ಬ್ಯಾಂಕ್ ಸಾಲ ತೀರಿಸಲಾಗದೇ ಜಮೀನಿನಲ್ಲಿ ನೇಣಿಗೆ ಶರಣು


ಕೊಪ್ಪಳ : ತಾಲೂಕಿನ ಲೆಬಗೇರಿ ಗ್ರಾಮದ ನಾಗರಾಜ (೩೫) ಜಡಿಯಪ್ಪ ಚಿಲವಾಡಗಿ ಎಂಬಾತನು ಬ್ಯಾಂಕ್ ಸಾಲ ತೀರಿಸಲಾಗದೇ ಜಮೀನಿನಲ್ಲಿ ನೇಣಿಗೆ ಶರಣಾದ ಘಟನೆ ಇಂದು ನಡೆದಿದೆ.ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ ಇದ್ದಾರೆ. ಈ ಹಿಂದೆ ಇತನು ಅಂಚೆ ಕಚೇರಿಯಲ್ಲಿ ಕೆಲಸ ಮಾಡಿ ನಂತರ ಖಾಸಗಿ ಬ್ಯಾಂಕಿನಲ್ಲಿ ಕೊಪ್ಪಳ ಹಾಗೂ ಇರಕಲ್ಗಡದಲ್ಲಿ ಪಿಗ್ಮಿ ಏಜೆಂಟ್ ರಾಗಿ ಕೆಲಸ ಮಾಡುತ್ತಿದ್ದನು ಎನ್ನಲಾಗುತ್ತಿದೆ.
ಬ್ಯಾಂಕಿನಲ್ಲಿ ಒಟ್ಟು 28 ಲಕ್ಷಗಳ ಸಾಲ ಮಾಡಿದ್ದು, ಬ್ಯಾಂಕ್ ಸಾಲ ಕಟ್ಟಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿದ್ದಾನೆ. ಬ್ಯಾಂಕ್ ನವರ ಸಾಕಷ್ಟು ಕಿರುಕುಳದಿಂದ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Please follow and like us: