ಆಸ್ಟ್ರೇಲಿಯಾ ಟೆನ್ನಿಸ್ ಟೂರ್ನಿ ತನ್ನ ಕೊನೆಯ ಸರಣಿ ಎಂದ ಸಾನಿಯಾ: ನಿವೃತ್ತಿಯ ಸೂಚನೆ?

ಭಾರತದ ಪ್ರಸಿದ್ಧ ಮತ್ತು ವೃತ್ತಿಪರ ಟೆನ್ನಿಸ್ ಆಟಗಾರರಲ್ಲಿ ಒಬ್ಬರಾದ ಸಾನಿಯಾ ಮಿರ್ಜಾ 2022 ರ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‌ ಟೂರ್ನಿ ತಾವು ಆಡುವ ಕೊನೆಯ ಸರಣಿಯಾಗಲಿದೆ ಎಂದು ಪ್ರಕಟಿಸಿದ್ದಾರೆ.

35ರ ಹರೆಯದ ಸಾನಿಯಾ ಆಸ್ಟ್ರೇಲಿಯನ್ ಮಹಿಳಾ ಡಬಲ್ಸ್ ಟೆನ್ನಿಸ್‌ ಸರಣಿಯ ಮೊದಲ ಸುತ್ತಿನಲ್ಲಿ ಪರಬಾರೆಗೊಂಡ ನಂತರ ನಿವೃತ್ತಿಯ ಸೂಚನೆ ನೀಡಿದ್ದಾರೆ.ಸಾನಿಯಾ ಮತ್ತು ಅವರ ಸಹ ಆಟಗಾರ್ತಿ ಉಕ್ರೇನಿನ ನಾಡಿಯಾ ಕಿಚೆನೊಕ್ ಒಂದು ಗಂಟೆ 37 ನಿಮಿಷ ನಡೆದ ಪಂದ್ಯದಲ್ಲಿ 4-6, 6-7 (5) ಸೆಟ್‌ಗಳಿಂದ ಸ್ಲೊವೇನಿಯಾದ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ವಿರುದ್ಧ ಸೋಲನುಭವಿಸಿದ್ದಾರೆ.

‘ಸರಿ ನಾನು ಆಡಲು ಹೋಗುವುದಿಲ್ಲ’ ಎಂದು ಹೇಳುವುದು ಅಷ್ಟು ಸರಳವಲ್ಲ, ಇದಕ್ಕೆ ಕೆಲವು ಕಾರಣಗಳಿವೆ. ನನಗನ್ನಿಸುತ್ತಿದೆ ನಾನು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ನಾನು ಹೆಚ್ಚು ಓಡಾಡುವ ಮೂಲಕ ನನ್ನ 3 ವರ್ಷದ ಮಗನನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ. ನನ್ನ ದೇಹ ಕ್ಷೀಣಿಸುತ್ತಿದೆ ಎನ್ನಿಸುತ್ತಿದೆ. ಇಂದು ನನ್ನ ಮೊಣಕಾಲು ನಿಜವಾಗಿಯೂ ನೋಯುತ್ತಿದೆ. ವಯಸ್ಸಾದಂತೆ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಹಾಗೆಂದು ನಾನು ಸೋತಿದ್ದೇನೆಂದಲ್ಲ, ಆದರೆ ಈ ಅಂಶಗಳನ್ನು ನಾನು ಗಣನೆಗೆ ತೆಗೆದುಕೊಳ್ಳಬೇಕಿದೆ ಎಂದು ನಾನು ಭಾವಿಸುತ್ತೇನೆ” ಎಂದು ಸಾನಿಯಾ ವಿವರಿಸಿರುವುದಾಗಿ ಫಸ್ಟ್‌ಪೋಸ್ಟ್‌ ವರದಿ ಮಾಡಿದೆ.ನನ್ನ ಶಕ್ತಿಯು ಮೊದಲಿನಂತಿಲ್ಲ. ಇನ್ನು ಮುಂದೆ ಹಾಗಿರುವುದಿಲ್ಲ. ನಾನು ಯಾವಾಗಲೂ ಆಟವನ್ನು ಆನಂದಿಸುತ್ತೇನೆ. ಅಲ್ಲಿವರೆಗೆ ಆಡುತ್ತಿರುತ್ತೇನೆಂದು ನನಗೆ ನಾನು ಪ್ರೇರಣೆ ಪಡೆದುಕೊಳ್ಳುತ್ತಿರುತ್ತೇನೆ. ಆದರೆ ಈ ಪ್ರಕ್ರಿಯೆಯಲ್ಲಿ ನನಗೆ ಆಟವನ್ನು ಆನಂದಿಸಬಲ್ಲೆನೆಂಬ ನಂಬಿಕೆ ಇಲ್ಲ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ನಾನು ಈ ವರ್ಷದ ಸೀಸನ್‌ನಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತೇನೆ. ಯಾಕೆಂದರೆ ನಾನು ಈ ಟೂರ್ನಿಗಾಗಿ ಕಠಿಣ ಅಭ್ಯಾಸ ಮಾಡಿದ್ದೇನೆ. ತೂಕ ಇಳಿಸಿದ್ದೇನೆ, ಫಿಟ್ ಆಗಿ ಬರುವ ಮೂಲಕ ತಾಯಂದಿರಿಗೆ ಉತ್ತಮ ಮಾದರಿಯಾಗಿದ್ದೇನೆ. ಇತರೆ ತಾಯಿಂದಿರು ಸಹ ತಮ್ಮ ಕನಸುಗಳನ್ನು ಸಾಕ್ಷೀಕರಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಪಡಬೇಕು. ಈ ಸೀಸನ್ ಬಳಿಕ ನನ್ನ ದೇಹ ಸಮರ್ಥವಾಗಿರಬಲ್ಲದೆಂದು ನನಗೆ ಅನ್ನಿಸುತ್ತಿಲ್ಲ ಎಂದಿದ್ದಾರೆ.ಸಾನಿಯಾ 2003 ರಲ್ಲಿ ಟೆನ್ನಿಸ್‌ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆಟದಲ್ಲಿ ಅತಿ ಹೆಚ್ಚಿನ ಕ್ರಮಾಂಕ ಪಡೆದ ಭಾರತೀಯ ಮಹಿಳೆಯಾಗಿದ್ದಾರೆ . 11 ಡಬಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ವಿಶ್ವಕ್ರಮಾಂಕದಲ್ಲಿ ಮೊದಲ ಶ್ರೇಯಾಂಕ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಅವರಿಗಿದೆ. 2007ರಲ್ಲಿ ನಡೆದ ಸಿಂಗಲ್ಸ್‌ ಟೂರ್ನಿಯಲ್ಲಿ ಅವರು 27 ಅಂಕಗಳನ್ನು ಪಡೆದಿದ್ದು, ಅದು ಅವರು ಟೂರ್ನಿಗಳಲ್ಲಿ ಪಡೆದಿರುವ ಗರಿಷ್ಟ ಶೇಯಾಂಕವಾಗಿದೆ.

Please follow and like us: