ರಾಯಚೂರಿನ ಜಿಲ್ಲಾ ನ್ಯಾಯಾಧೀಶ ವಿರುದ್ದ ಕೊಪ್ಪಳದಲ್ಲಿ ಕಪ್ಪುಪಟ್ಟಿ ಧರಿಸಿ ತೀವ್ರ ಪ್ರತಿಭಟನೆ


ಕನ್ನಡನೆಟ್ ಕೊಪ್ಪಳ : ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವ ಚಿತ್ರಕ್ಕೆದ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ದಲಿತ ಸಂಘಟನೆ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು,ಪ್ರಗತಿಪರ ಸಂಘಟನೆಯವರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನ್ಯಾಯಾಧೀಶರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಬೇಕು ಮತ್ತು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿರುವ ನ್ಯಾಯಾದೀಶರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರಮೇಶ ದೊಡ್ಡಮನಿ, ರವಿ ಮಾಟಲದಿನ್ನಿ, ಮೈಲಾರಪ್ಪ ಕೆ.ಎಸ್. ಹನುಮೇಶ ಮ್ಯಾಗಳಮನಿ, ಕಾಶಪ್ಪ, ಹಿರೇಮನಿ, ಗಣೇಶ ಹೊರತಟ್ನಾಳ, ಡಿ.ಎಚ್.ಪೂಜಾರ್, ಬಸವರಾಜ್ ಶೀಲವಂತರ ಮುದುಕಪ್ಪ ನರೇಗಲ್, ಗುಡದಪ್ಪ ಬಂಗಿ, ಮಾರ್ಕಂಡೆಪ್ಪ, ಗವಿಸಿದ್ದಪ್ಪ ಕೊಪ್ಪಳ, ರಮೇಶ ಬೇಲೂರ, ಹುಲುಗಪ್ಪ ಬೇವೂರ,ರೇವಣ್ಣ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.Please follow and like us: