ಐಎಎಸ್ ಅಧಿಕಾರಿಗಳ ವರ್ಗಾವಣೆ: ಒಕ್ಕೂಟ ಸರ್ಕಾರದಿಂದ ವ್ಯವಸ್ಥೆಗೆ ಹಾನಿ: ಮಮತ ಬ್ಯಾನರ್ಜಿ

ರಾಜ್ಯ ಸರ್ಕಾರಗಳ ಪೂರ್ವಾನುಮತಿ ಇಲ್ಲದೇ ಐಎಎಸ್‌ ಹಾಗೂ ಐಪಿಎಸ್ ‌ ಅಧಿಕಾರಿಗಳ ವರ್ಗಾವಣೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರವೇ ಇಟ್ಟುಕೊಳ್ಳಲು ಮುಂದಾಗಿರುವ ಕ್ರಮವು ದೇಶದ ಒಕ್ಕೂಟ ವ್ಯವಸ್ಥೆಗೆ ಹಾನಿ ಮಾಡುತ್ತದೆ ಎಂದು ಮಮತ ಬ್ಯಾನರ್ಜಿ ಹೇಳಿದ್ದಾರೆ.

ಸಂವಿಧಾನ ರಚನೆ ಮತ್ತು ರಾಜ್ಯಗಳ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದ್ದು ಕೇಂದ್ರ ಸರ್ಕಾರಕ್ಕೆ ಈ ಕುರಿತು ಎರಡನೇ ಪತ್ರವನ್ನ ಬರೆದಿದ್ದಾರೆ.

1954 ಐಎಎಸ್ ಕೇಡರ್ ನಿಯಮದ ಪ್ರಕಾರ ರಾಜ್ಯ ಸರ್ಕಾರಗಳಿಗೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರವಿತ್ತು , ಇಂದು ಕ್ರೇಂದ್ರ ಸರ್ಕಾರವು ಆ ಕಾಯ್ದೆಗೆ ತಿದ್ದುಪಡಿ ತಂದು ವರ್ಗಾವಣೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಕಾಯ್ದೆಯಲಿ ದಾಖಾಲು ಮಾಡಿದೆ. ರಾಜ್ಯ ಸರ್ಕಾರಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ ಮತ್ತು ಫೆಡರಲಿಸಂಗೆ ಇದು ವಿರುದ್ಧವಾಗಿದೆ ಹಾಗೂ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ; ಹಾಗಾಗಿ ಈ ಪ್ರಸ್ತಾಪವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿವೆ.

ಕೇಂದ್ರ ಸರ್ಕಾರವು ತಂದಿರುವ ತಿದ್ದುಪಡಿಯ ಪ್ರಕಾರ ವಿವಿಧ ರಾಜ್ಯಗಳ ಐಎಎಸ್ ಅಧಿಕಾರಿಗಳು ಕೇಂದ್ರ ವರ್ಗಾವಣೆ ಮಾಡುತ್ತದೆ ಎಂದು ತಿಳಿಸಿದ್ದು ಇದನ್ನು ವಿರೋಧಿಸಿ ಮಮತ ಬ್ಯಾನರ್ಜಿ ಇಂದೊಂದು ಏಕಪಕ್ಷೀಯ ನಿರ್ಧಾರ ತಕ್ಷಣವೆ ಕೈ ಬಿಡಬೇಕೆಂದು ಮನವಿ ಮಾಡಿದ್ದಾರೆ.

ಐಎಎಸ್-ಐಪಿಎಸ್ ಅಧಿಕಾರಿಗಳ ಹುದ್ದೆಯ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಇರುವ ಸಾಮರಸ್ಯವನ್ನು ಇದು ಹಾಳುಮಾಡುತ್ತದೆ ರಾಜ್ಯಗಳ ಆಡಳಿತದ ಮೇಲೆ ಪರಿಣಾಮ ಬೀರುವುದಲ್ಲದೆ, ರಾಜ್ಯದ ಆಡಳಿತವನ್ನು ನೆಡೆಸುವುದು ಅಸಾಧ್ಯವಾಗುತ್ತದೆ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Please follow and like us: