲಾ ಸಂಘದ ಸದಸ್ಯರ ಅಭಿಪ್ರಾಯವನ್ನು ಪಡೆಯಲಾಯಿತು . ಒಟ್ಟಾರೆ ಅಭಿಪ್ರಾಯದಂತೆ ದಿನಾಂಕ : 26-01 2022 ರಂದು ಗಣರಾಜ್ಯೋತ್ಸವ ಧ್ವಜರೋಹಣ ಸಮಾರಂಭದಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರರಾದ ಎಂ.ಸಿ. ಪಾಟೀಲ್ ( ಮಲ್ಲಿಕಾರ್ಜುನಗೌಡ ) ಇವರು ಅಂಬೇಡ್ಕರ ಭಾವಚಿತ್ರವನ್ನು ತೆಗೆದರೆ ಮಾತ್ರ ರಾಷ್ಟ್ರ ಧ್ವಜವನ್ನು ಅನಾವರಣ ಗೊಳಿಸುತ್ತೇನೆಂದು ಮಾಡಿದ ಅಮಾನವೀಯ ವರ್ತನ ಅತ್ಯಂತ ಖಂಡನಾರ್ಹ ಹಾಗೂ ಸಂವಿಧಾನ ವಿರುದ್ಧ ಕೃತ್ಯವೆಂದು ಸಭೆಯ ಎಲ್ಲಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು . ಇಂದು ದಿನಾಂಕ : – 27-01-2022 ರಂದು ಜಿಲ್ಲಾ ವಕೀಲರ ಸಂಪ ಕೊಪ್ಪಳದಲ್ಲಿ ಆದ ಸರ್ವನುಮತದ ಗೊತ್ತುವಳಿಯಂತೆ ಜಿಲ್ಲಾ ಪ್ರಧಾನ ನ್ಯಾಯಾಧೀಶರರಾದ ಎಂ.ಸಿ. ಪಾಟೀಲ್ ಇವರು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಗೊತ್ತುವಳಿ ಮುಂದುವರೆದು ಅವರು ಮಾಡಿದ ಕೃತ್ಯವು ಈ ದೇಶಕ್ಕೆ ಸಂವಿಧಾನವನ್ನು ತಂದು ಕೊಟ್ಟಂತಹ ಮಹಾನ್ ನಾಯಕ ಜಗತ್ತಿನ ಶ್ರೇಷ್ಠ ವ್ಯಕ್ತಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಯಿತು . ಆ ದೆಸೆಯಲ್ಲಿ ಈ ದೇಶಕ್ಕೆ ಸಂವಿಧಾನ , ಪ್ರಜಾಪ್ರಭುತ್ವ ಒಟ್ಟಾರೆ ಭಾರತೀಯ ಸಮಾಜದ ಎಲ್ಲಾ ಜಾತಿ ಜನಾಂಗದ ವರ್ಗದವರಿಗೆ ಸ್ವಾತಂತ್ರ್ಯ , ಸಮಾನತೆ , ವಿಶ್ವಪ್ರೇಮ , ಅದರ ಜೊತೆಗ ಮಾನವೀಯ ಹಕ್ಕುಗಳಿಗೆ ಎಲ್ಲಾವನ್ನು ತ್ಯಾಗ ಮಾಡಿದ ಮಹಾನ್ ವ್ಯಕ್ತಿ ಡಾ || ಬಾಬಾ ಸಾಹೇಬ ಅಂಬೇಡ್ಕರ ಅವರಿಗೆ ಮಾಡಿದ ಅವಮಾನವನ್ನು ಯಾವುದೇ ಕಾರಣಕ್ಕೆ ಸಹಿಸಲು ಸಾಧ್ಯವಿಲ್ಲ . ಈ ಹೆಸೆಯಲ್ಲಿ ಸರ್ಕಾರವು ಎಂ.ಸಿ. ಪಾಟೀಲ್ ( ಮಲ್ಲಿಕಾರ್ಜುನಗೌಡ ) , ನ್ಯಾಯಾಧೀಶರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯ ಉಚ್ಚನ್ಯಾಯಾಲಯ ಬೆಂಗಳೂರು ಇವರು ಒಂದು ಕಾನೂನುಬದ್ಧ ಕಮೀಟಿಯನ್ನು ನೇಮಕ ಮಾಡಿ ಹಾಗೂ ಇನ್ನೂಳಿದ ಜಿಲ್ಲಾ ಇಲಾಖೆಗಳ ಸಹಯೋಗದೊಂದಿಗೆ ವರದಿಯನ್ನು ಪಡೆದುಕೊಂಡು ನ್ಯಾಯಾಧೀಶರ ಮೇಲೆ ಯಾವುದೇ ರೀತಿಯ ಒತ್ತಡ , ಆಮೀಷಕ್ಕೆ ಒಳಗಾಗದೆ ಸದರಿ ನ್ಯಾಯಾಧೀಶರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಲು ಕಾರ್ಯ ಪ್ರವೃತ್ತಿರಾಗಬೇಕು .

ಮುಂದಿನ ದಿನಮಾನಗಳಲ್ಲಿ ಬಾಬಾ ಸಾಹೇಬ ಅಂಬೇಡ್ಕರವರ ಭಾವಚಿತ್ರವನ್ನು ಜನವರಿ 26 ರಂದು ಜರುಗುವ ಗಣರಾಜ್ಯೋತ್ಸವದಲ್ಲಿ ಕಡ್ಡಾಯವಾಗಿ ಇಡಬೇಕು . ಈಗಾಗಲೇ ಸರ್ಕಾರವು ಕೂಡ ಆದೇಶ ಮಾಡಿದ್ದು ಇರುತ್ತದೆ . ಅದೇ ರೀತಿಯಾಗಿ ಮುಂದಿನ ದಿನಮಾನಗಳಲ್ಲಿ ವ್ಯಕ್ತಿ ಎಂತಹ ಅತ್ಯುನ್ನತ್ತ ಸಂವಿಧಾನ್ಮಾತಕ ಹುದ್ದೆಯಲ್ಲಿ ಇದ್ದರೂ ಕೂಡ ಡಾ || ಬಾಬಾ ಸಾಹೇಬ ಅಂಬೇಡ್ಕರರವರಿಗೆ ಯಾವುದೇ ರೀತಿಯ ಅವಮಾನವಾಗದಂತೆ ಮಾನ್ಯ ಉಚ್ಚನ್ಯಾಯಾಲಯವು ಈ ದೆಸೆಯಲ್ಲಿ ಸೂಕ್ತ ನಿರ್ಣಯ ಕೈಗೊಂಡು ಎಲ್ಲರೂ ಕಡ್ಡಾಯವಾಗಿ ಮಾನ್ಯ ಉಚ್ಚನ್ಯಾಯಾಲಯವು ಮಾಡಿದ ನಿರ್ಣಯದಂತೆ ಚಾಚು ತಪ್ಪದೇ ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮ ಮುಂದಾಗಬೇಕೆಂದು ಸೂಕ್ತ ನಿರ್ದೇಶನ ಮತ್ತು ಆದೇಶ ಆಗಬೇಕೆಂದು ನಮ್ಮ ವಕೀಲರ ಸಂಘದ ಸರ್ವ ಸದಸ್ಯರ ಸರ್ವನುಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರಿಂದ ಸರ್ವಾನುಮತದ ಗೊತ್ತುವಳಿಯನ್ನು ಅಂಗೀಕರಗೊಳಿಸಲಾಯಿತು . ಗೊಳ್ಳಲು : – ಅಧ್ಯಕ್ಷರು ಕೊಪ್ಪಳ ಜಿಲ್ಲಾ ವಕೀಲರ ಸಂಘ ಕೊಪ್ಪಳ A. V. KANAVI PRESIDENT Koppal District Bar Associstion ( R )

Please follow and like us: