ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ : ರಾಜ್ಯಾಧ್ಯಕ್ಷರಾಗಿ ಜಿ.ಪಿ.ಪಾಟೀಲ,ಕಾರ್ಯಾಧ್ಯಕ್ಷರಾಗಿ ಸೋಮನಗೌಡ ಎಂ.ಪಾಟೀಲ ಆಯ್ಕೆ


ಕೊಪ್ಪಳ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಇಲಕಲ್ಲದ ಜಿ.ಪಿ.ಪಾಟೀಲ ಹಾಗೂ ಕಾರ್ಯಾಧ್ಯಕ್ಷರಾಗಿ ಕೊಪ್ಪಳದ ನಿವೃತ್ತ ಉಪನ್ಯಾಸಕ ಸೋಮನಗೌಡ ಎಂ.ಪಾಟೀಲ ಆಯ್ಕೆಯಾಗಿದ್ದಾರೆ.ಬುಧವಾರ ಬೆಂಗಳೂರಿನ ಸಂಘದ ಕಾರ್ಯಾಲಯದಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಇವರನ್ನು ಅವಿರೋಧವಾಗಿ ಅಯ್ಕೆ ಮಾಡಲಾಯಿತು. ಸಂತಸ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಇಲಕಲ್ಲದ ಜಿ.ಪಿ.ಪಾಟೀಲ ಹಾಗೂ ಕಾರ್ಯಾಧ್ಯಕ್ಷರಾಗಿ ಕೊಪ್ಪಳದ ನಿವೃತ್ತ ಉಪನ್ಯಾಸಕ ಸೋಮನಗೌಡ ಎಂ.ಪಾಟೀಲ ಆಯ್ಕೆಯಾಗಿದ್ದಕ್ಕೆ ರಾಜ್ಯ ಹರಸೈನ್ಯದ ಪ್ರಧಾನ ಕಾರ್ಯದರ್ಶಿಯಾದ ರುದ್ರಗೌಡ ವಿ.ಸೊಲಬಗೌಡ್ರು, ಯಲಬುರ್ಗಾ ತಾಲೂಕ ಹರಸೈನ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ ಬಿ.ನೆಲಾಗಣಿ, ಕೊಪ್ಪಳ ಜಿಲ್ಲಾ ಚುಟಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ದೇವರಾಜ ಹಾಲಸಮುದ್ರ ಸಂತಸ ವ್ಯಕ್ತಪಡಿಸಿದ್ದಾರೆ.Please follow and like us: