ಗುಂಡು ಹಾರಿಸಿ ಮಕ್ಕಳನ್ನು ಬೆದರಿಸಿದ ಸಚಿವನ ಮಗನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು:ವಿಡಿಯೋ ವೈರಲ್

ತೋಟವೊಂದರಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಓಡಿಸಲು ಗುಂಡು ಹಾರಿಸಿದ ಬಿಹಾರದ ಸಚಿವರೊಬ್ಬರ ಮಗನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಗುಂಡು ಹರಿಸಿರುವ ಎನ್ನಲಾದ ಬಂದೂಕನ್ನು ಸಹ ಕಸಿದುಕೊಂಡಿದ್ದಾರೆ. ಹಲ್ಲೆ ಮಾಡಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಬಿಜೆಪಿಯ ರಾಜ್ಯ ಪ್ರವಾಸೋದ್ಯಮ ಸಚಿವರಾಗಿರುವ ನಾರಾಯಣ್​ ಶಾ ಅವರ ಮಗ ಬಬ್ಲು ಕುಮಾರ್ ಗ್ರಾಮಸ್ಥರಿಂದ ಹಲ್ಲೆಗೊಳಗಾದ ವ್ಯಕ್ತಿ ಯಾಗಿದ್ದು ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಎದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಈ ವೇಳೆ ಮಕ್ಕಳು ಭಯಗೊಂಡು ಓಡಿ ಹೋಗಿದ್ದಾರೆ ಈ ಸಮಯದಲ್ಲಿ ಕಾಲ್ತುಳಿತದಿಂದಾಗಿ ಒಂದು ಮಗು ಸೇರಿದಂತೆ 6 ಮಕ್ಕಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.ಸರ್ಕಾರಿ ವಾಹನದಲ್ಲಿ ಬಂದಿದ್ದ ಸಚಿವರ ಮಗನನ್ನು ಗ್ರಾಮಸ್ಥರು ಓಡಿಸಿಕೊಂಡು ಹೋಗಿದ್ದಾರೆ. ಜೊತೆಗೆ ಸಚಿವರ ಹೆಸರಿನ ನಾಮಕಫಲಕವನ್ನೂ ಸಹ ಗ್ರಾಮಸ್ಥರು ಕಿತ್ತು ಹಾಕಿದ್ದಾರೆ. ಭಯಗೊಂಡ ಸಚಿವರ ಮಗ ವಾಹನವನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಶಾ, ತಮ್ಮ ಮಗನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಕರಣಗಳಿಗೆ ಯಾವುದೇ ಆಧಾರ ಇಲ್ಲ ನನ್ನ ಮಾನಹಾನಿ ಮಾಡುವ ರಾಜಕೀಯ ಪಿತ್ತೂರಿ ಎಂದು ಹೇಳಿದ್ದಾರೆ.
ಹಲ್ಲೆಗೊಳಗಾದ ಸಚಿವರ ಮಗ ಮತ್ತು ಸಹಚರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಗುಂಡು ಹಾರಿಸಿದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Please follow and like us: