ಕೌತಾಳಂ ಖಾದರ್ಲಿಂಗ ಮಹಾಸ್ವಾಮಿಗಳು ಸ್ವರ್ಗಸ್ಥ- ಭಕ್ತರ ಕಂಬನಿ

ಕನ್ನಡನೆಟ್ :: ನಾಡಿನಾದ್ಯಂತ ಲಕ್ಷಾಂತರ ಭಕ್ತರು ಅಭಿಮಾನಿಗಳನ್ನು ಹೊಂದಿದ್ದ ಜಗದ್ಗುರುಗಳಾದ ಕೌತಾಳಂ ಖಾದರ್ಲಿಂಗ ಮಹಾಸ್ವಾಮಿಗಳು ನಿಧನರಾಗಿದ್ದಾರೆ.

ಖಾದರಲಿಂಗ ಮಹಾಸ್ವಾಮಿ ಎಂದೇ ಖ್ಯಾತರಾಗಿದ್ದ“ ಅಲ್‌ಹಾಜ್ ಹಜರತ್ ಖ್ವಾಜಾ ಸಯ್ಯದ ಷಾ ಸಾಹೇಬ ಪೀರ್ ಹುಸೇನಿ ಚಿಸ್ತೀ ಜಾಗೀರದಾರ ಸಜ್ಜದ ನಶೀನ್ ಮುತವಲ್ಲಿ ” ಕೌತಾಳಂ ನಲ್ಲಿ ದರ್ಗಾ ಇದೆ. ಅಲ್ಪಕಾಲದ ಅಸ್ವಸ್ಥತೆಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಭಕ್ತರನ್ನು ಅಗಲಿದ್ದಾರೆ.

ಭಾವೈಕ್ಯತೆಯ ಪ್ರತೀಕವಾಗಿದ್ದ ಸೂಫಿ ಶರಣ ಕೌತಾಳಂ ಖಾದರ್ಲಿಂಗ ಮಹಾಸ್ವಾಮಿಗಳು ಸ್ವರ್ಗಸ್ಥರಾಗಿರುವುದಕ್ಕೆ ಗಣ್ಯರು, ಭಕ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಕೌತಾಳಂ ಖಾದರ್ಲಿಂಗ ಮಹಾಸ್ವಾಮಿಗಳು ಸ್ವರ್ಗಸ್ಥರಾಗಿದ್ದಾರೆಂದು ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಇವರ ಅಗಲಿಕೆ ನಮ್ಮೆಲ್ಲರಿಗೆ ತುಂಬಲಾರದ ನಷ್ಟ. ಮತ್ತೆ ಹುಟ್ಟಿಬನ್ನಿ ಗುರುಗಳೇ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ-ಇಕ್ಬಾಲ್ ಅನ್ಸಾರಿ

Please follow and like us: