ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ವೀಡಿಯೋ ವೈರಲ್‌ !

Raichur : 


ದೇಶದೆಲ್ಲೆಡೆ ಇಂದು ಗಣರಾಜ್ಯೋತ್ಸವ ಸಂಭ್ರಮಾಚರಣೆ, ಅಂಬೇಡ್ಕರ್‌ ಗುಣಗಾನ ನಡೆಯುತ್ತಿದ್ದರೆ ರಾಯಚೂರಿನ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿರಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆದಿರುವ ವಿಚಾರ
ವಿವಾದಕ್ಕೆಡೆ ಮಾಡಿಕೊಟ್ಟಿದೆ.

ನ್ಯಾಯಾಲಯದ ಆವರಣದಲ್ಲಿಆಯೋಜಿಸಿದ್ದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಅಕ್ಕ-ಪಕ್ಕ ಇಡಲಾಗಿತ್ತು. ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಡಲು ಸರ್ಕಾರದ ಆದೇಶವಿಲ್ಲವೆಂದು ಹೇಳಿದ ಜಿಲ್ಲಾ ನ್ಯಾಯಾಧೀಶರು, ಫೋಟೋ ತೆಗೆಯುವಂತೆ ಆಯೋಜಕರಿಗೆ ಸೂಚಿಸಿದ್ದಾರೆ. ಇದಕ್ಕೆ ವಿರೋಧಿಸಿ
ಪರಿಶಿಷ್ಟ ಜಾತಿ-ಪಂಗಡದ ವಕೀಲರು ಕೋರ್ಟ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನಂತರ ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಡಬೇಕೆಂದು ಬರೆದಿರುವ ಮಾಹಿತಿಯನ್ನು ಸತ್ರ ನ್ಯಾಯಾಧೀಶರ ಗಮನಕ್ಕೆ ತರಲಾಯಿತು. ಇದೀಗ ನ್ಯಾಯಾಲಯದಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲಿರಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಂಬೇಡ್ಕರ್‌ ಭಾವಚಿತ್ರ ತೆರವುಗೊಳಿಸಿ, ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದು.

ರಾಯಚೂರಲ್ಲಿ ಡಿಎಸ್ಎಸ್ ಕೆಂಡಮಂಡಲ ರಸ್ತೆ ತಡೆದು ಪ್ರತಿಭಟನೆ.ರಾಯಚೂರು ಅಂಬೇಡ್ಕರ್ ಸರ್ಕಲ್ ಬಳಿ ಉದ್ರಿಕ್ತ ವಾತಾವರಣ ಪೊಲೀಸರು ಬಿಗಿ ಬಂದೋಬಸ್ತ

Please follow and like us: