ಆಧುನಿಕ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು-ರಾಘವೇಂದ್ರ ಹಿಟ್ನಾಳ


ಶಹಪುರ ಗ್ರಾಮದಲ್ಲಿ ಶಾಸಕರಿಂದ ಸ್ಮಾರ್ಟ್‌ಕ್ಲಾಸ್ ಕೊಠಡಿ ಉದ್ಘಾಟನೆ ಹಾಗೂ ಭೂಮಿ ಪೂಜೆ
ಕೊಪ್ಪಳ : ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯಕವಾಗಿದ್ದು ಆದರೆ ಗ್ರಾಮೀಣ ಮಟ್ಟದಲ್ಲಿ ಶಿಕ್ಷಣದಿಂದ ವಂಚಿತರು ಹೆಚ್ಚಾಗಿರುವುದು ಕಂಡು ಬಂದಿದೆ. ಕಲಿಕಾ ವಿಷಯದಲ್ಲಿ ಉನ್ನತೀಕರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ಪ್ರತಿಯೊಂದು ಗ್ರಾಮದಲ್ಲಿ ಸ್ಮಾರ್ಟ್‌ಕ್ಲಾಸ್ ತೆರೆಯುವುದು ಅತ್ಯವಶ್ಯಕವಾಗಿದೆ. ಇದರ ಸದ್ಬಳಿಕೆಯನ್ನು ಶಿಕ್ಷಕರು ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಹಾಗೂ ಪಾಲಕರು ಪಾತ್ರ ಬಹಳ ಮಹತ್ವದಾಗಿದ್ದು ಮಕ್ಕಳನ್ನು ಕೂಲಿ ಕೆಲಸದ ಬದಲು ಶಾಲೆಗೆ ಕಳುಹಿಸಿ ಅವರ ಜೀವನವನ್ನು ಶೈಲಿಯನ್ನು ಉತ್ತಮಗೊಳಿಸಲು ಸಹಕಾರಿಯಾಗಬೇಕೆಂದು ಹೇಳಿದರು. ಆಧುನಿಕ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಶಿಕ್ಷಕರಿಗೆ ಮತ್ತು ಪಾಲಕರಿಗೆ ಕರೆ ನೀಡಿದರು .ಕೊಪ್ಪಳ ತಾಲೂಕಿನ ಶಹಪುರ ಗ್ರಾಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು ಸ್ಮಾರ್ಟ್‌ಕ್ಲಾಸ್ ಕೊಠಡಿ ಉದ್ಘಾಟನೆ ಹಾಗೂ ರೂ.೧೦.೬೦ ಅನುದಾನದ ಶಾಲಾ ಕೊಠಡಿಯ ಭೂಮಿ ಪೂಜೆ ನೇರವೆರಿಸಿ ಬಳಿಕ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರು ಶಾಂತಮ್ಮ ಕೃಷ್ಣಪ್ಪ ಮಡ್ಡಿ ನಗರಸಭಾ ಎಸ್‌ಡಿಎಮ್‌ಸಿ ಅಧ್ಯಕ್ಷರು ಮಲ್ಲಣ್ಣ ಕುರಿ ನಿಂಗಜ್ಜ ಚೌದ್ರಿ ಮುರುಳಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮುಖಂಡರು ಗುರುಹಿರಿಯರು ಉಪಸ್ಥಿತರಿದ್ದರು.Please follow and like us: