ಕೂದಲು ಉದ್ಯಮಿಗಳ ೧೦ ವರ್ಷದ ಹೋರಾಟಕ್ಕೆ ಜಯ : ಕಚ್ಚಾ ಮಾಲು ರಪ್ತಿಗೆ ನಿರ್ಭಂದ

ಕನ್ನಡನೆಟ್ : ಭಾಗ್ಯನಗರದ ಭಾಗ್ಯ ಮತ್ತೊಮ್ಮೆ ತೆರೆಯುತ್ತಿದೆ ಎಂದೇ ಹೇಳಬಹುದು. ಸರ್ಕಾರ ಕಚ್ಚಾ ಕೂದಲು ವಸ್ತು, ಸಂಸ್ಕರಣಗೊಳ್ಳದ ಕೂದಲ ರಫ್ತು ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ .

ಮತ್ತೆ ಆರಂಭವಾಗಲಿವೆ ಕೂದಲು ಸಂಸ್ಕರಣಾ ಘಟಕಗಳು, ಆರಂಭವಾಗಲಿದೆ ವ್ಯಾಪಾರ…

ಇದರಿಂದಾಗಿ ಕಳೆದ ಹತ್ತು ವರ್ಷಗಳಿಂದ ಭಾಗ್ಯನಗರದ ಕೂದಲು ವ್ಯಾಪಾರಿಗಳು , ಉದ್ಯಮಿಗಳು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ೧೦ ವರ್ಷಗಳ ಹಿಂದೆ ಸರಕಾರ ಜಾರಿಗೆ ತಂದಿದ್ದ ಹೊಸ ರಪ್ತು ನೀತಿಯಿಂದಾಗಿ ಭಾಗ್ಯನಗರದಲ್ಲಿ ಸಂಸ್ಕರಣ ಘಟಕಗಳು ಬಂದ್ ಆಗಿ ಸಾವಿರಾರು ಜನರು ಕೆಲಸ ಕಳೆದುಕೊಳ್ಳುವಂತಾಗಿತ್ತು. ಈಗ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಮುಂದಿನ ಆದೇಶದವರೆಗೆ ಕಚ್ಚಾ ಕೂದಲನ್ನು ರಪ್ತು ಮಾಡುವುದನ್ನು ನಿಷೇಧಿಸಿ ಆದೇಶ ನೀಡಿದೆ. ಈ ಹಿಂದೆ ಕಚ್ಚಾ ಮಾಲು ಕೂದಲು ಕಚ್ಚಾವಸ್ತು ರಪ್ತಿಗೆ ಅವಕಾಶ ನೀಡಿದ್ದರಿಂದಾಗಿ ಕೇವಲ ಕೊಪ್ಪಳ ಜಿಲ್ಲೆಯ ಭಾಗ್ಯನಗರ ಅಷ್ಟೇ ಅಲ್ಲದೆ ಇಡೀ ದೇಶಾದ್ಯಂತ ಕೂದಲು ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದಂತಾಗಿತ್ತು.

ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದರು. ಕೇವಲ ಕರ್ನಾಟಕ ಅಷ್ಟೇ ಅಲ್ಲದೆ ಪಕ್ಕದ ಆಂಧ್ರ ತೆಲಂಗಾಣ ತಮಿಳುನಾಡು ಪಶ್ಚಿಮಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲೂ ಸಹ ಕೂದಲು ಉದ್ಯಮ ಸಂಸ್ಕರಣ ಘಟಕಗಳು ಕಳೆದ ಅರವತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದವು. ಸರಕಾರದ ನೀತಿಯಿಂದಾಗಿ ಕೂದಲನ್ನು ಸಂಸ್ಕರ ಮಾಡದೇ ರಪ್ತು ಮಾಡಲು ಅವಕಾಶ ನೀಡಲಾಗಿತ್ತು . ಕೂದಲನ್ನು ಸಂಗ್ರಹಿಸಿದ ನಂತರ ಸಂಸ್ಕರಣ ಘಟಕಗಳು ಕೆಲಸ ನಿರ್ವಹಿಸುತ್ತಾ ಇದ್ದವು. ಇದರಿಂದ ಸಾವಿರಾರು ಜನರಿಗೆ ಉದ್ಯೋಗಾವಕಾಶಕ್ಕೆ ಕಾರಣವಾಗಿತ್ತು. ಆದರೆ ಸರಕಾರದ ರಪ್ತು ನೀತಿಯಿಂದ ನಿರುದ್ಯೋಗ ಸೃಷ್ಟಿಯಾಗಿತ್ತು.

ಭಾಗ್ಯನಗರ ಕೇವಲ ನೇಕಾರಿಕೆ ಅಲ್ಲದೆ ಕೂದಲು ಉದ್ಯಮಕ್ಕೂ ಪ್ರಸಿದ್ಧವಾಗಿತ್ತು ಭಾಗ್ಯನಗರದಲ್ಲಿ ಮುನ್ನೂರಕ್ಕೂ ಹೆಚ್ಚು ಕೂದಲು ಸಂಸ್ಕರಣಾ ಘಟಕಗಳು ಇದ್ದವು ಜೊತೆಗೆ ಕೇವಲ ಭಾಗ್ಯನಗರ ಪಟ್ಟಣದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಭಾಗ್ಯನಗರ ಅಷ್ಟೇ ಅಲ್ಲದೆ ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಹ ಕೂದಲು ಸಂಸ್ಕರಣಾ ಘಟಕಗಳು ಕೆಲಸ ನಿರ್ವಹಿಸುತ್ತಿದ್ದವು. ಇದರಿಂದಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಇಲ್ಲಿ ಉದ್ಯೋಗ ಅವಕಾಶ ಸಿಕ್ಕಿತ್ತು . ಆದರೆ ಕಳೆದ ಹತ್ತು ವರ್ಷದ ಹಿಂದೆ ಸರಕಾರದ ನೀತಿಯಿಂದಾಗಿ ಇಡೀ ಕೂದಲು ಉದ್ಯಮ ನೆಲಕಚ್ಚಿತ್ತು ಇದನ್ನೇ ನೆಚ್ಚಿಕೊಂಡು ಬದುಕುತ್ತಿದ್ದ 15 20 ಸಾವಿರ ಕಾರ್ಮಿಕರು ಕೆಲಸಗಳನ್ನು ಕಳೆದುಕೊಂಡಿತು. ಈಗ ಭಾಗ್ಯನಗರದಲ್ಲಿ ಹತ್ತರಿಂದ ಹದಿನೈದು ಸಂಸ್ಕರಣ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಈಗ ಸರಕಾರ ಹೊರಡಿಸಿರುವ ಹೊಸ ಆದೇಶದಿಂದಾಗಿ ಭಾಗ್ಯನಗರ ಸೇರಿದಂತೆ ಕೊಪ್ಪಳ ತಾಲೂಕಿನಲ್ಲಿ 20 ಸಾವಿರ ಜನಕ್ಕೆ ಉದ್ಯೋಗ ಅವಕಾಶ ಲಭ್ಯವಾಗಲಿದೆ ಮುನ್ನೂರಕ್ಕೂ ಹೆಚ್ಚು ಸಂಸ್ಕರಣ ಘಟಕಗಳು ಕಾರ್ಯಾರಂಭ ಮಾಡಲಿವೆ ಇದರಿಂದಾಗಿ ಆರ್ಥಿಕತೆಗೆ ಬಲ ಸಿಗುತ್ತದೆ . ದೇಶಾದ್ಯಂತ ೫-೬ ಸಾವಿರ ಕೋಟಿ ರೂಪಾಯಿಗಳ ವಹಿವಾಟಿಗೆ ಅವಕಾಶ ಸಿಗಲಿದೆ‌. ಕಳೆದ ೧೦ ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಎಂದು ಉದ್ಯಮಿ ಮತ್ತು ಅಂತರರಾಷ್ಟ್ರೀಯ ರಫ್ತುದಾರರಾದ ಶ್ರೀನಿವಾಸ ಗುಪ್ತಾ ಸಂತಸ ವ್ತಕ್ತಪಡಿಸಿದ್ದಾರೆ.

Please follow and like us: