ಮಲ್ಲಿಕಾರ್ಜುನ ಗೌಡರನ್ನು ನೌಕರಿಯಿಂದ ವಜಾಮಾಡಿ , ದೇಶ ದ್ರೋಹ ಪ್ರಕರಣ ದಾಖಲಿಸಿ ಬಂಧಿಸಲು ಭೀಮ್ ಆರ್ಮಿ ಒತ್ತಾಯ

ಕನ್ನಡನೆಟ್ ಕುಕನೂರ : ಅಂಬೇಡ್ಕರ್ ಅವರಿಗೆ & ಸಂವಿಧಾನಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ಮುಖ್ಯ ನ್ಯಾಯಾದೀಶರಾದ ಜಾತಿವಾದಿ ಮಲ್ಲಿಕಾರ್ಜುನ ಗೌಡ ಅವರನ್ನು ನೌಕರಿಯಿಂದ ವಜಾಮಾಡಿ , ದೇಶ ದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ಕುಕನೂರಿನ ಭೀಮ್ ಆರ್ಮಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ. ಕುಕನೂರಿನ ತಹಶೀಲ್ದಾರ ಮುಖಾಂತರ ಸಲ್ಲಿಸಿದ ಮನವಿಯಲ್ಲಿ

ಡಾ . ಬಿ . ಆರ್ . ಅಂಬೇಡ್ಕರ್ ಅವರಿಗೆ & ಸಂವಿಧಾನಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ಮುಖ್ಯ ನ್ಯಾಯಾದೀಶರಾದ ಜಾತಿವಾದಿ ಮಲ್ಲಿಕಾರ್ಜುನ ಗೌಡ ಅವರನ್ನು ನೌಕರಿಯಿಂದ ವಜಾಮಾಡಿ , ದೇಶ ದ್ರೋಹ ಪ್ರಕರಣ ದಾಖಲಿಸಿ ಬಂಧಿಸುವ ಆಗ್ರಹಿಸಿದೆ. ಕೊಪ್ಪಳ ಜಿಲ್ಲಾಧಿಕಾರಿಯ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ.

ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ ಗಣರಾಜ್ಯೋತ್ಸ ದಿನದಂದು ಡಾ . ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯಾದೀಶ ಮಲ್ಲಿಕಾರ್ಜುನ್ ಗೌಡ ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು ಭಾರತ ರತ್ನ , ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್ . ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ . ಇವರು ನ್ಯಾಯಧೀಶ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ . ಇದು ರಾಯಚೂರ ಜಿಲ್ಲೆ ಮುಖ್ಯ ನ್ಯಾಯಾಧೀಶರ ದೇಶ ದ್ರೋಹ ಕೃತ್ಯ : ಈ ಕೂಡಲೇ ರಾಯಚೂರ ಜಿಲ್ಲೆ ಮುಖ್ಯ ನ್ಯಾಯಾಧೀಶರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲಿಸಬೇಕು . ಮಾನ್ಯ ಉಚ್ಚನ್ಯಾಯಾಲಯವೂ ಸ್ವಯಂಪ್ರೇರಿತವಾಗಿ ಯಿಂದ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲು ಬಂಧಿಯನ್ನಾಗಿಸಬೇಕು . – ಸರ್ಕಾರದ ನೌಕರಿಯಿಂದ ವಜಾ ಮಾಡಬೇಕು ಎಂದು ಭೀಮ್ ಆರ್ಮಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು

ಭೀಮ್ ಆರ್ಮಿ ಕುಕನೂರು ತಾಲೂಕ್ ಘಟಕ ಮತ್ತು ಇನ್ನಿತರ ಸಂಘಟನೆಗಳ ಒಕ್ಕೂಟ ವಹಿಸಿಕೊಂಡಿತ್ತು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷರು ಶಂಕರ್ ಭಂಡಾರಿ ಭೀಮ್ ಅರ್ಮಿ ಮುಖಂಡ ನಿಂಗು ಜಿ ಎಸ್ ಬೆಣಕಲ್ ಗುಡದೇಶ್ ಬಂಗಾಳಿ, ಶರಣಪ್ಪ ಚಲವಾದಿ ಗವಿ ಶಲೂಡಿ ಮರಿಶ್ವಾಮಿ ಪೂಜರ, ನೀಲಪ್ಪ ಬೆಣಕಲ್
ಶಿವರಾಜ್ ದೊಡ್ಡಮನಿ ಇನ್ನಿರ ದಲಿತ ಹಿಂದುಳಿದ ಪ್ರಗತಿಪರ ಮುಖಂಡರು ಉಪಸ್ಥಿತರಿದ್ದರು.

Please follow and like us: